Wednesday, February 4, 2026
Flats for sale
Homeಜಿಲ್ಲೆತಲಪಾಡಿ ; ಜಿಲ್ಲಾಡಳಿತದ ರಜೆಯಿಂದ ತಪ್ಪಿದ ಅತಿದೊಡ್ಡ ದುರಂತ , ಶಾರದಾ ಕಾಲೇಜಿನ ಬೃಹತ್ ಮೇಲ್ಛಾವಣಿ...

ತಲಪಾಡಿ ; ಜಿಲ್ಲಾಡಳಿತದ ರಜೆಯಿಂದ ತಪ್ಪಿದ ಅತಿದೊಡ್ಡ ದುರಂತ , ಶಾರದಾ ಕಾಲೇಜಿನ ಬೃಹತ್ ಮೇಲ್ಛಾವಣಿ ಕುಸಿತ, ಹಲವು ವಾಹನಗಳು ಜಖಂ.

ಉಳ್ಳಾಲ: ಭಾರೀ ಮಳೆಗೆ ತಲಪಾಡಿ ಖಾಸಗಿ ಶಿಕ್ಷಣ ಸಂಸ್ಥೆಯ ಬೃಹತ್ ಮೇಲ್ಛಾವಣಿ ಕುಸಿದುಬಿದ್ದು, ಹಲವು ವಾಹನಗಳು ಜಖಂ ಆಗಿವೆ. ರಜೆಯಿದ್ದ ಹಿನ್ನೆಲೆ ವಿದ್ಯಾರ್ಥಿ ಗಳಿಲ್ಲದೆ ಯಾವುದೇ ದುರಂತ ಸಂಭವಿಸಿಲ್ಲ.

ದೇವಿನಗರದ ಶಾರದಾ ವಿದ್ಯಾಲಯದ ಕ್ಯಾಂಪಸ್ ಒಳಗಿನ‌ ಆರು ಅಂತಸ್ತಿನ ಶಾಲಾ ಕಟ್ಟಡದ ಮೇಲೆ ಇತ್ತೀಚೆಗೆ ಅಳವಡಿಸಲಾಗಿದ್ದ ಭಾರೀ ಗಾತ್ರದ ಶೀಟ್ ಛಾವಣಿ ಉರುಳಿ ಕೆಳಗೆ ಬಿದ್ದಿದೆ. ಶೀಟ್ ಅಳವಡಿಸಲು ಹಾಕಲಾಗಿದ್ದ ಭಾರೀ ಗಾತ್ರದ ಕಬ್ಬಿಣದ ಸಲಾಕೆಗಳು ಕೆಳಗೆ ಉರುಳಿ ಬಿದ್ದು ಅನೇಕ ವಾಹನಗಳು ಜಖಂ ಗೊಂಡಿವೆ.

ಜಿಲ್ಲಾಡಳಿತ ಶಾಲಾ,ಕಾಲೇಜುಗಳಿಗೆ ರಜೆ ನೀಡಿದ್ದರಿಂದ ನಿನ್ನೆ ವಿದ್ಯಾರ್ಥಿಗಳು ಶಾಲೆಗೆ ಬಂದಿರಲಿಲ್ಲ.ಹಾಗಾಗಿ ಸಂಭಾವ್ಯ ಅನಾಹುತ ತಪ್ಪಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular