Monday, October 20, 2025
Flats for sale
Homeರಾಶಿ ಭವಿಷ್ಯತಾ. 25.05.2025 ರಿಂದ 31.05.2025 ವರೆಗೆ ವಾರಭವಿಷ್ಯ

ತಾ. 25.05.2025 ರಿಂದ 31.05.2025 ವರೆಗೆ ವಾರಭವಿಷ್ಯ

ಮೇಷ ರಾಶಿ
ಈ ವಾರದ ಜ್ಯೋತಿಷ್ಯ ಫಲ ನೋಡುವುದಾದರೆ ಈ ವಾರ ನಿಮಗೆ ಮಿಶ್ರಫಲಿತಾಂಶ. ಕೆಲವೊಂದು ಆರೋಗ್ಯ ಸಮಸ್ಯೆಗಳಿರಬಹುದು. ನೀವು ಆರೋಗ್ಯದ ಕಡೆಗೆ ಗನಹರಿಸಿ. ಆರ್ಥಿಕವಾಗಿಯೂ ಈ ಅವಧಿ ಒಳ್ಳೆಯದಲ್ಲ. ನೀವು ಹಣವನ್ನು ಹೆಚ್ಚು ಖರ್ಚು ಮಾಡಲು ಹೋಗದಿರಿ. ಕೆಲಸದಲ್ಲಿ ನೋಡುವುದಾದರೆ ಈ ಅವಧಿ ನಿಮಗೆ ಯಾವುದೇ ತೊಂದರೆಯಿಲ್ಲ. ನಿಮ್ಮ ಕೆಲಸವನ್ನು ಮೆಚ್ಚಿಕೊಳ್ಳುತ್ತಾರೆ.

ವೃಷಭ ರಾಶಿ
ಕೆಲಸದಲ್ಲಿ ನೀವು ಜಾಗ್ರತೆವಹಿಸಬೇಕು. ಕೆಲಸದ ಜಾಗದಲ್ಲಿ ಅನೇಕ ಸವಾಲುಗಳು ಬರಬಹುದು, ಈ ಅವಧಿಯಲ್ಲಿ ನಿಮ್ಮ ಕಾರ್ಯಕ್ಷಮತೆಯಲ್ಲಿ ಸ್ವಲ್ಪ ಇಳಿಕೆಯಾಗುವ ಸಾಧ್ಯತೆಯಿದೆ. ಸಣ್ಣ ವ್ಯಾಪಾರಿಗಳಿಗೆ ಈ ಅವಧಿ ಚೆನ್ನಾಗಿರಲಿದೆ.ಯಾವುದೇ ಕಾನೂನುಬಾಹಿರ ಕೆಲಸ ಮಾಡಬೇಡಿ, ವೈವಾಹಿಕ ಜೀವನದಲ್ಲಿಯೂ ಭಿನ್ನಾಭಿಪ್ರಾಯಗಳಿರಬಹುದು.ಕುಟುಂಬದಲ್ಲಿ ಮೂರನೇಯ ವ್ಯಕ್ತಿಯ ಸಲಹೆ ಕೇಳಬೇಡಿ, ನಿಮ್ಮ ಸಮಸ್ಯೆ ನೀವೇ ಬಗೆಹರಿಸಿ.

ಮಿಥುನ ರಾಶಿ
ಈ ಅವಧಿ ನಿಮಗೆ ಶುಭವಾಗಿದೆ, ಕುಟುಂಬದಲ್ಲಿ ಸAತೋಷದ ವಾತಾವರಣ ಇರಲಿದೆ. ವ್ಯಾಪಾರಿಗಳಿಗೆ ಧನ ಲಾಭವಾಗಲಿದೆ. ಉದ್ಯೋಗಿಗಳಿಗೆ ಕೆಲಸದ ಒತ್ತಡವಿರಲಿದೆ, ಆದರೆ ಈ ಸಮಯದಲ್ಲಿ ಮಾಡಿದ ಕಠಿಣ ಕೆಲಸವು ನಿಮ್ಮ ಪ್ರಗತಿಯನ್ನು ನಿರ್ಧರಿಸುತ್ತದೆ. ಹಣಕಾಸಿನ ಸ್ಥಿತಿ ಬಲವಾಗಿರಲಿದೆ. ನಿಮ್ಮ ಆದಾಯ ಹೆಚ್ಚಾಗಬಹುದು. ಪೂರ್ವಿಕರ ಆಸ್ತಿಗೆ ಸಂಬAಧಿಸಿದ ಕೆಲವು ವಿಷಯಗಳು ಬಗೆಹರಿಯುವ ಸಾಧ್ಯತೆ ಇದೆ. ಆರೋಗ್ಯ ಚೆನ್ನಾಗಿರಲಿದೆ.

ಕರ್ಕ ರಾಶಿ
ಎಲ್ಲಾ ರೀತಿಯಿಂದಲೂ ಈ ವಾರ ನಿಮಗೆ ತುಂಬಾ ಉತ್ತಮವಾಗಿರಲಿದೆ, ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ನೀವು ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯುತ್ತೀರಿ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ಕೆಲಸದಲ್ಲಿ ಅಧಿಕ ಒತ್ತಡವಿದ್ದು ಈ ಏಳು ದಿನಗಳು ಉದ್ಯೋಗಿಗಳಿಗೆ ತುಂಬಾ ಕಾರ್ಯನಿರತವಾಗಿರುತ್ತದೆ. ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ.

ಸಿಂಹ ರಾಶಿ
ನೀವು ಅನಗತ್ಯ ವಿಷಯಗಳ ಕಡೆ ಗಮನ ನೀಡದಿರುವುದೇ ಒಳ್ಳೆಯದು, ನೀವು ನಿಮ್ಮ ಕೆಲಸದ ಕಡೆಗೆ ಗಮನಹರಿಸಿ. ಉದ್ಯೋಗಿಗಳಿಗೆ ಬಡ್ತಿ ಸಿಗಬಹುದು, ಆದಾಯ ಹೆಚ್ಚಾಗಲಿದೆ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತಿದ್ದರೆ ಈ ಸಮಯದಲ್ಲಿ ಯಾವುದೇ ರಿಸ್ಕ್ ತೆಗೆದುಕೊಳ್ಳದಿರುವುದು ಒಳ್ಳೆಯದು. ನೀವು ಸ್ಟಾಕ್ ಮಾರುಕಟ್ಟೆಗೆ ಸಂಬAಧಿಸಿದ ಕೆಲಸವನ್ನು ಮಾಡಿದರೆ ನೀವು ದೊಡ್ಡ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ವೈವಾಹಿಕ ಜೀವನದ ಕಡೆಗೆ ಗಮನಹರಿಸಬೇಕು,

ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಈ ವಾರ ಮಿಶ್ರ ಫಲಿತಾಂಶ. ಎದುರಾಗಿರುವ ಸಮಸ್ಯೆಯನ್ನು ತಾಳ್ಮೆಯಿಂದ ಬಗೆಹರಿಸಿ. ವ್ಯಾಪಾರಿಗಳು ತಮ್ಮ ವ್ಯವಹಾರದಲ್ಲಿ ಯಾವುದೇ ಬದಲಾವಣೆ ಮಾಡಲು ಹೋಗದಿರುವುದು ಒಳ್ಳೆಯದು. ಅಲ್ಲದೆ ವ್ಯಾಪಾರದ ಕಾರಣಕ್ಕೆ ಈ ವಾರ ಮಾಡುವ ಪ್ರಯಾಣದಿಂದ ಹಣ ನಷ್ಟವಾಗುವುದು, ಆದ್ದರಿಂದ ಈ ವಾರ ಪ್ರಯಾಣ ಮಾಡದಿರುವುದು ಒಳ್ಳೆಯದು. ನೀವು ವಿದೇಶಕ್ಕೆ ಹೋಗಿ ಉದ್ಯೋಗ ಮಾಡಲು ಬಯಸಿದರೆ ನಿಮ್ಮ ಪ್ರಯತ್ನ ಮುಂದುವರೆಸಿ. ಆರೋಗ್ಯದ ಕಡೆಗೆ ಗಮನಹರಿಸಿ.

ತುಲಾ ರಾಶಿ
ಕೌಟುಂಬಿಕ ಜೀವನ ಚೆನ್ನಾಗಿರಲಿದೆ. ಪ್ರೇಮಿಗಳು ಮದುವೆ ಬಗ್ಗೆ ತೀರ್ಮಾನ ಕೈಗೊಳ್ಳಬಹುದು. ಕೆಲಸದಲ್ಲಿ ಯಾವುದೇ ಅಡೆತಡೆ ಇರಬಹುದು. ವ್ಯಾಪಾರಿಗಳಿಗೆ ಈ ವಾರ ಧನಾತ್ಮಕವಾಗಿರಲಿದೆ. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ಆರೋಗ್ಯದ ದೃಷ್ಟಿಯಿಂದ ಈ ಏಳು ದಿನಗಳು ನಿಮಗೆ ಒಳ್ಳೆಯದು.

ವೃಶ್ಚಿಕ ರಾಶಿ
ಉದ್ಯೋಗಿಗಳಿಗೆ ಈ ವಾರ ಉತ್ತಮವಾಗಿರಲಿದೆ, ನಿಮ್ಮ ಆದಾಯವೂ ಹೆಚ್ಚಾಗುವ ಸಾಧ್ಯತೆಯಿದೆ. ಈ ವಾರ ವ್ಯಾಪಾರಿಗಳು ಬಹಳ ಜಾಗರೂಕರಾಗಿರಲು ಸಲಹೆ ನೀಡಲಾಗುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಆದರೆ ಅತಿಯಾದ ಖರ್ಚು ಸಮಸ್ಯೆ ತರಬಹುದು. ವೈವಾಹಿಕ ಜೀವನ ಚೆನ್ನಾಗಿರಲಿದೆ. ವೈವಾಹಿಕ ಜೀವನ ಚೆನ್ನಾಗಿರಲಿದೆ, ಆರೋಗ್ಯ ಸರಾಸರಿಯಾಗಿರಲಿದೆ.

ಧನು ರಾಶಿ
ಹಣದ ವಿಷಯದಲ್ಲಿ ಇಮದು ನಿಮಗೆ ಉತ್ತಮವಾಗಿದೆ. ಕೆಲಸಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣವಾಗಲಿದೆ. ವ್ಯಾಪಾರಿಗಳಿಗೆ ಈ ದಿನ ಸರಾಸರಿಯಿರಲಿದೆ. ಸಂಬAಧ ದುರ್ಬಲವಾಗಿರಲಿದೆ, ನಿಮ್ಮ ಸಂಗಾತಿಯ ಭಾವನೆಗಳಿಗೆ ದುರ್ಬಲವಾಗಿರಲಿದೆ. ಈ ಅವಧಿಯಲ್ಲಿ, ಆರೋಗ್ಯಕ್ಕೆ ಸಂಬAಧಿಸಿದAತೆ, ಯಾವುದೇ ದೊಡ್ಡ ಸಮಸ್ಯೆ ಕಂಡುಬರುವುದಿಲ್ಲ.

ಮಕರ ರಾಶಿ
ನೀವು ವಿದ್ಯಾರ್ಥಿಯಾಗಿದ್ದರೆ ಅಧ್ಯಯನದ ಕಡೆಗೆ ಗಮನಹರಿಸಿ. ಉದ್ಯೋಗಿಗಳಿಗೆ ಈ ವಾರವು ಏರಿಳಿತಗಳಿಂದ ತುಂಬಿರುತ್ತದೆ. ಆ ಉದ್ಯೋಗ ಬದಲಾಯಿಸಲು ಪ್ರಯತ್ನಿಸುತ್ತಿದ್ದರೆ ಈ ಅವಧಿಯಲ್ಲಿ ಹೊಸ ಅವಕಾಶ ದೊರೆಯಲಿದೆ. ಕೌಟುಂಬಿಕ ಜೀವನದಲ್ಲಿ ಪರಿಸ್ಥಿತಿಗಳು ಒತ್ತಡದಿಂದ ಕೂಡಿರಲಿದೆ. ವಾರದ ಕೊನೆಯಲ್ಲಿ ನಿಮ್ಮ ಆರೋಗ್ಯವು ಇದ್ದಕ್ಕಿದ್ದಂತೆ ಹದಗೆಡಬಹುದು. ಆದ್ದರಿಂದ ಆರೋಗ್ಯದ ಕಡೆಗೆ ತುಂಬಾನೇ ಗಮನಹರಿಸಬೇಕು.

ಕುಂಭ ರಾಶಿ
ಕುಟುಂಬ ಜೀವನ ಚೆನ್ನಾಗಿರಲಿದೆ. ಪ್ರೇಮಿಗಳಿಗೆ ಈ ಸಮಯ ತುಂಬಾ ವಿಶೇಷವಾಗಿರುತ್ತದೆ. ನೀವು ಒಂಟಿಯಾಗಿದ್ದರೆ, ನೀವು ಪ್ರೀತಿಯ ಪ್ರಸ್ತಾಪವನ್ನು ಪಡೆಯುವ ಸಾಧ್ಯತೆಯಿದೆ. ಹಣಕ್ಕೆ ಸಂಬAಧಿಸಿದ ಚಿಂತೆಗಳಿAದ ನೀವು ಪರಿಹಾರವನ್ನು ಪಡೆಯುತ್ತೀರಿ. ನೀವು ಹೊಸ ಆದಾಯದ ಮೂಲವನ್ನು ಪಡೆಯಬಹುದು. ಆಸ್ತಿ ಸಂಬAಧಿತ ಕೆಲಸದಲ್ಲಿ ಕೆಲಸ ಮಾಡುವ ಜನರು ಲಾಭ ಗಳಿಸಲು ಅನೇಕ ಅವಕಾಶಗಳನ್ನು ಪಡೆಯುತ್ತಾರೆ. ಉದ್ಯೋಗಿಗಳಿಗೆ ಈ ಅವಧಿ ಉತ್ತಮವಾಗಿರಲಿದೆ. ಆರೋಗ್ಯ ಉತ್ತಮವಾಗಿರಲಿದೆ.

ಮೀನ ರಾಶಿ
ಉದ್ಯೋಗಿಗಳು ಸಮಯದ ಕಡೆಗೆ ಹೆಚ್ಚಿನ ಗಮನಹರಿಸಬೇಕು. ಅನಗತ್ಯ ವಿಷಯಗಳಲ್ಲಿ ನಿಮ್ಮ ಸಮಯವನ್ನು ವ್ಯರ್ಥ ಮಾಡುವ ಬದಲು, ನಿಮ್ಮ ಪ್ರಮುಖ ಕಾರ್ಯಗಳ ಮೇಲೆ ಕೇಂದ್ರೀಕರಿಸಿ. ಈ ಅವಧಿಯಲ್ಲಿ ನೀವು ಕೆಲಸದ ಬಗ್ಗೆ ಸ್ವಲ್ಪ ನಿರ್ಲಕ್ಷ÷್ಯ ವಹಿಸಿದರೆ, ನೀವು ಪರಿಣಾಮಗಳನ್ನು ಅನುಭವಿಸಬೇಕಾಗಬಹುದು. ವ್ಯಾಪಾರಿಗಳಿಗೆ ಮಿಶ್ರಫಲ. ಯಾವುದೇ ಕಾನೂನು ಬಾಹಿರ ಕೆಲಸ ಮಾಡದಂತೆ ಸೂಚಿಸಲಾಗಿದೆ. ವೈವಾಹಿಕ ಜೀವನ ಚೆನ್ನಾಗಿರಲಿದೆ. ಅವಾಹಿತರಿಗೆ ಮದುವೆಯ ಪ್ರಸ್ತಾಪವು ಬರಬಹುದು.

RELATED ARTICLES

LEAVE A REPLY

Please enter your comment!
Please enter your name here

Most Popular