ಜೈಪುರ ; ಕಾಂಗ್ರೆಸ್ ಪಕ್ಷ ದೇಶದ ದೊಡ್ಡ ಸಮಸ್ಯೆ ಯಾಗಿದೆ. ಕರ್ಫ್ಯೂ ಹೇರುವುದು ಕಾಂಗ್ರೆಸ್ ಡಿಎನ್‌ಎ ಭಾಗ ವಾಗಿದೆ. ಬಡವರನ್ನು ಹಸಿವಿನಿಂದ ಸಾಯಿಸುವುದು ಮತ್ತು ಭಯೋ ತ್ಪಾದಕರಿಗೆ ಬಿರಿಯಾನಿ ತಿನ್ನಿಸುವುದೇ
ಅದರ ಕೆಲಸ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಾಗ್ದಾಳಿ ನಡೆಸಿದ್ದಾರೆ.
ಜೊತೆಗೆ “ಭಯೋತ್ಪಾದಕ ಶಂಕಿ ತರ” ಬಗ್ಗೆ ಮೃದು ಧೋರಣೆ ತಾಳುತ್ತಿದೆ. ಇದರಿಂದ ದೇಶದ ಗಡಿ ಭಾಗಗಳಲ್ಲಿ ಭಯೋತ್ಪಾದಕರು ಅಟ್ಟ ಹಾಸ ಮೆರೆಯಲು ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜಸ್ತಾನದ ಭರತ್‌ಪುರದಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡಿದ ಅವರು ತಮ್ಮ ಭಾಷಣದುದ್ದಕ್ಕೂ ಕಾಂಗ್ರೆಸ್ ಪಕ್ಷದ ವಿರುದ್ದ ಹರಿಹಾಯ್ದರು. ಲಾಲ್ಸೋಟ್‌ನಲ್ಲಿರುವ
ಅಶೋಕ್ ಶರ್ಮಾ ಸೀನಿಯರ್ ಸೆಕೆಂಡರಿ ಸ್ಕೂಲ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, “ರಾಮ ಮಂದಿರ ನಿರ್ಮಿಸುವುದು ಬಿಡಿ, ರಾಮ ಮತ್ತು ಕೃಷ್ಣನನ್ನು ಕಾಲ್ಪನಿಕ ವ್ಯಕ್ತಿಗಳೆಂದು ಕಾಂಗ್ರೆಸ್ ಪರಿಗಣಿಸಿದೆ” ಎಂದು ಹೇಳಿದ್ದಾರೆ.
ಕಾಂಗ್ರೆಸ್ ಆಡಳಿತದಲ್ಲಿ ಬಡವರ ಹಕ್ಕುಗಳನ್ನು ಕಸಿಯುವ ಕೆಲಸ ಮಾತ್ರ ನಡೆದಿದೆ. ಆದರೂ ಬಡವರ ಬಗ್ಗೆ ಕಾಳಜಿ ತೋರಿಸುವ ನಾಟಕ ಮಾಡುತ್ತಿದೆ ಎಂದು ದೂರಿದ್ದಾರೆ ದೇಶಾದ್ಯಂತ ಮತ್ತೊಮ್ಮೆ ಮೋದಿ ಸರ್ಕಾರ ಎನ್ನುವ ಒಂದೇ ಒಂದು ಘೋಷಣೆ ಕೇಳಿ ಬರುತ್ತಿದೆ. ಕಳೆದ ೧೦ ವರ್ಷಗಳ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ, ದೇಶದ ಗಡಿಗಳನ್ನು ಸುರಕ್ಷಿತಗೊಳಿಸಲಾಗಿದೆ.
ಈ ಹಿಂದೆ ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿದ್ದವು. ಅದಕ್ಕೆ ಕಡಿವಾಣ ಹಾಕಲಾಗಿದೆ ಎಂದಿದ್ದಾರೆ. ಮೂರು ದಿನಗಳ ಹಿಂದೆ ಬ್ರಿಟನ್ಪ ತ್ರಿಕೆಯೊಂದರಲ್ಲಿ ಪಾಕಿಸ್ತಾನದಲ್ಲಿ ೨೦ ಭಯೋತ್ಪಾದಕರು ಹತರಾಗಿದ್ದಾರೆ ಎಂಬ ಸುದ್ದಿ ಬಂದಿತ್ತು. ಇದು ಹೊಸ ಭಾರತವಾಗಿದ್ದು, ಭಯೋತ್ಪಾದಕರು ತಮ್ಮ ಶತ್ರುಗಳನ್ನು ಭೇಟಿಯಾಗುತ್ತಿದ್ದಾರೆ, ‘’ಎಂದು ಅವರು ಟೀಕಿಸಿದ್ದಾರೆ.
ನಿನ್ನೆಯವರೆಗೆ ಭಯೋತ್ಪಾದಕರಿಗೆ ಆಶ್ರಯ ನೀಡಿದವರು ಈಗ ವೈಮಾನಿಕ ದಾಳಿಯ ಭಯದಿಂದ ಭಾರತದ ವಿರುದ್ಧ ಏನನ್ನೂ ಹೇಳಲು ಧೈರ್ಯ ಮಾಡುತ್ತಿಲ್ಲ. “ಈಗ, ಯಾವುದೇ ರಾಷ್ಟ್ರ ಭಯೋತ್ಪಾದನೆಯನ್ನು ಅನು
ಮೋದಿಸಲು ಧೈರ್ಯ ಮಾಡುವುದಿಲ್ಲ. ಕಳೆದ ದಶಕದಲ್ಲಿ ಕಾಶ್ಮೀರದಲ್ಲಿ ನಕ್ಸಲಿಸಂ, ಭಯೋತ್ಪಾದನೆ ಮತ್ತು ಕಲ್ಲು ತೂರಾಟವನ್ನು ಯಶಸ್ವಿಯಾಗಿ ನಿಭಾಯಿಸಿದೆ,’’ ಎಂದು ಹೇಳಿದ್ದಾರೆ.