ಡೆಹ್ರಾಡೂನ್ : ಈ ವರ್ಷದ ಚಾರ್ಧಾಮ್ ಯಾತ್ರಾಗೆ ಬರುವ ಯಾತ್ರಾರ್ಥಿಗಳಿಗೆ ದೇವಸ್ಥಾನದಲ್ಲಿ ಆವರಣಗಳಲ್ಲಿ ಮೊಬೈಲ್, ಕ್ಯಾಮರಾ ಬಳಕೆಯನ್ನು ಸಂಪೂರ್ಣ ವಾಗಿ ನಿಷೇಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರತಿವರ್ಷವೂ ರಾಜ್ಯದ ಗಂಗೋತ್ರಿ, ಯಮುನೋತ್ರಿ, ಕೇದಾರನಾಥ, ಬದ್ರಿನಾಥ ದೇವಸ್ಥಾನಕ್ಕೆ ೫೦ ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸುತ್ತಾರೆ. ಭಕ್ತರು ಫೋಟೋ ತೆಗೆಯುತ್ತಾ ನಿಲ್ಲುವದರಿಂದ ದರ್ಶನದ ವ್ಯವಸ್ಥೆಗೆ ಅಡ್ಡಿಯಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾ ಮ್ಯಾಜಿಸ್ಟೆçÃಟ್, ದೇವಸ್ಥಾನ ಆಡಳಿತ ಮಂಡಳಿ ಸೇರಿದAತೆ ಉನ್ನತ ಅಧಿಕಾರಗಳ ಪರಿಶೀಲನಾ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕಮಿಷನರ್ ವಿನಯ್ ಶಂಕರ್ ಪಾಂಡೆ ಹೇಳಿದ್ದಾರೆ.


