Thursday, March 12, 2026
Flats for sale
Homeದೇಶತಿರುವನಂತಪುರಂ ; ವಿಷ ಹಾಕಿ ಪ್ರಿಯಕರನನ್ನು ಕೊಂದ ಪ್ರೇಯಸಿಗೆ ಮರಣ ದಂಡನೆ ..!

ತಿರುವನಂತಪುರಂ ; ವಿಷ ಹಾಕಿ ಪ್ರಿಯಕರನನ್ನು ಕೊಂದ ಪ್ರೇಯಸಿಗೆ ಮರಣ ದಂಡನೆ ..!

ತಿರುವನಂತಪುರಂ ; ಕೇರಳದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವ ಬಾಯ್‌ಫ್ರೆಂಡ್ ಕೊಲೆ ಪ್ರಕರಣದಲ್ಲಿ ನೆಯ್ಯತ್ತಿಂಕರದ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಮಹಿಳೆಗೆ ಮರಣದಂಡನೆ ಶಿಕ್ಷೆ ವಿಧಿಸಿದೆ. ೨೪ ವರ್ಷದ ಗ್ರೀಷ್ಮಾಗೆ ಜೀವಾವಧಿ ಶಿಕ್ಷೆಯಾಗಿದ್ದರೆ, ಈಕೆಯ ಚಿಕ್ಕಪ್ಪ ಮೂರನೇ ಆರೋಪಿ ನಿರ್ಮಲಕುಮಾರನ್ ನಾಯರ್‌ಗೂ ಮೂರು ವರ್ಷಗಳ ಕಾರಾಗೃಹವಾಸ ಶಿಕ್ಷೆ ನೀಡಲಾಗಿದೆ.

ಕೊಲೆಯಾಗಿದ್ದು ಹೇಗೆ
2022 ರಲ್ಲಿ ಪರಶಾಲಾ ನಿವಾಸಿಯಾಗಿದ್ದ ಶರಣ್‌ರಾಜ್‌ನನ್ನು ಜ್ಯೂಸ್‌ನಲ್ಲಿ ಪ್ಯಾರಾಸಿಟ ಮಾಲ್ ಮಾತ್ರೆಗಳನ್ನು ಹಾಕಿ ಕುಡಿಸಲು ಗ್ರೀಷ್ಮ ಪ್ರಯತ್ನಿಸಿದ್ದಳು. ಕಹಿ ಇದ್ದುದರಿಂದ ಕುಡಿಯಲು ನಿರಾಕರಿಸಿದ್ದರಿಂದ ಮೊದಲ ಕೊಲೆ ಪ್ರಯತ್ನ ವಿಫಲವಾಗಿತ್ತು. ಇದೇ ವರ್ಷ ಅಕ್ಟೋಬರ್ ೧೪ ರಂದು ಕನ್ಯಾಕುಮಾರಿ ಜಿಲ್ಲೆಗೆ ರಾತ್ರೆ ಮನೆಗೆ ಕರೆಸಿಕೊಂಡಿದ್ದ ಗ್ರೀಷ್ಮಾ ಆರ್ಯುರ್ವೇದ ಔಷಧಿಯಲ್ಲಿ ವಿಷ ಬೆರೆಸಿ ಕುಡಿಸಿದ್ದಳು. ಇದರಿಂದ ಬಹು ಅಂಗಾಂಗ ವೈಫಲ್ಯ ಉಂಟಾಗಿದ್ದು 11 ದಿನಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಪ್ರಯೋಜನವಾಗದೆ ಮೃತಪಟ್ಟಿದ್ದ.

ಕೊಲೆಗೆ ಕಾರಣ
ಗ್ರೀಷ್ಮಾಗೆ ಬೇರೆ ಯುವಕನೊಂದಿಗೆ ಮದುವೆ ನಿಶ್ಚಯವಾಗಿತ್ತು. ಆದರೆ ಶರಣ್ ಆಕೆಯಿಂದ ದೂರವಾಗಲು ನಿರಾಕರಿಸಿದ್ದಕ್ಕೆ ಈ ಕೊಲೆ ನಡೆದಿತ್ತು.

RELATED ARTICLES

LEAVE A REPLY

Please enter your comment!
Please enter your name here

Most Popular