ತುಮಕೂರು : ಗೃಹ ಸಚಿವ ಡಾ. ಜಿ. ಪರಮೇಶ್ವರ್ ಚಿತ್ರವನ್ನು ವಾಟ್ಸಾಪ್ ಡಿ.ಪಿ.ಗೆ ಹಾಕಿಕೊಂಡು ಆಂಧ್ರಪ್ರದೇಶದ ಮುಖ್ಯಮAತ್ರಿ ಕಚೇರಿಗೆ ಕರೆ ಮಾಡಿ ಸಚಿವರಂತೆ ಮಾತನಾಡಿ ತಿರುಪತಿ ದೇವಸ್ಥಾನಕ್ಕೆ ತೆರಳಲು ವಿಐಪಿ ಪಾಸ್ ಪಡೆದು ವಂಚಿಸುತ್ತಿದ್ದವರ ವಿರುದ್ಧ ಇಲ್ಲಿನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಯಲಹಂಕದ ಮಾರುತಿ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ನಗರ ಠಾಣೆ ಪೊಲೀಸರು ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.
ಸಚಿವರ ನಕಲಿ ಲೆಟರ್ ಹೆಡ್, ಸಹಿ ಸೃಷ್ಟಿಸಿ ವಂಚಿಸುತ್ತಿದ್ದರು. ಲೆಟರ್ ಹೆಡ್‌ನ್ನು ಆಂಧ್ರಪ್ರದೇಶದ ಮುಖ್ಯಮAತ್ರಿ ಕಚೇರಿಗೆ ವಾಟ್ಸಾಪ್‌ನಲ್ಲಿ ಕಳುಹಿಸಿದ್ದರು. ದೇವಸ್ಥಾನಕ್ಕೆ ಹೋಗಲು ವಿಐಪಿ ಪಾಸ್ ಪಡೆಯುತ್ತಿದ್ದರು.
ಸಚಿವರ ಹೆಸರು ದುರುಪಯೋಗ ಪಡಿಸಿಕೊಳ್ಳುತ್ತಿದ್ದರು. ದೇವರ ದರ್ಶನಕ್ಕೆ ಹೋಗುವ ಭಕ್ತರಿಂದ ಹಣ ಪಡೆದು ವಂಚಿಸುತ್ತಿದ್ದು, ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಕೆ. ನಾಗಣ್ಣ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಈ ಸುದ್ದಿ ತಿಳಿದ ನಂತರ ಆರೋಪಿ ಹತ್ತಿರ ವಿಚಾರಿಸಿದ್ದು, ಇದು ಬಹಿರಂಗವಾದರೆ ನಿಮ್ಮನ್ನು ಕೊಲೆ ಮಾಡಿಸುತ್ತೇನೆ. ಗೃಹ ಇಲಾಖೆ ಮುಖ್ಯಸ್ಥರೇ ನನ್ನಿಂದ ಇಂತಹ ಕೆಲಸ ಮಾಡಿಸಿದ್ದಾರೆ ಎಂದು ದೂರು ನೀಡುತ್ತೇನೆ. ಇದನ್ನು ಇಲ್ಲಿಗೆ ಮುಚ್ಚಿ ಹಾಕಲು ೨ ಲಕ್ಷ ಹಣ ನೀಡಬೇಕು. ಇಲ್ಲದಿದ್ದರೆ ನಿಮ್ಮನ್ನು ಜೈಲಿಗೆ ಕಳುಹಿಸಲಾಗುವುದು ಎಂದು ಬೆದರಿಕೆ ಹಾಕಿದ್ದರು ಎಂದು ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.