ಚೆನ್ನೈ : ತಲೈವಾ ರಜನಿಕಾಂತ್ ಅವರ ಕೂಲಿ ಚಿತ್ರ ನಾಲ್ಕನೇ ದಿನ ಇತಿಹಾಸ ಸೃಷ್ಟಿಸಿದೆ. ವಿಶ್ವಾದ್ಯಂತ 3೦೦ ಕೋಟಿ ಕ್ಲಬ್‌ಗೆ ಸೇರುವ ಅತ್ಯಂತ ವೇಗದ ತಮಿಳು ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಶನಿವಾರ ವಾರ್ 2 ಚಿತ್ರವನ್ನೂ ಹಿಂದಿಕ್ಕಿದೆ. ಲೋಕೇಶ್ ಕನಕರಾಜ್ ನಿರ್ದೇಶನದ ಕೂಲಿತಮಿಳು ಚಿತ್ರರಂಗದಲ್ಲಿ ವಿಶ್ವಾದ್ಯಂತ 3೦೦ ಕೋಟಿ ಗಳಿಸಿದ ಅತ್ಯಂತ ವೇಗದ ಚಿತ್ರವಾಗಿದೆ. ಇದು ಮಾತ್ರವಲ್ಲದೆ, ಮೂರನೇ ದಿನ, ಇದು ಮತ್ತೊಮ್ಮೆ ದೇಶದಲ್ಲಿ ಹೃತಿಕ್ ರೋಷನ್ ಮತ್ತು ಜೂನಿಯರ್ ಎನ್‌ಟಿಆರ್ ಅವರ ವಾರ್ ೨ ಸೋಲಿಸಿದೆ.
ಆಗಸ್ಟ್ 14,2025 ರಂದು ಗುರುವಾರ ಬಿಡುಗಡೆಯಾದ ಗ್ಯಾಂಗ್‌ಸ್ಟರ್ ಆಕ್ಷನ್-ಥ್ರಿಲ್ಲರ್ ಕೂಲಿ 375-4೦೦ ಕೋಟಿ ರೂ. ಬಜೆಟ್ ಹೊಂದಿದೆ. ಆದರೆ ಈ ರಜನಿಕಾಂತ್, ನಾಗಾರ್ಜುನ ಮತ್ತು ಶ್ರುತಿ ಹಾಸನ್ ಅಭಿನಯದ ಚಿತ್ರವು ಕೇವಲ ಮೂರು ದಿನಗಳಲ್ಲಿ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ 138.35 ಕೋಟಿ ರೂ. ನಿವ್ವಳ ಸಂಗ್ರಹವನ್ನು ಮಾಡಿದೆ.
ಸಕ್ನಿಲ್ಕ್ ಪ್ರಕಾರ, ಗುರುವಾರ ಮೊದಲ ದಿನ 65 ಕೋಟಿ ಗಳಿಸಿದ ‘ಕೂಲಿ’ ಮೂರನೇ ದಿನ ಅಂದರೆ ಶನಿವಾರ ತಮಿಳು, ಹಿಂದಿ, ಕನ್ನಡ ಮತ್ತು ತೆಲುಗು ಆವೃತ್ತಿಗಳಲ್ಲಿ 38.6೦ ಕೋಟಿ ಗಳಿಸಿದೆ. ಒಂದು ದಿನದ ಹಿಂದೆ, ಶುಕ್ರವಾರ, ಇದು 54.75 ಕೋಟಿ ಗಳಿಸಿತ್ತು. ಹೀಗಾಗಿ, ಮೂರನೇ ದಿನ ವ್ಯವಹಾರದಲ್ಲಿ -ಶೇ. 29.5೦ ನಷ್ಟವಾಗಿದೆ. ಮೂರನೇ ದಿನ, ಕೂಲಿ ತಮಿಳಿನಲ್ಲಿ 25 ಕೋಟಿ, ತೆಲುಗಿನಲ್ಲಿ 9 ಕೋಟಿ, ಹಿಂದಿಯಲ್ಲಿ 4.35 ಕೋಟಿ ಮತ್ತು ಕನ್ನಡದಲ್ಲಿ 25 ಲಕ್ಷ ಗಳಿಸಿದೆ.
ಕೂಲಿ ಚಿತ್ರ ಮೂರನೇ ದಿನ ವಾರ್ 2 ಚಿತ್ರಕ್ಕಿಂತ ಮುಂದಿದೆ. ಈ ಎರಡೂ ಚಿತ್ರಗಳ ನಡುವೆ ಹಾವು ಏಣಿಯಾಟ ನಡೆಯುತ್ತಿದೆ. ಮೊದಲ ದಿನ ಕೂಲಿ ಚಿತ್ರವು ಹೃತಿಕ್-ಎನ್‌ಟಿಆರ್ ಚಿತ್ರವನ್ನು 65 ಕೋಟಿ ಗಳಿಸುವ ಮೂಲಕ ಹಿಂದಿಕ್ಕಿತ್ತು. ಆದರೆ ಎರಡನೇ ದಿನ 54.75ಕೋಟಿ ಗಳಿಸುವ ಮೂಲಕ ಹಿನ್ನಡೆ ಅನುಭವಿಸಿದೆ. ಈಗ ಮೂರನೇ ದಿನ ರಜನಿಕಾಂತ್ ಚಿತ್ರವು 38 ಕೋಟಿ ಗಳಿಸುವ ಮೂಲಕ ವಾರ್ 2 ಚಿತ್ರವನ್ನು ಮತ್ತೆ ಹಿಂದಿಕ್ಕಿದೆ. ಕೂಲಿಚಿತ್ರವು ಮೂರು ದಿನಗಳ ಒಟ್ಟು ಗಳಿಕೆಯಲ್ಲಿ ವಾರ್ 2 ಗಿಂತ ಬಹಳ ಮುಂದಿದೆ. ಇದು 158.25 ಕೋಟಿ ರೂ. ನಿವ್ವಳ ಸಂಗ್ರಹವನ್ನು ಮಾಡಿದೆ.
ಕೂಲಿ ಚಿತ್ರದ ವಿಶೇಷವೆಂದರೆ , ರಜನಿಕಾಂತ್ ಅವರ ತಾರಾಪಟ್ಟದಿಂದಾಗಿ, ಇದು ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಸಾಕಷ್ಟು ಗಳಿಕೆ ಮಾಡುತ್ತಿದೆ. ಮೂರು ದಿನಗಳಲ್ಲಿ, ಭಾರತ ಮತ್ತು ವಿದೇಶಗಳನ್ನು ಒಳಗೊಂಡAತೆ ಇದು ವಿಶ್ವಾದ್ಯಂತ 325 ಕೋಟಿ ರೂ. ಗಳಿಸಿದೆ. ಈ ರೀತಿಯಾಗಿ, ಇದು ವಿಶ್ವಾದ್ಯಂತ 3೦೦ ಕೋಟಿ ರೂ. ಕ್ಲಬ್‌ಗೆ ಪ್ರವೇಶಿಸಿದ ಅತ್ಯಂತ ವೇಗದ ತಮಿಳು ಚಿತ್ರವಾಗಿದೆ.