ಚೆನ್ನೈ : ಸಿನಿಮಾ ಬಿಡುಗಡೆ ಯಾಗಿ ಭರ್ಜರಿ ಯಶಸ್ಸು ಕಾಣುತ್ತಿರುವ ನಡುವೆ ಸೂಪರ್ ಸ್ಟಾರ್ ರಜನಿಕಾಂತ್, ಯಾರಿಗೂ ತಿಳಿಯದಂತೆ ಬೆಂಗಳೂರಿಗೆ ಭೇಟಿ ನೀಡಿ, ಬಸವನಗುಡಿಯ ಶ್ರೀ ರಾಮಕೃಷ್ಣಾಶ್ರಮಕ್ಕೆ ತೆರಳಿ ಶ್ರೀರಾಮಕೃಷ್ಣ ಮತ್ತು ಶಾರದ ಮಾತೆಯ ದರ್ಶನ ಪಡೆದಿದ್ದಾರೆ.
ರಜನಿಕಾಂತ್ ಅವರಿಗೆ ಕರ್ನಾಟಕ, ಕನ್ನಡ ಭಾಷೆ ಎಂದರೆ ಎಲಿಲ್ಲದ ಅಭಿಮಾನ ಗೌರವ. ಸದಾ ಕಾಲ ಯಾವುದೇ ಪೂರ್ವ ಯೋಜನೆ ಯಿಲ್ಲದೆ ತಮ್ಮ ಮನಸ್ಸು ಸೆಳೆಯುವಡೆ ಪ್ರಯಾಣಿಸುವ ರಜಿನಿ ಈಗ ಯಾರಿಗೂ ಗೊತ್ತಿಲ್ಲದಂತೆ ಭೇಟಿ ನೀಡಿದ್ದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.
ರಜನಿಕಾಂತ್ ಈ ರೀತಿ ಅನಿರೀಕ್ಷಿತ ಭೇಟಿ ನೀಡುತ್ತಿರುವುದು ಇದು ಮೊದಲೇನಲ್ಲ, ಕಳೆದ ವರ್ಷದ ಮಧ್ಯಭಾಗದಲ್ಲಿ ದಿಢೀರನೆ ಬೆಂಗಳೂರಿಗೆ ಭೇಟಿ ನೀಡಿದ್ದ ಅವರು, ತಾವು ಹಿಂದೆ ಬಿಎಂಟಿಸಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಜಯನಗರದ ಬಿಎಂಟಿಸಿ ಬಸ್ ಡಿಪೋಕ್ಕೆ ಭೇಟಿ ನೀಡಿ ಅಲ್ಲಿದ್ದ ಎಲ್ಲರನ್ನೂ ಚಕಿತಗೊಳಿಸಿದ್ದರು. ಅಲ್ಲಿನ ಸಿಬ್ಬಂದಿಯ ಜತೆಗ ನಿಂತುಫೋಟೋ ತೆಗೆಸಿಕೊಂಡು ಹೋಗಿದ್ದರು. ಈಗ ಪುನಃ ಬೆಂಗಳೂರಿಗೆ ಭೇಟಿ ನೀಡಿದ್ದು, ಅವರು ಚೆನ್ನೈಗೆ ತಲುಪಿದ ನಂತರ ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗುತ್ತಿದೆ.