ಮೇಷ ರಾಶಿ
ಎರಡರಲ್ಲಿ ಗುರು, ಆರರಲ್ಲಿ ಕೇತು, ಏಳರಲ್ಲಿ ಸೂರ್ಯ ಬುಧ ಎಂಟರಲ್ಲಿ ಶುಕ್ರ ಸಮಯ ಬಹಳ ಚೆನ್ನಾಗಿ ಇದೆ. ಹೊಸ ಕೆಲಸ ಸಿಗುವುದು, ವಿವಾಹ ನಿಷ್ಕರ್ಷೆ ಆಗುವುದು, ಬಡ್ತಿ ದೊರೆಯುವುದು ಮೊದಲಾದ ಶುಭ ಸಂಗತಿಗಳು ಇವೆ. ನಿಮ್ಮ ದಶಾಭುಕ್ತಿ ನೋಡಿಕೊಳ್ಳಿ. ಸ್ವಭಾವತಃ ನೀವು ಗಟ್ಡಿ ಮನಸ್ಸಿನವರು. ನಿಮ್ಮನ್ನು ಕದಲಿಸಲು ಯಾರಿಂದಲೂ ಸಾಧ್ಯವಿಲ್ಲ. ನಿಮ್ಮ ದೃಢಮನಸ್ಸೇ ನಿಮಗೆ ಕಷ್ಟಗಳನ್ನು ಮೆಟ್ಟಿ ನಿಲ್ಲುವ ಶಕ್ತಿ ಕೊಡುತ್ತದೆ.
ವೃಷಭ ರಾಶಿ
ಲಾಭ ಸ್ಥಾನದಲ್ಲಿ ರಾಹು, ಆರರಲ್ಲಿ ಸೂರ್ಯ, ಮೂರನೇ ಮನೆಯಲ್ಲಿ ಕುಜ ಸಮಯ ಬಹಳ ಚೆನ್ನಾಗಿದೆ. ಮನೆಯಲ್ಲಿ ಶುಭಕಾರ್ಯಗಳು ನಡೆಯುತ್ತದೆ. ಖರ್ಚುಗಳು ಇದ್ದರೂ ಅದಕ್ಕೆ ತಕ್ಕಂತ ಆದಾಯವೂ ಇದೆ. ನೀವು ಸ್ವಭಾವತಃ ಭಾವುಕರು. ಕೋಪವನ್ನು ನೋವನ್ನು ಎಷ್ಟೋ ತಡೆಯುತ್ತೀರಿ. ಆದರೆ ಒಮ್ಮೆ ನೀವು ಸಿಡಿದರೆ ಎದುರು ನಿಲ್ಲಲು ಯಾರಿಂದಲೂ ಸಾಧ್ಯವಿಲ್ಲ.
ಮಿಥುನ ರಾಶಿ
ನೀವು ಈಗ ಕೊಂಚ ಎಚ್ಚರಿಕೆಯ ನಡೆ ಇಡಬೇಕು. ಖರ್ಚು ಇದೆ ಬೇರೆ ಆದಾಯ ಮೂಲವೂ ಸದ್ಯಕ್ಕೆ ಕಾಣುತ್ತಿಲ್ಲ. ಆದರೆ ಐದನೇ ಮನೆಯಲ್ಲಿ ಬುಧ ಇರುವುದು ಕೊಂಚ ಮಟ್ಟಿಗೆ ನಿಮಗೆ ಸಹಕಾರಿ ಆಗಿದೆ. ನೀವು ಚಂಚಲ ಸ್ವಭಾವದವರು. ಇದು ನಿಮಗೆ ತೊಂದರೆಗಳನ್ನು ತಂದು ಹಾಕುತ್ತದೆ. ಈಗಸಡಿದ ನಿರ್ಧಾರ ಇನ್ನೊಂದು ಕ್ಷಣಕ್ಕೆ ಮರೆತು ಬೇರೆ ವಿಷಯದಲ್ಲಿ ಮಗ್ನರಾಗಿಬಿಡುವಿರಿ.
ಕಟಕ ರಾಶಿ
ನಿಮ್ಮ ರಾಶಿಯಲ್ಲೇ ಮಂಗಳ ಬಲಹೀನನಾಗಿ ಇದ್ದಾನೆ. ಇದು ಸ್ವಲ್ಪ ನಿಮಗೆ ಹಿನ್ನಡೆ ಕೊಡುತ್ತದೆ. ಆದರೆ ಗುರು ಹನ್ನೊಂದನೇ ಮನೆಯಲ್ಲಿ, ಬುಧ ಸೂರ್ಯ ನಾಲ್ಕನೇ ಮನೆಯಲ್ಲಿ ಹಾಗೂ ಕೇತು ಮೂರನೇ ಮನೆಯಲ್ಲಿ ಇರುವು ಧನಲಾಭಕ್ಕೆ ಸಹಕಾರಿಯಾಗಿದೆ. ನೀವು ದೃಢಮನಸ್ಸಿನವರು. ಇದೇ ನಿಮ್ಮ ಶಕ್ತಿ. ನಿಮ್ಮ ನಿರ್ಧಾರದಿಂದ ಒಂದಿAಚೂ ಆಚೀಚೆ ಸರಿಯುವುದಿಲ್ಲ. ಇದೇ ನಿಮ್ಮನ್ನುಮುನ್ನಡೆಸಿಕೊಂಡು ಹೋಗುತ್ತದೆ.
ಸಿಂಹ ರಾಶಿ
ಮೂರರಲ್ಲಿ ಸೂರ್ಯ ಬುಧ ನಾಲ್ಕರಲ್ಲಿ ಶುಕ್ರ ಸಮಯ ಚೆನ್ನಾಗಿದೆ. ಹಿಸ ವಾಹನಕೊಳ್ಳುವುದು ಮಾರುವುದು ಪ್ರಕ್ರಿಯೆ ಲಾಭ ಕೊಡುತ್ತದೆ. ಮೂರರಲ್ಲಿ ಸೂರ್ಯ ಎದುರಿಸುವ ಸಾಮರ್ಥ್ಯ ಕೊಡುತ್ತಾನೆ. ಹತ್ತರಲ್ಲಿ ಗುರು ಅಷ್ಡು ಪ್ರಯೋಜನಕಾರಿ ಅಲ್ಲ. ವೃತ್ತಿಯಲ್ಲಿ ಒತ್ತಡಗಳನ್ನು ಕೊಡುತ್ತಾನೆ. ನೀವು ಸ್ವಭಾವತಃ ಕಡುಕೋಪಿಗಳು. ನಿಮಗೆ ಆಗದ್ದು ಕಂಡರೆ ಸಿಡಿದು ಬೀಳುತ್ತೀರಿ.
ಕನ್ಯಾ ರಾಶಿ
ಈಗ ನಿಮಗೆ ಆರರಲ್ಲಿ ಶನಿ, ಒಂಬತ್ತನೇ ಮನೆಯಲ್ಲಿ ಗುರು ಇರುವುದು ಬಹಳ ಲಾಭ ಕೊಡುತ್ತಿದೆ. ಮುಂದೆ ರಾಹು ಕೂಡ ಆರನೇ ಮನೆಗೆ ಪ್ರವೇಶವಾಗುತ್ತಾನೆ. ಆಗ ನಿಮಗೆ ಇನ್ನೂ ಹೆಚ್ಚಿನ ಧನಲಾಭ ಆಗುತ್ತದೆ. ಮನೆಯಲ್ಲಿ ಶುಭಕಾರ್ಯ ನಡೆಯುತ್ತದೆ. ನೀವು ಸ್ವಲ್ಪ ವಿಷಯಗಳನ್ನು ಹಗುರವಾಗಿ ಎಣಿಸುವವರು. ಗಹನವಾಗಿ ಯೋಚಿಸುವುದಿಲ್ಲ. ಇದರಿಂದ ಬಹಳಷ್ಟು ವ್ಯತಿರಿಕ್ತ ಪರಿಣಾಮ ಅನುಭವಿಸುತ್ತೀರಿ. ಯಾವ ವಿಷಯಕ್ಕೆ ಎಷ್ಟು ಪ್ರಾಮುಖ್ಯತೆ ಕೊಡಬೇಕೋ ಯೋಚಿಸಿ. ಆಗ ವಿಷಯಗಳು ಹಗುರವಾಗಿ ನಿಮ್ಮ ಅಂಕೆಗೆ ಒಳಪಡುತ್ತದೆ.
ತುಲಾ ರಾಶಿ
ಗುರು ಎಂಟನೇ ಮನೆಯಲ್ಲಿ ಇರುವುದರಿಂದ ಕೆಲಸ ಕಾರ್ಯಗಳಲ್ಲಿ ಹಿನ್ನಡೆ ಇದೆ. ಆರೋಗ್ಯ ಕೈಕೊಡಬಹುದು. ಆದರೆ ರಾಹು ಆರನೇನೆಯಲ್ಲಿಇದ್ದಾನೆ ಧನಾಗಮನ ಚೆನ್ನಾಗಿದೆ. ನೀವು ಹಠದ ಸ್ವಭಾವದವರು ಹಾಗೂ ಮೊಂಡುವಾದ ಮಾಡುವವರು. ಮೊಂಡುವಾದ ಸಂಬAಧಗಳನ್ನು ಕೆಡಿಸುತ್ತದೆ ಆದ್ದರಿಂದ ವಿವೇಚನೆಯಿಂದ ಮಾತನಾಡಿ. ಬುದ್ಧಿವಂತರಾದರೂ ನಿಮ್ಮ ಸ್ವಭಾವದಿಂದ ಜನ ನಿಮ್ಮನ್ನು ದೂರುತ್ತಾರೆ ಜಾಗರೂಕತೆಯಿಂದ
ವರ್ತಿಸಿ.
ವೃಶ್ಚಿಕ ರಾಶಿ
ಈಗ ನಿಮಗೆ ಸಂಪೂರ್ಣ ಗುರುಬಲ ಇದ್ದು ಭಗವಂತನ ಕೃಪಾಕಟಾಕ್ಷಕ್ಕೆ ಪಾತ್ರರಾಗುತ್ತೀರಿ. ನಿಮ್ಮ ಸಮಸ್ಯೆಗಳಿಗೆಲ್ಲ ಪರಿಹಾರ ಸಿಗಲಿದೆ. ಹನ್ನೊಂದರಲ್ಲಿ ಕೇತು ಕೂಡ ನಿಮಗೆ ಧನಲಾಭ ಕೊಡುತ್ತಾನೆ. ನೀವು ಸ್ವಭಾವತಃ ಮಾನಸಿಕ ವಾಗಿ ಬೇಗ ಕುಗ್ಗುತ್ತೀರಿ ಅಥವಾ ಶೀಘ್ರ ಕೋಪ ಮತ್ತು ಕಿರಿಕಿರಿ ಆಗುವುದು ಸಾಮಾನ್ಯ. ಈ ಸ್ವಭಾವ ನೀವು ನಿರಂತರ ಧ್ಯಾನ ಯೋಗ ದಿಂದ ಬದಲಾಯಿಸಿ ಕೊಳ್ಳಬೇಕು. ಮನಸ್ಸಿಗೆ ಶಕ್ತಿಬರಲು ಹರೇರಾಮ ಹರೇಕೃಷ್ಣ ಪ್ರತಿ ನಿತ್ಯ ಜಪ ಮಾಡಬೇಕು.
ಧನಸ್ಸು ರಾಶಿ
ಈಗ ನಿಮಗೆ ಮೂರನೇ ಮನೆಯ ಶನಿ ಒಬ್ಬನೇ ಆಧಾರ. ಗುರುಬಲ ಇಲ್ಲ. ಮಾನಸಿಕ ಚಿಂತೆ ಕಳವಳ ಇರುತ್ತದೆ. ವಿನಾಕಾರಣ ಭಯ ಆಗುವುದು, ಇಲ್ಲದ ಆಪತ್ತನ್ನು ಊಹಿಸಿ ಸಂಕಟ ಪಡುವುದು ಈರೀತಿ ನಿಮ್ಮಲ್ಲೇ ನೀವು
ಭಯಪಡುತ್ತೀರಿ. ಶನಿಯ ಬೆಂಬಲ ಇದೆ. ಮುಂದಿನದಿಗಳಲ್ಲಿ ರಾಹು ಕೂಡ ಮೂರನೇ ಮನೆಗೆ ಪ್ರವೇಶವಾದಾಗ ನಿಮಗೆ ಇನ್ನೂ ಹೆಚ್ವಿನ ಮಾನಸಿಕ ಶಕ್ತಿ ದೈಹಿಕ ಬಲ ಹಣಕಾಸಿನ ಬಲ ಎಲ್ಲವೂ ದೊರೆಯುತ್ತದೆ.
ಮಕರ ರಾಶಿ
ಈಗ ನಿಮಗೆ ಗುರುಬಲ ಇದೆ. ರಾಹುಬಲ ಇದೆ. ಲಾಭ ಸ್ಥಾನದಲ್ಲಿ ಶುಕ್ರ, ಹತ್ತನೇ ಮನೆಯಲ್ಲಿ ಬುಧ ಸಮಯ ಬಹಳ ಚೆನ್ನಾಗಿದೆ. ಅಂದುಕೊAಡ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತದೆ. ಒಂದು ಬೃಹತ್ ಆದರೆ ಒಳ್ಳೆಯ ಬದಲಾವಣೆ ಆಗಲಿ. ಇದು ನಿಮ್ಮ ಜೀವನವನ್ನು ಉನ್ನತಮಟ್ಟಕ್ಜೆ ಕೊಂಡೊಯ್ಯುತ್ತದೆ. ನೀವು ಸ್ವಭಾವತಃ ಸಂಕೋಚಿಗಳು. ಆದರೆ ನಿಮ್ಮ ಕರ್ತವ್ಯ ಮಾಡುವುದರಲ್ಲಿ ನಿಷ್ಣಾತರು. ವೃತ್ತಿಪರರು. ಆದರೆ ಯಾರ
ಮುಲಾಜಿಗು ಒಳಪಡುವವರಲ್ಲ.
ಕುಂಭ ರಾಶಿ
ಈಗ ನಿಮಗೆ ಗ್ರಹಗಳೆಲ್ಲ ವ್ಯತಿರಿಕ್ತವಾಗಿದೆ. ಯಾವುದೇ ಕೆಲಸಕಾರ್ಯ ಮುಂದೆ ಹೋಗದೆ ನಿಂತಲ್ಲೇ ಇರುತ್ತದೆ. ಅಪವಾದ ಅಪಮಾನ ಇವೆಲ್ಲ ಇರುತ್ತದೆ. ಹಣದ ಖರ್ಚು ಬಹಳವಾಗಿ ಇರುತ್ತದೆ. ಉನ್ನತ ಸ್ಥಾನದಲ್ಲಿ ಇರುವವರಿಗೆ ಅಧಿಕಾರ ಕಳೆದುಕೊಳ್ಳುವ ಸಂದರ್ಭಗಳು ಎದುರಾಗಬಹುದು. ತಾಳ್ಮೆ ಮುಖ್ಯ. ನೀವು ಯಾವುದನ್ನೂ ಯೋಚಿಸದೆ ಮನಸ್ಸಿಗೆ ಬಂದ ಹಾಗೆ ಮಾತನಾಡಿಬಿಡುತ್ತೀರಿ.
ಮೀನ ರಾಶಿ
ನಿಮಗೂ ಈಗ ಗುರುಬಲ ಇಲ್ಲ. ಆದರೆ ಒಂಬತ್ತನೇ ಮನೆಯಲ್ಲಿ ಶುಕ್ರ ಇದ್ದು ಅಲ್ಪ ಬಲವನ್ನು ಕೊಡುತ್ತಾನೆ. ವ್ಯಯಸ್ಥಾನದಲ್ಲಿ ಶನಿ ಇದ್ದು ಖರ್ಚುಗಳು ಹೆಚ್ಚು. ಮನೆಯಲ್ಲಿ ಹಿರಿಯರ ಆರೋಗ್ಯದ ಬಗ್ಗೆ ಗಮನ ಇರಲಿ. ಜಪತಪ ಹೆಚ್ಚು ಮಾಡಿ. ಕೊಂಚ ಪರೀಕ್ಷೆಗಳ ಕಾಲ. ಮನಸ್ಸು ದೃಢವಾಗಿರಲಿ. ನೀವು ಎಲ್ಲವನ್ನೂ ಲೈಟಾಗಿ ತೆಗೆದುಕೊಳ್ಳುತ್ತೀರ. ಆದರೆ ವಿಷಯ ಗಹನವಾಗಿ ಇರುತ್ತದೆ. ಸಂಗತಿಗಳನ್ನು ಅದರ ಪ್ರಾಮುಖ್ಯತೆ ಯ ಪ್ರಕಾರ ತೆಗೆದುಕೊಳ್ಳಿ. ಆಗ ಪರಿಹಾರ ಸುಲಭ.