ತುಮಕೂರು : ತುಮಕೂರು ತಾಲ್ಲೂಕಿನ ಸ್ಟೇಜ್ – 2ನಲ್ಲಿ ನಡೆದ ಜೆಜೆಎಂ ಕಾಮಗಾರಿ ಅವ್ಯವಹಾರ ನಡೆದಿದೆ ಎಂದು ಈ ಸಂಬಂಧ ಕ್ಷೇತ್ರದ ಬಿಜೆಪಿ ಶಾಸಕ ಸುರೇಶ್‌ಗೌಡ ಧ್ವನಿ ಎತ್ತಿದ್ದಾರೆ.
ಶ್ರೀನಿವಾಸ ರೆಡ್ಡಿ, ಷಣ್ಮುಖ, ಸಂದೀಪ್ ಹಾಗೂ ಪುಟ್ಟೇಗೌಡ ಹಣ ಡ್ರಾ ಮಾಡಿದ ಗುತ್ತಿಗೆದಾರರು ಕಾಮಗಾರಿ ಮಾಡದೇ ಶೇ. 90ರಷ್ಟು ಬಿಲ್ ಡ್ರಾ ಮಾಡಿಕೊಂಡು ಪರಾರಿಯಾಗಿದ್ದರೆಂದು ಗಂಭೀರ ಆರೋಪ ಕೇಳಿಬಂದಿದೆ.
ಸುರೇಶ್‌ಗೌಡ ಅವರ ಆರೋಪಕ್ಕೆ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ ಧ್ವನಿಗೂಡಿಸಿದ್ದು ಕೂಡಲೇ ಗುತ್ತಿಗೆದಾರರಿಗೆ 1 ಟು 4 ನೊಟೀಸ್ ಕೊಡುವಂತೆ ಸಿಇಒ ಪ್ರಭುಗೆ ಸೂಚನೆ ನೀಡಿದ್ದಾರೆ. ಅಲ್ಲದೆ, ಗುತ್ತಿಗೆದಾರರ ವಿರುದ್ಧ ದೂರು ದಾಖಲು ಮಾಡುವಂತೆಯೂ ಖಡಕ್ ಸೂಚನೆ ನೀಡಿದ್ದಾರೆ.
ಜಿ ಪಂನಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪರಂ ಖಡಕ್ ಸೂಚನೆ neediddu ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ ಪರಂ ಆಕ್ರೋಶಹೊರಹಾಕಿದ್ದಾರೆ.


