Wednesday, March 4, 2026
Flats for sale
Homeರಾಜ್ಯತುಮಕೂರು : ತುಮಕೂರು- ಬೆಂಗಳೂರು ಕೆಎಸ್ ಆರ್ ಟಿಸಿ ಬಸ್ಸ್ ನಲ್ಲಿ ಯುವತಿಯ ಮುಂದೆ ಲೈಂಗಿಕ...

ತುಮಕೂರು : ತುಮಕೂರು- ಬೆಂಗಳೂರು ಕೆಎಸ್ ಆರ್ ಟಿಸಿ ಬಸ್ಸ್ ನಲ್ಲಿ ಯುವತಿಯ ಮುಂದೆ ಲೈಂಗಿಕ ವಿಕೃತಿ, ಕಾಮುಕನ ಬಂಧನ…!

ತಮಕೂರು ; ನಾನ್ ಸ್ಟಾಪ್ ಕೆಎಸ್‌ಆರ್ ಟಿಸಿ ಬಸ್ ನಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲರಂತಾಗಿದೆ, ಕೆಎಸ್ ಆರ್ ಟಿಸಿ ಬಸ್ ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ಹಿನ್ನೆಲೆ ಯುವಕನ ಬಂಧನವಾಗಿದೆ. ತುಮಕೂರು -ಬೆಂಗಳೂರು ನಾನ್ ಸ್ಟಾಪ್ ಬಸ್ ನಲ್ಲಿ ಸಹ ಪ್ರಯಾಣಿಕ ಯುವತಿ ಮೇಲೆ ಹಸ್ತಮೈಥನ ಮಾಡಿದ ಘಟನೆ ಶನಿವಾರ ರಾತ್ರಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಬಂಧಿತ ಯುವಕನನ್ನು ತುಮಕೂರಿನ ಕೃಷ್ಣ ನಗರ ನಿವಾಸಿ. ಜೀವನ್ ರಾಜ್(26) ಎಂದು ತಿಳಿದಿದೆ. ಯವತಿ ಮೇಲೆ ನೀಚ ಕೃತ್ಯವೆಸಗಿದ ಯುವಕನಿಗೆ ಪ್ರಯಾಣಿಕರಿಂದ ಧರ್ಮದೇಟು ಸಿಕ್ಕಿದೆ. ನವಯುಗ ಟೋಲ್ ಬಳಿ ಬರುವಾಗ ಬಸ್ ನಲ್ಲಿ ಗಲಾಟೆ‌ಯಾಗಿದ್ದು ಕೂಡಲೇ ಬಸ್ ನಿಲ್ಲಿಸಿ ಕಂಡಕ್ಟರ್ ಕಂ ಡ್ರೈವರ್ ಜಗದೀಶ್ ವಿಚಾರಿಸಿದ್ದಾರೆ.

ಯುವಕನನ್ನು ಮಹಿಳಾ ಪೊಲೀಸರಿಗೆ ಯುವತಿ ಪೋಷಕರು, ಪ್ರಯಾಣಿಕರು‌ ಒಪ್ಪಿಸಿದ್ದು ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular