ತುಮಕೂರು : ರಾಜ್ಯದ ಗೃಹ ಸಚಿವ ಎನ್.ಪರಮೇಶ್ವರ್ ರವರ ಕ್ಷೇತ್ರ ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದ ಕಾಳಿದಾಸ ಬಡಾವಣೆಯಲ್ಲಿ ಪಾರಿವಾಳ ವಿಚಾರವಾಗಿ ಎರಡು ಗುಂಪಿನ ಯುವಕರ ನಡುವೆ ಗಲಾಟೆ ನಡೆದ ಘಟನೆ ನಡೆದಿದೆ.
ಸಂಜು ಎಂಬುವನು 2 ಸಾವಿರಕ್ಕೆ ಅಜಯ್ ಎಂಬುವನಿಂದ ಪಾರಿವಾಳ ಖರಿದಿಸಿದ್ದು ಪಾರಿವಾಳ ಪಡೆಯುವ ವೇಳೆ ಮುಂಗಡ 800 ರೂ ನೀಡಿದ್ದ ಉಳಿದ ಹಣ 1200 ರೂ ಅಜಯ್ ಗೆ ನೀಡಬೇಕಿದ್ದ ಸಂಜು ಉಳಿದ ಹಣ ಕೇಳಿದ್ದಕ್ಕೆ ಸಂಜು ಆಕ್ರೋಶಗೊಂಡು
ಲಾಂಗ್ ಸಹಿತ ಅಜಯ್ ಬಳಿ ಹೋಗಿ ಹಲ್ಲೆಗೆ ಮುಂದಾದ ಸಂಜು ಅಂಡ್ ಗ್ಯಾಂಗ್ ಮುಂದಾಗಿದ್ದಾನೆ.ಸಂಜು ಸೇರಿ ಆರು ಮಂದಿ ಯುವಕರು ಅಜಯ್ ಮೇಲೆ ಸಿನಿಮೀಯ ಶೈಲಿಯಲ್ಲಿ ಹಲ್ಲೆಗೆ ಯತ್ನ ಮಾಡಿದ್ದರು.ಈ ವೇಳೆ ಅಡ್ಡಬಂದ ಅಜಯ್ ಭಾವ ಸಂಪತ್ ರವರ ಕೈಗೆ ಗಂಭೀರ ಗಾಯ ಗೊಂಡಿದ್ದಾರೆ .
ಸಂಪತ್ ರವರನ್ನು ಕೊರಟಗೆರೆ ಆಸ್ಪತ್ರೆ ದಾಖಲಿಸಿದ್ದಾರೆ, ಸ್ಥಳಕ್ಕೆ ಕೊರಟಗೆರೆ ಪೊಲೀಸರು ಭೇಟಿ ನೀಡಿದ್ದುಪುಂಡಾಟ ಮೆರೆದಿದ್ದ ಗ್ಯಾಂಗ್ನಲ್ಲಿ ಇದ್ದವರನ್ನು ಕೊರಟಗೆರೆ ಪೊಲೀಸರು ಪಿಎಸ್ ಐ ಚೇತನ್ ನೇತೃತ್ವದಲ್ಲಿ ಬಂಧಿಸಿದ್ದಾರೆ.
ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


