ಟೆಹ್ರಾನ್ : ಭಾರತ ಸೇರಿದಂತೆ ಐದು ಮಿತ್ರ ರಾಷ್ಟçಗಳಿಗೆ ಹೊರ್ಮುಜ್ ಜಲಸಂಧಿ ಮಾರ್ಗ ಬಳಸಿಕೊಂಡು ಸರಕು ಸಾಗಣೆ ಮಾಡಲು ಇರಾನ್ ಅನುಮತಿ ನೀಡಿದೆ. ಇದರಿಂದ ಸದ್ಯಕ್ಕೆ ಭಾರತದ ಇಂಧನ ಸಮಸ್ಯೆಯ ಬಿಕ್ಕಟ್ಟು ತಾತ್ಕಾಲಿಕವಾಗಿ ಶಮನಗೊಂಡAತಾಗಿದೆ.
ಭಾರತ, ಚೀನಾ, ರಷ್ಯಾ, ಇರಾಕ್ ಮತ್ತು ಪಾಕಿಸ್ತಾನದಂತಹ ನಮ್ಮೊಂದಿಗೆ ಮೈತ್ರಿಯಲ್ಲಿ ಇರುವ ದೇಶಗಳ ವಾಣಿಜ್ಯ ಹಡಗುಗಳು ಹೊರ್ಮುಜ್ ಜಲಸಂಧಿ ಬಳಸಿಕೊಂಡು ಮುಕ್ತವಾಗಿ ಸಂಚರಿಸಲು ನಾವು ಅನುಮತಿ ನೀಡಿದ್ದೇವೆ' ಎಂದು ಇರಾನ್ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಾಘ್ಚಿ ತಿಳಿಸಿದ್ದಾರೆಂದು ಅಲ್ಲಿನಸರ್ಕಾರಿ ಟಿ.ವಿ. ಪ್ರಸಾರ ಮಾಡಿದೆ.ನಾವು ಯುದ್ಧದ ಪರಿಸ್ಥಿತಿಯಲ್ಲಿದ್ದೇವೆ.
ಇದು ಯುದ್ಧ ವಲಯ ಆಗಿದೆ. ಹೀಗಾಗಿ ನಮ್ಮ ಶತ್ರು ರಾಷ್ಟçಗಳಿಗೆ ಹೊರ್ಮುಜ್ ಜಲಸಂಧಿ ಬಳಸಿಕೊಳ್ಳಲು ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ. ಉಳಿದವರಿಗೆಲ್ಲ ಹೊರ್ಮುಜ್ ಮುಕ್ತವಾಗಿದೆ` ಎಂದೂ ಇದೇ ವೇಳೆ ಅರಾಘ್ಚಿ ಖಚಿತಪಡಿಸಿದ್ದಾರೆ. ಇದನ್ನು ಭಾರತದ ರಾಜತಾಂತ್ರಿಕತೆಯ ಯಶಸ್ಸು ಎಂದು ಬಣ್ಣಿಸಲಾಗುತ್ತಿದೆ. ಇರಾನ್ ನೀಡಿದ ಹೇಳಿಕೆ ಬೆನ್ನಲ್ಲೇ ಭಾರತ ಸರ್ಕಾರವೂ ಸಹ ಹೇಳಿಕೆ ನೀಡಿದೆ.


