Saturday, March 7, 2026
Flats for sale
Homeಕ್ರೈಂತುಮಕೂರು ; ಅತಿಥಿ ಶಿಕ್ಷಕ ಮರಿಯಪ್ಪ ಕೊಲೆ ಪ್ರಕರಣ ,ಪತ್ನಿ ಜೊತೆ ಸೇರಿ ಸುಪಾರಿ ಕೊಟ್ಟ...

ತುಮಕೂರು ; ಅತಿಥಿ ಶಿಕ್ಷಕ ಮರಿಯಪ್ಪ ಕೊಲೆ ಪ್ರಕರಣ ,ಪತ್ನಿ ಜೊತೆ ಸೇರಿ ಸುಪಾರಿ ಕೊಟ್ಟ ಮಗಳ ಬಂಧನ.

ತುಮಕೂರು ; ಜಿಲ್ಲೆಯ ಕುಳಿನಂಜಯ್ಯನ ಪಾಳ್ಯದಲ್ಲಿ ಅಮವಾಸ್ಯೆ ಪೂಜೆ ಮುಗಿಸಿ ವಾಪಸ್ ಗ್ರಾಮಕ್ಕೆ ಬರುತ್ತಿದ್ದ ಮರಿಯಪ್ಪನ ಬೈಕ್ ಅಡ್ಡಗಟ್ಟಿ ಮುಖಕ್ಕೆ ಪೆಪ್ಪರ್ ಸ್ಪ್ರೇ ಹೊಡೆದು ಅಟ್ಟಾಡಿಸಿದ ಆರೋಪಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ‌ಕೊಲೆ ಮಾಡಿದ ಘಟನೆಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ.ಈ ಬಗ್ಗೆ ತನಿಖೆ ಆರಂಭಿಸಿ ಪೊಲೀಸರಿಗೆ ಮರಿಯಪ್ಪ ಅವರ ಕೊಲೆಗೆ ಸುಪಾರಿ ಕೊಟ್ಟಿದ್ದೇ ಪತ್ನಿ ಹಾಗೂ ಮಗಳು ಎನ್ನುವ ವಿಚಾರ ತಿಳಿದುಬಂದಿದೆ.

ಮರಿಯಪ್ಪ ಅವರ ಮಗಳು ಹೇಮಲತಾ ಕುಳಿನಂಜಯ್ಯನ ಪಾಳ್ಯದ ನಿವಾಸಿ ಶಾಂತಕುಮಾರ್‌ ಎಂಬಾತನ್ನನು ಪ್ರೀತಿಸುತ್ತಿದ್ದಳು. ಇದಕ್ಕೆ ಮರಿಯಪ್ಪ ವಿರೋಧ ವ್ಯಕ್ತಪಡಿಸಿದ್ದು, ಇದರಿಂದ ಶಾಂತಕುಮಾರ್​ ಮರಿಯಪ್ಪ ಮೇಲೆ ದ್ವೇಷ ಬೆಳೆದಿದೆ.ಅದರಂತೆ ಸ್ನೇಹಿತರ ಜೊತೆಗೂಡಿ ಮರಿಯಪ್ಪ ಕೊಲೆಗೆ ಸಂಚು ರೂಪಿಸಿದ್ದ ಎಂದು ತಿಳಿದುಬಂದಿದೆ . ಈ ಸಂಚಿನ ಹಿಂದೆ ಮರಿಯಪ್ಪ ಅವರ ಮಗಳು ಹೇಮಲತಾ ಹಾಗೂ ಪತ್ನಿ ಶೋಭಾ ಕೈಜೋಡಿಸಿದ್ದು ತನಿಖೆಯಲ್ಲಿ ಬಯಲಾಗಿದೆ.

ಕೊಲೆಗೂ ಮುನ್ನ ಮರಿಯಪ್ಪನ ಚಲನ ವಲನಗಳ ಬಗ್ಗೆ ಪತ್ನಿ-ಮಗಳು ಮಾಹಿತಿ ನೀಡಿದ್ದು,ಶಾಂತಕುಮಾರ್ ಸ್ನೇಹಿತ‌ರಾದ ಬೆಂಗಳೂರಿನಲ್ಲಿ ವಾಸವಿದ್ದ ಸಂತು, ಹೇಮಂತ್​ಗೆ ಕೊಲೆ ಸುಫಾರಿ ನೀಡಿದ್ದನು. ಹೇಮಂತ್ ಕಾನೂನು ಸಂಘರ್ಷಕ್ಕೆ ಒಳಪಟ್ಟ ಮೂರು ಬಾಲಕರನ್ನು ಬಳಸಿಕೊಂಡು ಫೆಬ್ರವರಿ 10 ರಂದು ಕೊಲೆ ಮಾಡಿದ್ದಾನೆ .

ಈ ಬಗ್ಗೆ ತಂದೆಯ ಕೊಲೆ ತನಿಖೆ ನಡೆಸಿ ಆರೋಪಿಗಳನ್ನ ಬಂಧಿಸುವಂತೆ ಮಗಳು ಹೇಮಲತಾ ದೂರು ನೀಡಿದ್ದಳು,ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹೇಮಲತಾಳ ಮೇಲೆ ಅನುಮಾನ ಪಡಿಸಿದ್ದರು,ಅದರಂತೆ ಹೇಮಲತಾ ಪ್ರೇಮ ಪ್ರಕರಣದ ಜಾಡು ಹಿಡಿದು ತನಿಖೆ ನಡೆಸಿದ್ದಾಗ ಕೊಲೆ ಪ್ರಕರಣ ಬಯಲಾಗಿದೆ. ಪ್ರಕರಣ ಸಂಬಂಧ ಶಾಂತಕುಮಾರ್, ಸಂತು, ಹೇಮಂತ್, ಶೋಭಾ, ಹೇಮಲತಾ ಹಾಗೂ ಮೂವರು ಬಾಲಕರನ್ನು ಪೊಲೀಸರು ಬಂಧಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular