Wednesday, October 22, 2025
Flats for sale
Homeಕ್ರೀಡೆಡರ್ಬನ್ : ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಮಿಂಚಿನ ಶತಕ..!

ಡರ್ಬನ್ : ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಮಿಂಚಿನ ಶತಕ..!

ಡರ್ಬನ್ : ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ೨೦ ಪಂದ್ಯದಲ್ಲಿ ಭಾರತ ಬೃಹತ್ 202 ರನ್‌ಗಳನ್ನು ಗಳಿಸಿದ್ದು, ದಕ್ಷಿಣ ಆಫ್ರಿಕಾಗೆ 203 ರನ್‌ಗಳ ಗೆಲುವಿನ ಗುರಿ ನೀಡಿದೆ. ಬಾಂಗ್ಲಾದೇಶದ ವಿರುದ್ಧದ ಹೈದರಾಬಾದ್ ಟಿ20 ಪಂದ್ಯದಲ್ಲಿ ಶತಕ ಬಾರಿಸಿದ್ದ ಸಂಜು ಸ್ಯಾಮ್ಸನ್, ಈಗ ಹರಿಣಗಳ ವಿರುದ್ಧದ ಮೊದಲ ಟಿ೨೦ಯಲ್ಲೂ
ಸೆಂಚುರಿ ಬಾರಿಸಿ ಅಬ್ಬರಿಸಿದ್ದಾರೆ. ಈ ಮೂಲಕ ಭಾರತ 4 ಪಂದ್ಯಗಳ ಸರಣಿಯಲ್ಲಿ ಗೆಲುವಿನ ನಿರೀಕ್ಷೆಯಲ್ಲಿದೆ.

ಮೊದಲು ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ ತಂಡ, ಭಾರತದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾರನ್ನು ಬಹುಬೇಗ ಪೆವಿಲಿಯನ್‌ಗೆ ಕಳುಹಿಸಿತು. ಕೊಟ್ಜೆಯಾ ಎಸೆದ ಎಸೆತವನ್ನು ಅಭಿಷೇಕ್ ಮಿಡ್ ಆಫ್‌ಗೆ ಬಾರಿಸಿದರು. ಈ ವೇಳೆ ನಾಯಕ ಏಡೇನ್ ಮಾರ್ಕ್ರಂ ಸುಲಭವಾಗಿ ಕ್ಯಾಚ್ ಹಿಡಿದು ಭಾರತಕ್ಕೆ ಮೊದಲ ಆಘಾತ ನೀಡಿದರು.

ಈ ವೇಳೆ ೨ನೇ ವಿಕೆಟ್‌ಗೆ ಜೊತೆಗೂಡಿದ ಸಂಜು ಸ್ಯಾಮ್ಸನ್ ಹಾಗೂ ಸೂರ್ಯಕುಮಾರ್ ಯಾದವ್ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಸಂಜು ಆರAಭದಲ್ಲಿ ಕೊಂಚ ನಿಧಾನಗತಿಯಾಗಿ ರನ್ ಗಳಿಸಿದರಾದರೂ, ನಂತರ
ವೇಗವಾಗಿ ರನ್‌ಗಳಿಸಲು ಆರಂಭಿಸಿದರು. ಈ ಇಬ್ಬರ ಆಟದಿಂದ ಭಾರತ ಮೊದಲ ಪವರ್‌ಪ್ಲೇನಲ್ಲೇ ೫೬ ರನ್‌ಗಳಿಸಿತು. ಭಾರತಕ್ಕೆ ಆಸರೆಯಾದ ಸಂಜು ಹಾಗೂ ಸೂರ್ಯಕುಮಾರ್ 37 ಎಸೆತಗಳಲ್ಲೇ 66 ರನ್‌ಗಳಿಸಿ ಬೇರ್ಪಟ್ಟರು. ತನ್ನ ಮೊದಲ ಓವರ್‌ನಲ್ಲೇ ಹೆಚ್ಚು ಎಕ್ಸ್ಟ್ರಾ ರನ್‌ಗಳನ್ನು ನೀಡಿದ ಕ್ರೂಗರ್, ಕೊನೆಯ
ಎಸೆತದಲ್ಲಿ ಸೂರ್ಯಕುಮಾರ್‌ನ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

47 ಎಸೆತದಲ್ಲಿ ಸಂಜು ಶತಕ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ ದಕ್ಷಿಣ ಆಫ್ರಿಕಾ ಬೌಲರ್‌ಗಳ ಎದುರು ಲೀಲಾಜಾಲವಾಗಿ ಬ್ಯಾಟ್ ಬೀಸಿದರು. 27ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಸಂಜು, ನಂತರದ 20 ಎಸೆತಗಳಲ್ಲೇ ಶತಕವನ್ನೂ ಪೂರೈಸಿದರು. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಬ್ಯಾಕ್ ಟು ಬ್ಯಾಕ್ ಶತಕಗಳನ್ನು ಗಳಿಸಿದ ಆಟಗಾರ ಎನ್ನಿಸಿಕೊಂಡರು. ಈ ಇನ್ನಿಂಗ್ಸ್ನಲ್ಲಿ ಸಂಜು ಆಡಿದ 50 ಎಸೆತಗಳಲ್ಲಿ 7 ಬೌಂಡರಿ ಹಾಗೂ 10 ಅಮೋಘ ಸಿಕ್ಸರ್‌ಗಳನ್ನು ಬಾರಿಸಿದ್ದು ವಿಶೇಷ. ಅಂತಿಮವಾಗಿ 107 ರನ್‌ಗಳಿಸಿದ ಸಂಜು, ಪೀಟರ್ ಬೌಲಿಂಗ್‌ನಲ್ಲಿ ಬೌಂಡರಿಲೈನ್ ಬಳಿ ಟ್ರಿಸ್ಟನ್ ಸ್ಟಬ್ಸ್ ಹಿಡಿದ ಕ್ಯಾಚ್‌ಗೆ ಬಲಿಯಾದರು.

ಇದಕ್ಕೂ ಮೊದಲು ಹುಟ್ಟುಹಬ್ಬ ಆಚರಿಸಿಕೊಂಡ ತಿಲಕ್ ವರ್ಮಾ ಆರಂಭದಲ್ಲಿ ಪರದಾಡಿದರು. ಆದರೆ, ನಂತರ ಕೊಂಚ ಚೇತರಿಸಿಕೊಂಡು ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಈತನ ಬ್ಯಾಟ್‌ನಿಂದ 3 ಬೌಂಡರಿ ಹಾಗೂ 2 ಸಿಕ್ಸರ್‌ಗಳ ಸಮೇತ 33 ರನ್ ಹರಿದು ಬಂತು. ಸ್ಲಾಗ್ ಓವರ್‌ಗಳಲ್ಲಿ ಆರ್ಭಟಿಸಬೇಕಿದ್ದ ಹಾರ್ದಿಕ್ ಪಾಂಡ್ಯ 6 ಎಸೆತಗಳನ್ನು ಎದುರಿಸಿ ಕೇವಲ 2 ರನ್ ಗಳಿಸಿ ಕೊಟ್ಜಿಯಾ ಬೌಲಿಂಗ್‌ನಲ್ಲಿ ಕ್ಯಾಚ್ ನೀಡಿ ಹೊರ ನಡೆದರು. ರಿಂಕು ಸಿಂಗ್ ಕೂಡ 11 ರನ್‌ಗಳಿಸಿ ಕೊಟ್ಜಿಯಾಗೆ ವಿಕೆಟ್ ನೀಡಿದರು. ಸ್ಲಾಗ್ ಓವರ್‌ಗಳಲ್ಲಿ ಭಾರತದ ರನ್‌ವೇಗ
ಕುಸಿದಿದ್ದಲ್ಲದೇ ಪ್ರಮುಖ 4 ವಿಕೆಟ್‌ಗಳನ್ನು ಕೂಡ ಕಳೆದುಕೊಂಡಿತು. ಇದರಿಂದ ಭಾರತ ಇನ್ನೂರರ ಗಡಿ ದಾಟಿದರೂ, 20 ರನ್‌ಗಳನ್ನು ಪೇರಿಸಬಹುದಿತ್ತು.ಅಂತಿಮವಾಗಿ ರವಿ ಬಿಷ್ಣೋಯಿ ರನೌಟ್‌ನೊಂದಿಗೆ ಭಾರತ ೨೦೨ ರನ್‌ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು.

ಸಂಕ್ಷಿಪ್ತ ಸ್ಕೋರ್: ಭಾರತ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 202 ರನ್. ಸಂಜು ಸ್ಯಾಮ್ಸನ್ 107, ತಿಲಕ್ ವರ್ಮಾ 33 ರನ್. ಗೆರಲ್ಡ್ ಕೊಟ್ಜಿಯಾ 37ಕ್ಕೆ 3 ವಿಕೆಟ್.

RELATED ARTICLES

LEAVE A REPLY

Please enter your comment!
Please enter your name here

Most Popular