Thursday, September 18, 2025
Flats for sale
Homeಕ್ರೈಂತುಮಕೂರು : ಡ್ರಾಗರ್ ತೋರಿಸಿ ಮೊಬೈಲ್ ದರೋಡೆ ಮಾಡಿದ ಆರೋಪಿಗೆ 7 ವರ್ಷ ಜೈಲು..!

ತುಮಕೂರು : ಡ್ರಾಗರ್ ತೋರಿಸಿ ಮೊಬೈಲ್ ದರೋಡೆ ಮಾಡಿದ ಆರೋಪಿಗೆ 7 ವರ್ಷ ಜೈಲು..!

ತುಮಕೂರು : ತಾಲ್ಲೂಕಿನ ದೇವರಾಯನದುರ್ಗದ ಬಳಿ ಪ್ರವಾಸಿಗರಿಗೆ ಡ್ರಾಗರ್ ತೋರಿಸಿ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದ ಆರೋಪಿಗೆ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಬಿ.ಎಸ್.ಪುನೀತ್ ಎಂಬಾತನೇ ಜೈಲು ಶಿಕ್ಷೆಗೆ ಗುರಿಯಾಗಿರುವ ಅಪರಾಧಿ. 2020ರ ಡಿ. 18 ರಂದು ಅಮಿತ್, ದಿಲೀಪ್ ಚೌದರಿ ಎಂಬುವರು ದೇವರಾಯನದುರ್ಗದ ಬಳಿ ಫೋಟೊ ತೆಗೆದುಕೊಳ್ಳುತ್ತಿದ್ದರು. ಇದೇ ಸಮಯದಲ್ಲಿ ಅಲ್ಲಿಗೆ ಬಂದ ಪುನೀತ್ ಮತ್ತು ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕ ಮೊಬೈಲ್ ನೀಡುವಂತೆ ಬೆದರಿಕೆ ಹಾಕಿದ್ದರು. ಪುನೀತ್ ದಿಲೀಪ್ ಕುತ್ತಿಗೆ ಬಳಿ ಡ್ರಾಗರ್ ಇಟ್ಟು ಮೊಬೈಲ್ ಕಿತ್ತುಕೊಂಡಿದ್ದ. ಈ ಕುರಿತು ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಸಂಬAಧ ತನಿಖೆ ನಡೆಸಿದ ಕ್ಯಾತ್ಸಂದ್ರ ಪೊಲೀಸರು ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಜಯಂತಕುಮಾರ್ ಅವರು ವಾದ?ಪ್ರತಿವಾದ ಆಲಿಸಿ ಆರೋಪ ಸಾಬೀತಾದ ಕಾರಣ ಆರೋಪಿ ಪುನೀತ್‌ಗೆ ಈ ಮೇಲಿನಂತೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular