ತುಮಕೂರು : ಆಂಬ್ಯುಲೆನ್ಸ್ ಸಿಗದ ಪರಿಣಾಮ ಬೈಕ್ ನಲ್ಲೇ ಮಕ್ಕಳು ಶವ ಸಾಗಿಸಿದ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ವೈ.ಎನ್ ಹೊಸಕೋಟೆಯಲ್ಲಿ ನಡೆದಿದೆ.
ಅನಾರೋಗ್ಯದ ಕಾರಣ ಹೊನ್ನೂರಪ್ಪನನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.ಹೊನ್ನೂರಪ್ಪ (80) ವೈ.ಎನ್ ಹೊಸಕೋಟೆಯ ಆರೋಗ್ಯ ಕೇಂದ್ರದಲ್ಲಿ ಮೃತಪಟ್ಟಿದ್ದರು. ಮೃತದೇಹ ಸಾಗಿಸಲು ಆಂಬ್ಯುಲೆನ್ಸ್ ಸಿಗದ ಕಾರಣ ಮಧ್ಯದಲ್ಲಿ ಕುರಿಸಿಕೊಂಡು ವೈ.ಎನ್ ಹೊಸಕೋಟೆಯಿಂದ ದಳವಾಯಿಹಳ್ಳಿಗೆ ಕೂರಿಸಿ ಸಾಗಿಸಿದ್ದಾರೆ .ರಾಜ್ಯದಲ್ಲಿ ಇಷ್ಟೊಂದು ಉಚಿತ ಆಂಬುಲೆನ್ಸ್ ಇರುವಾಗ ಇಂತಹ ಘಟನೆ ನಡೆದದ್ದು ಸರಕಾರಕ್ಕೆ ಮುಖಭಂಗವಾದಂತಾಗಿದೆ.
ಮೃತ ಶರೀರವನ್ನು ಮನೆಗೆ ಸಾಗಿಸಲು 108 ಆಂಬ್ಯುಲೆನ್ಸ್ ಸಿಬ್ಬಂದಿ ನಿರಾಕಿಸಿದ್ದಾರೆ. ಮೃತದೇಹವನ್ನು ಆಂಬ್ಯುಲೆನ್ಸ್ನಲ್ಲಿ ಸಾಗಿಸುವಂತಿಲ್ಲ ಎಂದಿದ್ದಾರೆ. ಕೈಯಲ್ಲಿ ಹಣವಿಲ್ಲದೇ ಕೊನೆಗೆ ಹೊನ್ನೂರಪ್ಪ ಮಕ್ಕಳು ವಿಧಿಯಿಲ್ಲದೆ ತಂದೆ ಶವವನ್ನು ಬೈಕ್ ನಲ್ಲೇ ತೆಗೆದುಕೊಂಡು ಮನೆ ಹೋಗಿದ್ದಾರೆ.ವೈ.ಎನ್ ಹೊಸಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ,ಘಟನೆಯ ಚಿತ್ರಣ ಸಾಮಾಜಿಕಜಾಲತಾಣದಲ್ಲಿ ವೈರಲ್ ಆಗಿದೆ .


