ಟೆಲ್‌ಅವೀವ್ : ತಾಳಿ ನಿಂತಿರುವ ಅಮೆರಿಕ ಅಧ್ಯಕ್ಷ ಟ್ರಂಪ್ ಅಬ್ಬರದ ಮಧ್ಯೆಯೇ ಖಮೇನಿ ಕಡು ವಿರೋಧಿ ದೇಶ ಇಸ್ರೇಲ್‌ಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಭೇಟಿ ನೀಡಿದ್ದಾರೆ. ಆ ಮೂಲಕ ಮಧ್ಯಪ್ರಾಚ್ಯದಲ್ಲಿ ಭಾರಿ ಸಮರ ಉದ್ವಿಗ್ನತೆ ಏರ್ಪಟ್ಟಿದ್ದರೂ ಮೋದಿ ಮಾತ್ರ ಬಾಂಧವ್ಯ ವೃದ್ಧಿಗೆ ಒತ್ತು ನೀಡಿ, ನಾವು ಎಂದೂ ಶಾಂತಿಯ ಪರ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

ಬುಧವಾರ ಮಧ್ಯಾಹ್ನ ಟೆಲ್‌ಅವೀವ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಮೋದಿಯವರನ್ನು ಖುದ್ದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ಪತ್ನಿ ಸಾರಾ ನೆತನ್ಯಾಹು ಹಾಜರಿದ್ದು ಸ್ವಾಗತಿಸಿದರು. ನಂತರ ಇಸ್ರೇಲ್‌ನ ಸಂಸತ್ತಿನಲ್ಲಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಹಮಾಸ್ ಉಗ್ರರು ೨೦೨೩ರ ಅಕ್ಟೋಬರ್ ೭ರಂದು ಇಸ್ರೇಲ್‌ನಲ್ಲಿ ನಡೆಸಿದ್ದ ಅನಾಗರಿಕ ರೀತಿಯ ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸಿದರು. ಆದರೆ ಪ್ಯಾಲೆಸ್ತೇನ್ ಬಗ್ಗೆ ಯಾವುದೇ ಮಾತನ್ನು ಆಡದೆ ಮಾತು ಮುಗಿಸಿದರು.
ಆ ಮೂಲಕ ಇಸ್ರೇಲ್‌ನ ಸಂಸತ್ತಿನಲ್ಲಿ ಇಡಿಯ ಶಾಸನ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಭಾರತದ ಮೊದಲ ಪ್ರಧಾನ ಮಂತ್ರಿ ಎAಬ ಹೆಗ್ಗಳಿಕೆಗೆ ಮೋದಿ ಪಾತ್ರರಾದರು. 9 ವರ್ಷಗಳ ಹಿಂದೆ ಮೋದಿ ಇಸ್ರೇಲ್‌ಗೆ ಭೇಟಿ ನೀಡಿದ್ದರಾದರೂ ಸಂಸತ್ತಿನಲ್ಲಿ ಅವರು ಮಾತಾಡಿರಲಿಲ್ಲ.
ವಿದೇಶಾಂಗ ನೀತಿ ಬದಲಾವಣೆ?
ಭಾರತ ಐತಿಹಾಸಿಕವಾಗಿ ಮೊದಲಿನಿಂದಲೂ ಪ್ಯಾಲಿಸ್ತೇನ್‌ಗೆ ಬೆಂಬಲ ನೀಡುತ್ತಾ ಬಂದಿದ್ದು, ೧೯೯೨ರಿಂದ ಈಚೆಗಷ್ಟೇ ಇಸ್ರೇಲ್‌ನೊಂದಿಗೆ ಮೈತ್ರಿ ಆರಂಭಿಸಿದೆ. ದ್ವಿಪಕ್ಷೀಯ ಸಂಬAಧ ಬಲವರ್ಧನೆಗೆ ಪ್ರಧಾನಿ ಮೋದಿಯವರ ೨ ದಿನಗಳ ಇಸ್ರೇಲ್ ಭೇಟಿಯು, ಭಾರತದ ವಿದೇಶಾಂಗ ನೀತಿಯಲ್ಲಿ ಬದಲಾವಣೆ ಆಗಿದೆ ಎಂಬುದನ್ನು ಪ್ರತಿಫಲಿಸುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಸಂಸತ್ತು`ಕೆನೆಸೆಟ್’ ಉದ್ದೇಶಿಸಿ ಭಾಷಣ ಮಾಡಿದ ಮೊಟ್ಟ ಮೊದಲ ಭಾರತೀಯ ಪ್ರಧಾನಿ ನರೇಂದ್ರ ಮೋದಿಯಾಗಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಆವಿಷ್ಕಾರ, ರಕ್ಷಣೆ-ಭದ್ರತೆ ಕುರಿತು ಪರಸ್ಪರ ಸಹಕಾರದ ನಿಟ್ಟಿನಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಕೃಷಿ, ನೀರು ನಿರ್ವಹಣೆ, ವಾಣಿಜ್ಯ-ಆರ್ಥಿಕತೆ ಬೆಳವಣಿಗೆಗಾಗಿ ಎರಡೂ ದೇಶಗಳ ನಡುವೆ ಹೊಸ ಒಪ್ಪಂದಗಳು ನಡೆದಿದೆ.ಇಸ್ರೇಲ್‌ನಲ್ಲಿರುವ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಗುರುವಾರ ಪ್ರಧಾನಿ ಮೋದಿ ಮಾತನಾಡಿದ್ದಾರೆ.


