ಚೆನ್ನೈ : ತಮಿಳುನಾಡಿನ 21 ದೇವಾಲಯಗಳಿಗೆ ಭಕ್ತಾದಿಗಳು ನೀಡಿದ್ದ 1 ಟನ್ ಚಿನ್ನವನ್ನು ಕರಗಿಸಿರುವ ಎಂ.ಕೆ.ಸ್ಟಾಲಿನ್ ನೇತೃತ್ವದ ಸರ್ಕಾರ ಬ್ಯಾಂಕುಗಳಲ್ಲಿ ಠೇವಣಿ ಇಟ್ಟಿದೆ. ಈ ಬಗ್ಗೆ ಮಾಹಿತಿ ನೀಡಿರುವ ಸರ್ಕಾರ, ತಮಿಳುನಾಡಿನ 21 ದೇವಾಲಯಗಳಲ್ಲಿ ಬಳಕೆಯಾಗದೆ ಉಳಿದಿರುವ ಚಿನ್ನವನ್ನು ಕರಗಿಸಲು ತೀರ್ಮಾನಿಸಲಾಗಿದೆ ಹಾಗೂ ಈಗಾಗಲೇ 1 ಟನ್ ಚಿನ್ನವನ್ನು 24 ಕ್ಯಾರೆಟ್ ಬಿಸ್ಕತ್ತುಗಳಾಗಿ ಕರಗಿಸಿ ಠೇವಣಿ ಇಡಲಾಗಿದೆ ಎಂದು ತಿಳಿಸಿದೆ.
ಠೇವಣಿ ಇಟ್ಟಿರುವ ಚಿನ್ನದಿಂದ ಬಡ್ಡಿರೂಪದಲ್ಲಿ ಸಂಗ್ರಹವಾಗುವ 17.81 ಕೋಟಿ ರೂ. ಆದಾಯವನ್ನು ದೇವಾಲಯಗಳ ಅಭಿವೃದ್ಧಿಗೇ ಬಳಸುವುದಾಗಿ ಹೇಳಿದೆ. ಇದೇ ರೀತಿ ಬಳಕೆಯಾಗದ ಚಿನ್ನವನ್ನು ಮುಂದಿನ ದಿನಗಳಲ್ಲೂ ಕರಗಿಸುವುದಾಗಿ ಪ್ರಕಟಿಸಿದೆ