ಡಿಯಾಗೋ/ಕ್ಯಾಲಿಫೋರ್ನಿಯಾ : ಭಾರತದ ಬಾಹ್ಯಾಕಾಶ ಇತಿಹಾಸದಲ್ಲಿ ಹೆಮ್ಮೆಯ ಕ್ಷಣವನ್ನು ಗುರುತಿಸುವ ಮೂಲಕ, ಆಕ್ಸಿಯಮ್ ಮಿಷನ್ 4 (ಆಕ್ಸ್-4) ನಲ್ಲಿದ್ದ ಭಾರತೀಯ ವಾಯುಪಡೆಯ ಪೈಲಟ್ ಮತ್ತು ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಬನ್ಶು ಶುಕ್ಲಾ, ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) 18 ಗಮನಾರ್ಹ ದಿನಗಳನ್ನು – 433 ಗಂಟೆಗಳ ಕಾಲ – ಕಳೆದ ನಂತರ ಇಂದು ಸುರಕ್ಷಿತವಾಗಿ ಭೂಮಿಗೆ ಮರಳಿದರು.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS)ಕ್ಕೆ ಭೇಟಿ ನೀಡಿದ್ದ ಗ್ರೂಪ್ ಕ್ಯಾಪ್ಟನ್ ಮತ್ತು ಮೊದಲ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ (Shubhanshu Shukla) ಇಂದು ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ. ಈ ಮೂಲಕ ಆಕ್ಸಿಯಮ್ -4 (Axiom-4) ಕಾರ್ಯಾಚರಣೆ ಯಶಸ್ವಿಯಾಗಿದೆ. ಶುಭಾಂಶು ಶುಕ್ಲಾ 41 ವರ್ಷಗಳ ನಂತರ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಎರಡನೇ ಭಾರತೀಯ ಗಗನಯಾತ್ರಿ ಮತ್ತು ಐಎಸ್‌ಎಸ್‌ಗೆ ಭೇಟಿ ನೀಡಿದ ಮೊದಲ ವ್ಯಕ್ತಿಯಾಗಿದ್ದಾರೆ. ಹೀಗಾಗಿ, ಇಂದು ಭಾರತದ ಪಾಲಿಗೆ ಐತಿಹಾಸಿಕ ಕ್ಷಣವಾಗಿದೆ. ಇಂದು ಮಧ್ಯಾಹ್ನ ಡ್ರ್ಯಾಗನ್ ಕ್ಯಾಪ್ಸುಲ್ ಸ್ಪ್ಲಾಶ್‌ಡೌನ್ ನಂತರ ಸ್ಪೀಡ್ ಬೋಟ್‌ಗಳಲ್ಲಿ ನಾಸಾ ಸಿಬ್ಬಂದಿ ತೆರಳಿ ಡ್ರ್ಯಾಗನ್ ಕ್ಯಾಪ್ಸುಲ್ ಅನ್ನು ಎಳೆದು ಹಿಡಿದುಕೊಂಡವು. ನಂತರ ಇದೀಗ ಕ್ಯಾಪ್ಸುಲ್ನಿಂದ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳನ್ನು ಹೊರಗೆ ಕರೆತರಲಾಗಿದೆ. ಹೊರಗೆ ಬರುವಾಗಲೇ ನಗುತ್ತಾ ಕ್ಯಾಮೆರಾದತ್ತ ಕೈಬೀಸಿದ ಶುಭಾಂಶು ಶುಕ್ಲಾ ಬಾಹ್ಯಾಕಾಶ ಯಾನದಲ್ಲಿ ಹೊಸ ದಾಖಲೆ ಬರೆದಿದ್ದಾರೆ.
ನಾಸಾ ಸಿಬ್ಬಂದಿ ಸೋಮವಾರ (ಜುಲೈ 14) ಭಾರತೀಯ ಸಮಯ 4.45ಕ್ಕೆ ಐಎಸ್‌ಎಸ್‌ನ ಹಾರ್ಮನಿ ಮಾಡ್ಯೂಲ್‌ನಿಂದ ಬಾಹ್ಯಾಕಾಶಕ್ಕೆ ಹೋದರು. ಅಲ್ಲಿಂದ ಶುಭಾಂಶು ಸೇರಿದಂತೆ ನಾಲ್ವರು ಗಗನಯಾನಿಗಳು ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಬಾಹ್ಯಾಕಾಶ ನೌಕೆ “ಗ್ರೇಸ್” ಅನ್ನು ಹತ್ತಿದರು. ಇಂದು ಮಧ್ಯಾಹ್ನ ಅದು ಪೆಸಿಫಿಕ್ ಮಹಾಸಾಗರದೊಳಗೆ ಬಿದ್ದಿತು. ಅಲ್ಲಿಂದ ಅವರನ್ನು ಸುರಕ್ಷಿತವಾಗಿ ಕರೆತರಲಾಯಿತು.