Wednesday, February 4, 2026
Flats for sale
Homeವಿದೇಶಟೊರೊಂಟೋ : ಕೆನಡಾದಲ್ಲಿ ಖಲಿಸ್ತಾನಿಗಳ ಬೆದರಿಕೆ : ಭಾರತೀಯ ಕಾನ್ಸುಲೇಟ್ ಯೋಜಿತ ಕಾರ್ಯಕ್ರಮ ರದ್ದು..!

ಟೊರೊಂಟೋ : ಕೆನಡಾದಲ್ಲಿ ಖಲಿಸ್ತಾನಿಗಳ ಬೆದರಿಕೆ : ಭಾರತೀಯ ಕಾನ್ಸುಲೇಟ್ ಯೋಜಿತ ಕಾರ್ಯಕ್ರಮ ರದ್ದು..!

ಟೊರೊಂಟೋ : ಕೆನಡಾದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿಗಳ ಬೆದರಿಕೆಯ ನಡುವೆ ಬ್ರಾಂಪ್ಟನ್
ಮAದಿರದಲ್ಲಿ ತ್ರಿವೇಣಿ ಸಮುದಾಯ ಆಯೋಜಿಸಲಾಗಿದ್ದ ಭಾರತೀಯ ಕಾನ್ಸುಲೇಟ್ ತನ್ನ ಯೋಜಿತ ಜೀವನ ಪ್ರಮಾಣಪತ್ರ ಕಾರ್ಯಕ್ರಮವನ್ನು ರದ್ದುಗೊಳಿಸಿದೆ.

ಕೆನಡಾದ ಬ್ರಾಂಪ್ಟನ್ ಕೇಂದ್ರದ ಮೇಲೆ ದಾಳಿ ನಡೆದ ಹಿನ್ನೆಲೆಯಲ್ಲಿ ಮತ್ತಷ್ಟು ಹಿಂಸಾತ್ಮಕ ದಾಳಿ ನಡೆಯುವ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ತ್ರಿವೇಣಿ ಸಮುದಾಯ ಹಮ್ಮಿಕೊಂಡಿದ್ದ ಕಾರ್ಯಕ್ರಮ ರದ್ದು ಮಾಡಿದೆ. ಬ್ರಾಂಪ್ಟನ್ ನಗರದಲ್ಲಿನ ಹಿಂದೂ ದೇವಾಲಯದ ಮೇಲೆ ಇತ್ತೀಚೆಗೆ ನಡೆದ ದಾಳಿಯ ವಿರುದ್ಧ ನವೆಂಬರ್ ೧೦ ರಂದು ನವದೆಹಲಿಯ ಕೆನಡಾದ ರಾಯಭಾರ ಕಚೇರಿಯ ಬಳಿ ಪ್ರತಿಭಟನೆಯಲ್ಲಿ ಭಾಗವಹಿಸಿದ ನಿಹಾಂಗ್ ಸಿಖ್ ಫಲಕ ಹಿಡಿದು ಆಕ್ರೋಶ ಹೊರಹಾಕಿದ ಘಟನೆಯೂ ನಡೆದಿದೆ.

ಇಂದು ನಡೆಯಬೇಕಾಗಿದ್ದ ಕಾರ್ಯಕ್ರಮವನ್ನು ನವೆಂಬರ್ 12 ರಂದು ಮರು ನಿಗದಿಪಡಿಸಲಾಗಿದೆ, ಭಾರತೀಯ ಮೂಲದ ಹಿಂದೂಗಳು ಮತ್ತು ಸಿಖ್ಖರಿಗೆ ಅಗತ್ಯ ಜೀವನ ಪ್ರಮಾಣಪತ್ರಗಳನ್ನು ನವೀಕರಿಸಲು ಅವಕಾಶವನ್ನು ನೀಡಲು ಕಾನ್ಸುಲರ್ ಶಿಬಿರ ಆಯೋಜಿಸಲಾಗಿದೆ.

ಭಾರತೀಯ ದೂತಾವಾಸದಿಂದ ಬ್ರಾAಪ್ಟನ್ ತ್ರಿವೇಣಿ ಮಂದಿರದಲ್ಲಿ ನಿಗದಿಪಡಿಸಲಾದ ಲೈಫ್ ಸರ್ಟಿಫಿಕೇಟ್ ಈವೆಂಟ್ ಅನ್ನು ರದ್ದುಗೊಳಿಸಲಾಗಿದೆ ಎಂದು ಪೊಲೀಸರ ಅಧಿಕೃತ ಗುಪ್ತಚರ
ಮಾಹಿತಿ ತಿಳಿಸಿವೆ.

ಬ್ರಾಂಪ್ಟನ್ ತ್ರಿವೇಣಿ ಮಂದಿರದ ವಿರುದ್ಧ ಹರಡುತ್ತಿರುವ ಬೆದರಿಕೆಗಳನ್ನು ಪರಿಹರಿಸಲು ಮತ್ತು ಕೆನಡಾದ ಹಿಂದೂ ಸಮುದಾಯ ಮತ್ತು ಸಾರ್ವಜನಿಕರಿಗೆ ಭದ್ರತೆ ಖಚಿತಪಡಿಸಿಕೊಳ್ಳಲು
ಸಮುದಾಯ ಕೆನಡಾ ಸರ್ಕಾರವನ್ನು ಒತ್ತಾಯಿಸಿದೆ.

ನಿಗದಿಪಡಿಸಿದ ಕಾರ್ಯಕ್ರಮ ರದ್ದುಪಡಿಸಿದ ಹಿನ್ನೆಲೆಯಲ್ಲಿ ಎಲ್ಲಾ ಸಮುದಾಯದ ಸದಸ್ಯರಲ್ಲಿ ನಾವು ಕ್ಷಮೆಯಾಚಿಸುತ್ತೇವೆ. ಕೆನಡಿಯನ್ನರು ಈಗ ಕೆನಡಾದ ಹಿಂದೂ ದೇವಾಲಯಗಳಿಗೆ ಬರುವುದು ಅಸುರಕ್ಷಿತವೆಂದು ಭಾವಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದಕ್ಕೂ ಮೊದಲು ನವೆಂಬರ್ ೩ ರಂದು, ಟೊರೊಂಟೊ ಬಳಿಯ ಬ್ರಾಂಪ್ಟನ್‌ನಲ್ಲಿರುವ ಹಿಂದೂ ಸಭಾ ದೇವಾಲಯದಲ್ಲಿ ಕಾನ್ಸುಲರ್ ಶಿಬಿರವನ್ನು ಖಲಿಸ್ತಾನಿ ಪರ ಬೆಂಬಲಿಗರು ಹಲ್ಲೆ ಮತ್ತು ಧ್ವಂಸ ಮಾಡಿ ಆತಂಕ ಸೃಷ್ಠಿ ಮಾಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular