ತಿರುವನಂತಪುರಂ : ಕೈಗೆ ಬಂದ ಲಾಟರಿ ಬಾಯಿಗೆ ಬರಲಿಲ್ಲ 25 ಕೋಟಿ ರೂಪಾಯಿ ಮೊತ್ತದ ಮೊದಲ ಬಹುಮಾನ ವಿಜೇತ ಲಾಟರಿ ಟಿಕೆಟ್ ಕಾಳಸಂತೆಯಲ್ಲಿ ಲಾಟರಿ ಪಡೆದ ಆರೋಪದ ಬಗ್ಗೆ ತನಿಖೆ ನಡೆಸಲು ಕೇರಳ ಲಾಟರಿ ಇಲಾಖೆ ನಿರ್ಧರಿಸಿದೆ. ಇತರ ರಾಜ್ಯಗಳ ಜನರು ಇಲ್ಲಿಂದ ಕೇರಳ ಲಾಟರಿಗಳನ್ನು ಖರೀದಿಸಬಹುದಾದರೂ, ಮಾರಾಟವನ್ನು ರಾಜ್ಯಕ್ಕೆ ಸೀಮಿತಗೊಳಿಸಲಾಗಿದೆ. ಆದಾಗ್ಯೂ, ಅನೇಕ ಘಟಕಗಳು ಒಳಗೊಂಡಿವೆ ಎಂದು ಹೇಳಲಾಗಿದೆ. ಈ ವರ್ಷದ ಓಣಂ ಬಂಪರ್ ಪ್ರಥಮ ಬಹುಮಾನ ವಿಜೇತರು ತಮಿಳುನಾಡಿನವರು ಎಂಬುದನ್ನು ಗಮನಿಸಬಹುದು. ತಮಿಳುನಾಡಿನ ಮೂಲದವರು ಬೃಂದಾ ಚಾರಿಟೆಬಲ್ ಟ್ರಸ್ಟಿನ ಮಾಲಕರು ಕೇರಳ ಸಿಎಂ ಹಾಗೂ ಕೇರಳ ಲಾಡರಿ ನಿರ್ದೇಶನಸಲಯಕ್ಕೆ ದೂರುನೀಡಿದ್ದು ಇಲ್ಲಿ ಕೇರಳದ ಬಾವಾ ಏಜಿನ್ಸಿಯಿಂದ ಕಮಿಷನ್ ಆಧಾರದಲ್ಲಿ ಪಡೆದ ಟಿಕೇಟ್ಗಳನ್ನು ತಮಿಳುನಾಡಿನ ಕೆಲವು ಭಾಗಗಳಲ್ಲಿ ಮಾರಾಟ ಮಾಡಲಾಗಿದ್ದ ಪ್ರಯುಕ್ತ ಪ್ರಥಮ ಬಹುಮಾನ ಬಂದಿದ್ದು ಇದರ ಬಗ್ಗೆ ತನಿಖೆ ನಡೆಸಬೇಕೆಂದು ದೂರಿನಲ್ಲಿ ಲಿಖಿತವಾಗಿದೆ. ಲಾಟರಿ ಇಲಾಖೆಯಲ್ಲಿ ಸರ್ಕಾರವು ಐದು ಸದಸ್ಯರ ವಿಶೇಷ ಶಾಶ್ವತ ಸಮಿತಿಯನ್ನು ಹೊಂದಿದ್ದು ಎಲ್ಲಾ ವಿಧಾನಗಳನ್ನು ಅನುಸರಿಸಿದ ನಂತರವೇ ಬಹುಮಾನದ ಹಣ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೋಯಿಕ್ಕೋಡ್ ನ ಪಾಲಯಂನಲ್ಲಿರುವ ಬಾವಾ ಏಜೆನ್ಸಿ ಯಿಂದ ಮಾರಟವಾದ YE 230662 ಟೀಕೆಟ್ ಪಡೆದ ತಮಿಳುನಾಡಿನ ತಿರುಪುರ್ ಮೂಲದ ಪಾಂಡ್ಯರಾಜ್ ,ಕುಪ್ಪು ಸ್ವಾಮಿ ಮತ್ತು ಕೊಯಮುತ್ತೂರು ಮೂಲದ ಸ್ವಾಮಿನಾಥನ್ ಮತ್ತು ರಾಮಸ್ವಾಮಿ ಜಂಟಿಯಾಗಿ ಲಾಟರಿಯನ್ನು ಖರಿದಿದಿದ್ದರು.ಇದೀಗ 25 ಕೋಟಿ ಬಂಪರ್ ಬಂದಿದ್ದು Black Market ನಲ್ಲಿ ಟೀಕೆಟ್ ಪಡೆದಿದ್ದಾರೆ ಎಂಬ ಆರೋಪದ ಹಿನ್ನೆಲೆ ಕಂಟಕ ಎದುರಾಗಿದ್ದು ಇದರ ಬಗ್ಗೆ ತನಿಖೆ ನಡೆಯುತ್ತಿದೆ, ಇಲ್ಲಿ ಅರೋಪ ಸಾಬೀತಾದರೆ ಪಾಲಿಗೆ ಬಂದ 25 ಕೋಟಿ ರೂಪಾಯಿ ಬಂಪರ್ ಲಾಟರಿಯ ಹಣ ಸಿಗುವುದು ಅನುಮಾನವೆಂಬುದು ವಿಶ್ಲೇಷಕರ ಮಾತು.


