ಮೇಷ ರಾಶಿ:
ಹನ್ನೆರಡನೇ ಮನೆಯಲ್ಲಿ ನಾಲ್ಕು ಗ್ರಹಗಳು ಸೇರಿರುವುದರಿಂದ ನೀವು ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ಖರ್ಚು ಹೆಚ್ಚು. ಮಾನಸಿಕ ಕಳವಳ ಇರುತ್ತದೆ. ಗಂಡಸರು ತಂದೆಯ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಬೇಕು. ತಂದೆಯ ಆರೋಗ್ಯಕ್ಕೆ ಆಪತ್ತು ಕಂಟಕ ಇರುತ್ತದೆ. ಮೇಷರಾಶಿಯವರಿಗೆ ಸಾಡೆಸಾತಿಯ ಪ್ರಾರಂಭವಾಗಿದೆ. ಹೀಗಾಗಿ ಪ್ರತಿಯೊಂದು ವಿಷಯದಲ್ಲೂ ಎಚ್ಚರಿಕೆ ಅಗತ್ಯ. ಪ್ರತಿಯೊಂದು ಹೆಜ್ಜೆಯನ್ನೂ ಯೋಚಿಸಿ ಇಡಿ. ಕೌಟುಂಬಿಕ ಸೌಖ್ಯ ಕಾಪಾಡಿಕೊಳ್ಳಿ.
ವೃಷಭ ರಾಶಿ:
ಹನ್ನೊಂದನೇ ಮನೆಯಲ್ಲಿ ನಾಲ್ಕು ಗ್ರಹಗಳು ಇರುತ್ತವೆ. ಇದು ನಿಮಗೆ ಅದೃಷ್ಡ ಕೊಡುತ್ತದೆ. ರಾಜಯೋಗ ಕೊಡುತ್ತದೆ. ಹಣದ ಹರಿವು ಬಹಳ ಚೆನ್ನಾಗಿದೆ. ವೃತ್ತಿಯಲ್ಲಿ ಯಶಸ್ಸು ಇದೆ. ವಿದೇಶ ಪ್ರಯಾಣ ಯೋಗ ಇದೆ. ಯಾರು ನಿಮ್ಮ ತಂಟೆಗೆ ಬರುವುದಿಲ್ಲ. ಶತ್ರುಗಳು ನಾಶವಾಗುತ್ತಾರೆ. ಗುರು ನಿಮ್ಮ ರಾಶಿಯಲ್ಲೇ ಇರುವುದರಿಂದ ಮಾನಸಿಕ ಒತ್ತಡ ಇರುತ್ತದೆ.
ಮಿಥುನ ರಾಶಿ:
ಹತ್ತನೇ ಮನೆಯಲ್ಲಿ ನಾಲ್ಕು ಗ್ರಹಗಳು ವಾರ ಪೂರ್ತಿ ಇರುತ್ತದೆ. ಸೂರ್ಯ ಲಾಭಸ್ಥಾನದಲ್ಲಿ ಇದ್ದಾನೆ. ದಶಮಸ್ಥಾನದಲ್ಕಿ ಗ್ರಹಗಳ ಸಂಯೋಗ ವೃತ್ತಿಯಲ್ಲಿ ಯಶಸ್ಸನ್ನು ಕೊಡುತ್ತದೆ. ವೃತ್ತಿಯಲ್ಲಿ ಶತ್ರುಗಳನ್ನು ನಿವಾರಣೆ ಮಾಡುತ್ತದೆ. ಲಾಭಸ್ಥಾನದ ಸೂರ್ಯನಿಂದ ಒಳಿತು ಆಗುತ್ತದೆ. ಆದರೆ ನಿಮಗೆ ಇನ್ನೂ ಕೊಂಚ ಪರೀಕ್ಷೆಯ ದಿನಗಳು ಇವೆ. ಜಾಗ ಬದಲಾವಣೆಯ ಯೋಗ ಇದೆ. ಇದರಿಂದ ನಿಮ್ಮ ಮನಸ್ಸಿಗೆ ಸಂತೋಷ ಸಮಾಧಾನ ಸಿಗುತ್ತದೆ.
ಕಟಕ ರಾಶಿ:
ಒಂಬತ್ತನೇ ಮನೆಯಲ್ಲಿ ನಾಲ್ಕು ಗ್ರಹಗಳು ಇರುತ್ತದೆ. ಉಚ್ಚ ಶುಕ್ರ ಇರುವುದರಿಂದ ದೂರಪ್ರಯಾಣದ ಯೋಗ ಇದೆ. ನಿಮ್ಮ ರಾಶಿಯಲ್ಲೇ ನೀಚ ಕುಜ ಇರುವುದು ಆರೋಗ್ಯಕ್ಕೆ ಹಾನಿ. ಮನಸ್ಸು ಕೆಡುಕನ್ನು ಚಿಂತಿಸುವAತೆ ಆಗುತ್ತದೆ. ಲಾಭಸ್ಥಾನದಲ್ಲಿ ಗುರು ಇರುವುದರಿಂದ ನೀವು ಅಂದುಕೊAಡ ಕೆಲಸಗಳನ್ನು ಸಾಧಿಸುತ್ತೀರಿ. ಮೂರನೇ ಮನೆಯಲ್ಲಿ ಕೇತು ಹಣ ಕೊಡುತ್ತಾನೆ. ಸಮಯ ಬಹಳ ಚೆನ್ನಾಗಿದೆ ಅನುಕೂಲಕರವಾಗಿ ಉಪಯೋಗಿಸಿಕೊಳ್ಳಿ.
ಸಿಂಹ ರಾಶಿ:
ನಿಮಗೆ ಅಷ್ಠಮ ಶನಿಯ ಪ್ರಾರಂಭವಾಗಲಿದೆ. ಎಂಟನೇ ಮನೆಯಲ್ಲಿ ಶುಕ್ರ ಶನಿ ರಾಹು ಬುಧ ಹೀಗೆ ಪರಸ್ಪರ ಶತ್ರು ಗ್ರಹಗಳು ಸೇರಿರುವುದರಿಂದ ಕೊಂಚ ಮುನ್ನೆಚ್ಚರಿಕೆ ಅಗತ್ಯ. ಆರೋಗ್ಯ ಹಣಕಾಸು ಕುಟುಂಬದ ಸೌಖ್ಯ ವೃತ್ತಿ ಹೀಗೆ ಯಾವುದಕ್ಕೆ ಬೇಕಾದರೂ ಧಕ್ಕೆ ಬರಬಹುದು. ಸಾಧ್ಯವಾದಷ್ಟು ಧ್ಯಾನ ಪೂಜೆ ವಿಷ್ಣು ಸಹಸ್ರನಾಮ ಪಠನೆ ಮಾಡಿ. ಇನ್ನೂ ಎರಡು ತಿಂಗಳ ನಂತರ ನಿಮಗೆ ಕ್ಲಿಷ್ಟಕರ ಪರಿಸ್ಥಿತಿ ಕೊಂಚ ತಿಳಿಯಾಗುತ್ತದೆ. ಗುರುಬಲ ಬರುವುದರಿಂದ ತುಸು ಹಗುವಾಗುತ್ತದೆ.
ಕನ್ಯಾ ರಾಶಿ:
ಏಳನೇ ಮನೆಯಲ್ಲಿ ನಾಲ್ಕು ಗ್ರಹಗಳ ಸಂಯೋಗ ಈ ವಾರ ಪೂರ್ತಿಇರುತ್ತದೆ. ಇದರಲ್ಲಿ ನಿಮ್ಮ ರಾಶಿಯ ಅಧಿಪತಿ ಬುಧ ನೂ ಇದ್ದಾನೆ. ಬುಧ ಹಾಗೂ ಶುಕ್ರರ ದೃಷ್ಟಿ ನಿಮ್ಮ ರಾಶಿಯ ಮೇಲೆ ನೇರವಾಗಿ ಬೀಳುವುದರಿಂದ ಯಾವುದೇ ಭಯ ಬೇಡ. ಕುಟುಂಬದಲ್ಲಿ ಸೌಖ್ಯ, ಹಣಕಾಸಿನ ಉತ್ತಮ ಹರಿವು, ಮನಸ್ಸಿಗೆ ಸಂತೋಷ ಉಲ್ಲಾಸ ಎಲ್ಲವೂ ಇರುತ್ತದೆ.
ತುಲಾ ರಾಶಿ:
ಆರನೇ ಮನೆಯಲ್ಲಿ ನಾಲ್ಕು ಗ್ರಹಗಳು ನಿಮಗೆ ಅದೃಷ್ಟದ ಕಾಲ. ಪಂಚಮ ಶನಿಯಿಂದ ಬಿಡುಗಡೆ ಹೊಂದಿದ್ದೀರಿ. ಶತ್ರುಗಳ ಕಾಟ ಕಡಿಮೆಯಾಗುತ್ತದೆ. ನೀವು ಪ್ರಯತ್ನ ಮಾಡುತ್ತಿದ್ದ ಕೆಲಸಗಳು/ ಯೋಜನೆಗಳು ಫಲಪ್ರದವಾಗುತ್ತದೆ. ಹಣದ ಹರಿವು ಉತ್ತಮವಾಗಿದೆ. ಬಹಳ ಕಷ್ಟ ಪಟ್ಟಿದ್ದೀರಿ. ಈಗ ಕಷ್ಟಗಳು ನಿವಾರಣೆ ಆಗುವ ಕಾಲ. ಬಂಧುಬಳಗದವರಿAದ ಪ್ರಶAಸೆ, ವೃತ್ತಿಯಲ್ಲಿ ಯಶಸ್ಸು, ಪ್ರವಾಸ ವಿಹಾರ ಯಾತ್ರೆಗಳು ಎಲ್ಲವೂ ಇವೆ.
ವೃಶ್ಚಿಕ ರಾಶಿ:
ಐದನೇ ಮನೆಯಲ್ಲಿ ನಾಲ್ಕು ಗ್ರಹಗಳ ಸಂಯೋಗ. ಶನಿ ಮತ್ತು ರಾಹು ಐದನೇ ಮನೆಯಲ್ಲಿ ಇರುವುದು ಕ್ಷೇಮವಲ್ಲ. ಶುಕ್ರ ಬುಧ ಐದನೇ ಮನೆ ಶುಭಫಲಗಳು ಸಿಗುತ್ತದೆ. ಮಕ್ಕಳ ಜೊತೆ ಭಿನ್ನಾಭಿಪ್ರಾಯ ಅನುಭವಿಸುತ್ತೀರಿ. ಶುಕ್ರ ಹಾಗೂ ಬುಧ ಐದನೇ ಮನೆಯಲ್ಲಿ ಇರುವುದು ನಿಮಗೆ ಸ್ವಲ್ಪ ನಿರಾಳತೆ ಕೊಡುತ್ತದೆ. ಸಂಗಾತಿಯಿAದ ಬೆಂಬಲ ಸಹಾಯ ಪಡೆಯುತ್ತೀರಿ. ಲಾಭಸ್ಥಾನದಲ್ಲಿ ಕೇತು ಇದ್ದಾನೆ. ಹಣಕಾಸಿಗೆ ತೊಂದರೆ ಇಲ್ಲ. ದೂರ ಪ್ರಯಾಣ ಇದೆ. ವೃತ್ತಿಯಲ್ಲಿ ಯಶಸ್ಸು ಇದೆ.
ಧನಸ್ಸು ರಾಶಿ:
ಇದುವರೆಗೂ ಮೂರನೇ ಮನೆಯಲ್ಲಿ ಇದ್ದ ಶನಿ ನಾಲ್ಕನೇ ಮನೆಗೆ ಬಂದಿದ್ದಾನೆ. ಸ್ವಲ್ಪ ದೈಹಿಕ ಶ್ರಮ ಕಷ್ಟ ಶುರುವಾಗುತ್ತದೆ. ಬಿಸಿಲುಮಳೆ ಗಾಳಿ ಎನ್ನದೆ ಕೊಂಚ ಅಲೆದಾಟ ಇರುತ್ತದೆ ನಿದ್ರಾಹೀನತೆ, ಒತ್ತಡಗಳು ಇರುತ್ತದೆ. ಕೆಲವು ದಿನಗಳ ನಂತರ ರಾಹು ಮೂರನೇ ಮನೆಗೆ ಬಂದಾಗ ಹಣದ ಹರಿವು ಉತ್ತಮವಾಗುತ್ತದೆ. ಚತುರ್ಥ ಶನಿಯಿಂದ ಅಶಾಂತಿಯ ವಾತಾವರಣ. ಅನಾರೋಗ್ಯ, ಮುಂದೆ ಗುರುಬಲ ಬಂದಾಗ ಪರಿಸ್ಥಿತಿ ಗಳು ನಿಮ್ಮ ನಿಯಂತ್ರಣಕ್ಕೆ ಬರುತ್ತದೆ.
ಮಕರ ರಾಶಿ:
ಮೂರನೇ ಮನೆಗೆ ಶನಿ ಬಂದಿರುವುದರಿAದ ನೀವು ಧೈರ್ಯವಾಗಿ ಇರಬಹುದು. ಸಾಡೆಸಾತಿ ಶನಿಯಿಂದ ಸAಪೂರ್ಣ ಬಿಡುಗಡೆಯಾಗಿದೆ. ಈಗ ನಿಮಗೆ ಅಭಿವೃದ್ಧಿಯ, ಯಶಸ್ಸಿನ ಸಮಯ. ನೀವು ಅಂದುಕೊAಡು ಆಗದೆ ಉಳಿದ ಕೆಲಸಗಳು ಈಗ ಮರು ಚಾಲನೆ ಪಡೆದು ಜಯದ ಹಾದಿಯಲ್ಲಿ
ಸಾಗುತ್ತದೆ. ಗುರುಬಲ ಇದೆ, ಮೂರನೇ ಮನೆಯ ರಾಹು ಹಾಗೂ ಶನಿ ಜತೆಗೂಡಿ ಏನೋ ಒಂದು ಪವಾಡ ಸದೃಶವಾದ ಘಟನೆ ನಡೆದು ನಿಮಗೆ ಒಂದು ದೊಡ್ಡ ಅವಕಾಶದ ಬಾಗಿಲು ತೆರೆಯುತ್ತದೆ. ಹಣದ ಹರಿವು ಉತ್ತಮವಾಗುತ್ತದೆ. .
ಕುಂಭ ರಾಶಿ:
ನಿಮ್ಮ ರಾಶಿಯಲ್ಲೇ ಇದ್ದ ಶನಿ ಈಗ ಮುಂದಿನ ರಾಶಿಗೆ ಚಲಿಸಿದ್ದಾನೆ ಸಾಡೆಸಾತಿ ಶನಿಯ ಐದುವರ್ಷಗಳ ಹಂತ ಮುಗಿಯಿತು. ಈಗ ಕೊಂಚ ಬಿಡುಗಡೆಯ ಭಾವ. ಎರಡನೇ ಮನೆಯಲ್ಲಿ ನಾಲ್ಕು ಗ್ರಹಗಳು ಇದ್ದು ನಾನಾ ಮೂಲಗಳಿಂದ ಧನಲಾಭ. ಕುಟುಂಬ ಸೌಖ್ಯ, ಮನೆಯಲ್ಲಿ ನೆಮ್ಮದಿಯ ವಾತಾವರಣ ಇರುತ್ತದೆ. ಯಾವುದೋ ನಿಮ್ಮನ್ನು ತೀರಾ ಕಾಡಿಸುತ್ತಿರುವ ವಿಷಯದಿಂದ ಬಿಡುಗಡೆ, ಅಥವಾ ನಿಮಗೆ ಕಾಟ/ಹಿಂಸೆ ಕೊಡುತ್ತಿರುವ ವ್ಯಕ್ತಿಯಿಂದ ಬಿಡುಗಡೆ.
ಮೀನ ರಾಶಿ:
ಇಷ್ಡು ದಿನ 12 ನೇ ಮನೆಯಲ್ಲಿ ಇದ್ದ ಶನಿ ಈಗ ನಿಮ್ಮ ರಾಶಿಗೇ ಬಂದಿದ್ದಾನೆ. ಇನ್ನೂ ನಿಮಗೆ ಸಾಡೆಸಾತಿ ಶನಿಯಿಂದ ಬಿಡುಗಡೆ ಇಲ್ಲ. ಖರ್ಚುಗಳು ಹೆಚ್ವು. ಸವಾಲುಗಳ ಮಹಾಪೂರವೇ ನಿಮ್ಮದುರುಇದೆ. ಹಣಕಾಸಿಗೆ ತುಂಬಾ ಒತ್ತಡ ಇರುತ್ತದೆ. ನಿಮ್ಮ ರಾಶಿಯಲ್ಲೇ ನಾಲ್ಕು ಗ್ರಹಗಳು ಇದ್ದು ಇದರಿಂದ ನಿಮಗೆ ಅಲ್ಪಮಟ್ಟದ ಉಪಕಾರ ಆಗಲಿದೆ. ಕಷ್ಟ ಒತ್ತಡಗಳಿಂದ ತಾತ್ಕಾಲಿಕ ಉಪಶಮನ ಸಿಗುತ್ತದೆ.