Friday, January 16, 2026
Flats for sale
Homeವಿದೇಶಢಾಕಾ : ಬಾಂಗ್ಲಾದೇಶದಲ್ಲಿ ನಿಲ್ಲದ ಹಿಂದೂಗಳ ಮೇಲಿನ ಮತಾಂಧರ ದೌರ್ಜನ್ಯ,ಬಾಗಿಲು ಹಾಕಿ ಬೆಂಕಿಯಿಟ್ಟ ದುಷ್ಟರು,ಮನೆಯಲ್ಲಿದ್ದವರು ಪ್ರಾಣಾಪಾಯದಿಂದ...

ಢಾಕಾ : ಬಾಂಗ್ಲಾದೇಶದಲ್ಲಿ ನಿಲ್ಲದ ಹಿಂದೂಗಳ ಮೇಲಿನ ಮತಾಂಧರ ದೌರ್ಜನ್ಯ,ಬಾಗಿಲು ಹಾಕಿ ಬೆಂಕಿಯಿಟ್ಟ ದುಷ್ಟರು,ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರು,ಸಾಕು ಪ್ರಾಣಿಗಳು ಭಸ್ಮ.

ಢಾಕಾ : ನೆರೆಯ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಮತಾಂಧರ ದೌರ್ಜನ್ಯ ನಿಲ್ಲುವಂತೆ ಕಾಣುತ್ತಿಲ್ಲ. ಭಾನುವಾರ ಮುಸ್ಲಿಂ ಬಾಹುಳ್ಯ ಇರುವ ಬಾಂಗ್ಲಾದೇಶದ ಪಿರೋಜ್‌ಪುರ ಜಿಲ್ಲೆಯ ದುಮಿರ್‌ತಲ ಗ್ರಾಮದಲ್ಲಿ ಹಿಂದೂಗಳಿಗೆ ಸೇರಿದ ಐದು ಮನೆಗಳಿಗೆ ದುಷ್ಟರು ಬೆಂಕಿ ಹಚ್ಚಿ ವಿಧ್ವಂಸಕ ಕೃತ್ಯವೆಸಗಿದ್ದಾರೆ.

ಕೆಲ ಮೂಲಗಳ ಪ್ರಕಾರ, ಬೆಂಕಿ ಹಚ್ಚಿದ್ದಷ್ಟೇ ಅಲ್ಲದೆ ಹೊರಗಿನಿಂದ ಮನೆಗಳ ಬಾಗಿಲನ್ನೂ ಹಾಕಿಕೊಂಡು ಮತಾಂಧರು ಓಡಿಹೋಗಿದ್ದಾರೆ ಎಂದು ತಿಳಿದುಬಂದಿದೆ. ಪಿರೋಜ್‌ಪುರ ಜಿಲ್ಲೆಯ ಸ್ಥಳೀಯ ಅಧಿಕಾರಿಗಳು ಹೇಳುವಂತೆ ಘಟನೆಗೆ ನಿಖರ ಕಾರಣವೇನೆಂಬುದು ಗೊತ್ತಿಲ್ಲ. ಆದರೆ ದಾಳಿಕೋರರು ಬಟ್ಟೆಗಳ ರಾಶಿಯನ್ನು ಮನೆಯ ಕೊಠಡಿಯೊಳಗೆ ತುಂಬಿ ಬೆಂಕಿ ಹಚ್ಚಿದ್ದಾರೆ. ಇದರಿಂದ ಸಂಪೂರ್ಣ ಮನೆಗೆ ಬೆಂಕಿ ವ್ಯಾಪಿಸಿದೆ. ಈ ವಿಧ್ವಂಸಕ ಕೃತ್ಯದಿಂದ ತೊಂದರೆಗೀಡಾದ ಸಹಾ ಎಂಬವರ ಕುಟುAಬ ಯಾವ ರೀತಿ ಘಟನೆ ನಡೆಯಿತು ಎಂದು ಮಾಧ್ಯಮಗಳಿಗೆ ವಿವರಿಸುವುದಕ್ಕೂ ಹೆದರುತ್ತಿದ್ದಾರೆ. ಹೇಗೆ ಬೆಂಕಿ ವ್ಯಾಪಿಸಿತೆಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದಷ್ಟೇ ಆ ಕುಟುಂಬದ ಸದಸ್ಯರೊಬ್ಬರು ಹೇಳಿದ್ದಾರೆ. ಅಂದು ಬೆಳಗ್ಗೆ ಏಳುವಾಗ ಹೊರಗಿನಿಂದ ಬಾಗಿಲಿಗೆ ಚಿಲಕ ಹಾಕಲಾಗಿತ್ತು ಎಂದೂ ಅವರು ವಿವರಿಸಿದ್ದಾರೆ. ತೊಂದರೆಗೀಡಾದ ಎರಡು ಕುಟುಂಬಗಳ ಎಂಟು ಸದಸ್ಯರು ಬೇಲಿಗೆ ಹಾಕಿದ ಬಿದಿರು ಹಾಗೂ ಟಿನ್ ಶಿಟ್‌ಗಳನ್ನು ಕತ್ತರಿಸಿ ಬೆಂಕಿಯಿAದ ಹೊರಬರುವಲ್ಲಿ ಯಶಸ್ವಿಯಾಗಿದ್ದರು.

ಈ ಮನೆಗಳ ಬೆಂಕಿ ಹಲವಾರು ಮನೆಗಳಿಗೆ ವ್ಯಾಪಿಸಿರುವುದರಿಂದ ಸ್ಥಳೀಯರು ನೀರು ಹಾಯಿಸಿ ಬೆಂಕಿ ನಂದಿಸಿದ್ದು ವಿಡಿಯೋಗಳಲ್ಲಿ ದಾಖಲಾಗಿದೆ. ಡಿಸೆಂಬರ್ ೧೮ರಂದು ೨೯ ವರ್ಷದ ಉಡುಪು ತಯಾರಿಕಾ ಕಾರ್ಖಾನೆಯ ಕಾರ್ಮಿಕ ದೀಪು ಚಂದ್ರ ದಾಸ್ ಅವರನ್ನು ಅಮಾನುಷವಾಗಿ ಹತ್ಯೆಗೈದ ಒಂದೇ ವಾರದಲ್ಲಿ ದುಮಿರ್‌ತಲದಲ್ಲಿ ಮತಾಂಧರು ಈ ಅಟ್ಟಹಾಸ ಮೆರೆದಿದ್ದಾರೆ.

ಮನೆಯಲ್ಲಿದ ದನ, ಕರು ಆಡುಗಳು ಬೆಂಕಿಗಾಹುತಿ ಮನೆಗಳು ಹಾಗೂ ಅವುಗಳೊಳಗಿದ್ದ ವಸ್ತುಗಳು ಮತ್ತು ಸಾಕಿದ ಪ್ರಾಣಿಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ. ಪಿರೋಜ್ ಪುರದ ಪೊಲೀಸ್ ಸುಪರಿಡೆಂಟ್ ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡು ಸೂಕ್ತ ರೀತಿಯ ತನಿಖೆ ನಡೆಸುವ ಭರವಸೆ ನೀಡಿದ್ದಾರೆ. ಸ್ಥಳೀಯ ಪೊಲೀಸರು ಈ ಸಂಬAಧ ಐವರು ಆರೋಪಿಗಳನ್ನು ಬಂಧಿಸಿದ್ದು ಇನ್ನುಳಿದವರಿಗಾಗಿ ಶೋಧ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular