ಚೆನ್ನೈ : ದೇವಸ್ಥಾನಕ್ಕೆ ತೆರಳಿದ ವೇಳೆ ಹುಂಡಿಗೆ ಕಾಣಿಕೆ ಅರ್ಪಿಸುವ ವೇಳೆ ಆಕಸ್ಮಿಕವಾಗಿ ಭಕ್ತರೊಬ್ಬರ ಕೈ ಜಾರಿ ಬಿದ್ದ ಐಫೋನ್‌ನನ್ನು ದೇವಸ್ಥಾನ ಆಡಳಿತ ಮಂಡಳಿ ಹಿಂದಿರುಗಿಸಲು ಸಾರಾಸಗಟಾಗಿ ನಿರಾಕರಿಸಿದ ಘಟನೆಯೊಂದು ತಮಿಳುನಾಡಿನಲ್ಲಿ ನಡೆದಿದೆ.
ವಿನಾಯಕಪುರಂ ನಿವಾಸಿ ದಿನೇಶ್ ಅವರು ಕಳೆದ ತಿಂಗಳು ಚೆನ್ನೈನ ತಿರುಪೋರೂರು ಕಂದಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಈ ಸಮಯದಲ್ಲಿ, ಕಾಣಿಕೆ ಪೆಟ್ಟಿಗೆಯಲ್ಲಿ ಹಣವನ್ನು ಹಾಕುವಾಗ, ಐಫೋನ್ ಆಕಸ್ಮಿಕವಾಗಿ ಕಾಣಿಕೆ ಪೆಟ್ಟಿಗೆಯಲ್ಲಿ ಬಿದ್ದಿದೆ.ನಾನು ದೇವಸ್ಥಾನ ಆಡಳಿತ ಮಂಡಳಿಯವರನನ್ನ ಕೇಳಿದಾಗ ಹುಂಡಿಗೆ ಹಾಕಿದ ಮೇಲೆ ಮರಳಿಸುವುದಿಲ್ಲ ಎಂದಿದ್ದಾರೆ ಎಂದು ದಿನೇಶ್ ಹೇಳಿದ್ದಾರೆ.
ಈ ಬಗ್ಗೆ ದಿನೇಶ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ, ಶುಕ್ರವಾರ (ಡಿಸೆಂಬರ್ 20) ಅಧಿಕಾರಿಗಳು ಹುಂಡಿ ತೆರೆದಿದ್ದಾರೆ. ಈ ವೇಳೆ ಐಫೋನ್ ಕೂಡ ಪತ್ತೆಯಾಗಿದೆ. ಆದರೆ ದೇವಸ್ಥಾನದವರು ಮೊಬೈಲ್‌ನಲ್ಲಿರುವ ಡೇಟಾವನ್ನು ಕೊಡುತ್ತೇವೆ. ಐಫೋನ್ ನೀಡುವುದಿಲ್ಲ. ಹುಂಡಿಗೆ ಬಿದ್ದ ಬಳಿಕ ಅದು ದೇಗುಲದ ಆಸ್ತಿ ಎಂದು ಫೋನ್ ಕೊಡಲು ಸಾರಾಸಗಟಾಗಿ ನಿರಾಕರಿಸಿದ್ದಾರೆ.
ಐಫೋನ್ ಬೇಕು ಎಂದಿರುವ ದಿನೇಶ್, ಕೇವಲ ಡೇಟಾ ಸ್ವೀಕರಿಸಲು ನಿರಾಕರಿಸಿ ಬರಿಗೈಯಲ್ಲಿ ಹಿಂತಿರುಗಿದ ಘಟನೆ ನಡೆದಿದೆ.