Thursday, November 21, 2024
Flats for sale
Homeರಾಶಿ ಭವಿಷ್ಯಬೆಂಗಳೂರು : ಜ 25ಕ್ಕೆ ಮಹಾಯಾನ ಬೌದ್ಧರ ಹೊಸ ವರ್ಷ; ಇದರ ಮಹತ್ವ ಹೀಗಿದೆ ನೋಡಿ.

ಬೆಂಗಳೂರು : ಜ 25ಕ್ಕೆ ಮಹಾಯಾನ ಬೌದ್ಧರ ಹೊಸ ವರ್ಷ; ಇದರ ಮಹತ್ವ ಹೀಗಿದೆ ನೋಡಿ.

ಬೆಂಗಳೂರು : ಪ್ರಪಂಚದಾದ್ಯಂತ ಎಲ್ಲರೂ ಹೊಸ ವರ್ಷವನ್ನು ಬರಮಾಡಿಕೊಂಡಾಯಿತು, ಆಚರಿಸಲಾಯಿತು ಎಂದು ನಾವೆಲ್ಲರೂ ಅಂದುಕೊಂಡಿದ್ದೇವೆ. ಆದರೆ ಜನವರಿ 25 ರಂದು ಹೊಸ ವರ್ಷ ಆಚರಿಸಲು ಒಂದು ಸಮುದಾಯ ಕಾಯುತ್ತಿದೆ. ಅವರೇ ಮಹಾಯಾನ ಬೌದ್ಧರು. ಏನಿದು ಮಹಾಯಾನ ಹೊಸ ವರ್ಷ? ಇದರ ಮಹತ್ವ ಏನು ಎಂಬುದನ್ನು ತಿಳಿಯೋಣ..

ಬೌದ್ಧಧರ್ಮದಲ್ಲಿ ಎರಡು ಮುಖ್ಯ ಪಂಗಡಗಳಿವೆ. ಹೀನಾಯಾನ ಮತ್ತು ಮಹಾಯಾನ. ಮಹಾಯಾನ ಬೌದ್ಧರು ಪ್ರತಿ ವರ್ಷ ಜನವರಿ ತಿಂಗಳಲ್ಲಿ ಬರುವ ಹುಣ್ಣಿಮೆಯಂದು ಹೊಸ ವರ್ಷ ಆಚರಿಸುತ್ತಾರೆ. ಈ ವರ್ಷ ಜನವರಿ 25, ಗುರುವಾರದಂದು ಮಹಾಯಾನ ಹೊಸ ವರ್ಷ ಬಂದಿದೆ.

ಮಹಾಯಾನ ಹೊಸ ವರ್ಷದ ಆಚರಣೆ ಹೇಗೆ?
ಈ ದಿನ ಜನರು ಹತ್ತಿರದ ಬೌದ್ಧ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಗೌತಮ ಬುದ್ಧನ ಪ್ರತಿಮೆ ಮೇಲೆ ನೀರು ಸುರಿದು ಹೊಸ ಜೀವನ ಮತ್ತು ಹೊಸ ಆರಂಭದ ಬಗ್ಗೆ ಬುದ್ಧನಲ್ಲಿ ಪ್ರಾರ್ಥಿಸುತ್ತಾರೆ. ತಮ್ಮನ್ನು ತಾವು ಆತ್ಮಾವಲೋಕನ ಮಾಡಿಕೊಂಡು ಹಿಂದಿನ ತಪ್ಪುಗಳಿಂದ ಪಾಠಗಳನ್ನು ಕಲಿಯುತ್ತಾರೆ.

ಬುದ್ಧನ ಪ್ರತಿಮೆ ಮೇಲೆ ನೀರಿನ ಅಭಿಷೇಕ ಮಾಡುವುದರಿಂದ ನಕಾರಾತ್ಮಕ ಆಲೋಚನೆಗಳನ್ನು ದೂರ ಇಡಬಹುದು ಎಂದು ನಂಬಲಾಗಿದೆ. ಮನೆಗಳನ್ನು ಸ್ವಚ್ಛಗೊಳಿಸಿ, ಅಲಂಕರಿಸಿ, ಆತ್ಮೀಯರಿಗೆ ಉಡುಗೊರೆಗಳನ್ನು ನೀಡಿ, ಮಧ್ಯರಾತ್ರಿ ಪಟಾಕಿಗಳನ್ನು ಹೊಡೆಯುತ್ತಾರೆ.

ಮಹಾಯಾನ ಬೌದ್ಧಧರ್ಮದ ಮುಖ್ಯ ನಂಬಿಕೆ ಏನು?
ಮಹಾಯಾನ ಬೌದ್ಧರು ಜ್ಞಾನೋದಯ ಅಥವಾ ಶಾಶ್ವತವಾದ ನಿರ್ವಾಣವನ್ನು ಒಬ್ಬರು ತಮ್ಮ ಜೀವಿತಾವಧಿಯಲ್ಲಿಯೇ ಸಾಧಿಸಬಹುದು ಎಂದು ನಂಬುತ್ತಾರೆ. . ಪ್ರತಿಯೊಬ್ಬರೂ ಪ್ರಬುದ್ಧರಾಗುವ ಅವಕಾಶವನ್ನು ಬಳಸಿಕೊಳ್ಳುವುದು ಜನರಿಗೆ ಸಹಾಯ ಮಾಡುವುದು, ಒಳ್ಳೆಯ ಕಾರ್ಯಗಳ ಮೂಲಕ ತಿಳುವಳಿಕೆಯನ್ನು ಸಾಧಿಸುವುದು ಮತ್ತು ಬುದ್ಧನ ಬೋಧನೆಗಳನ್ನು ಅನುಸರಿಸುವುದು ಮಹಾಯಾನ ಬೌದ್ಧಧರ್ಮದ ಉದ್ದೇಶವಾಗಿದೆ.

ಈಶಾನ್ಯ ಏಷ್ಯಾದ ಟಿಬೆಟ್, ತೈವಾನ್, ಮಂಗೋಲಿಯಾ, ಚೀನಾ, ಜಪಾನ್, ಕೊರಿಯಾ ರಾಷ್ಟ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಾಯಾನ ಬೌದ್ಧರು ನೆಲೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular