Friday, November 22, 2024
Flats for sale
Homeದೇಶಚೆನ್ನೈ : ಎನ್‌ಡಿಎ ಒಕ್ಕೂಟದಿಂದ ಹೊರಬಂದ ಅಣ್ಣಾಡಿಎಂಕೆ ಪಕ್ಷ.

ಚೆನ್ನೈ : ಎನ್‌ಡಿಎ ಒಕ್ಕೂಟದಿಂದ ಹೊರಬಂದ ಅಣ್ಣಾಡಿಎಂಕೆ ಪಕ್ಷ.

ಚೆನ್ನೈ : ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ , ಹಿರಿಯ ಮುತ್ಸದ್ದಿ ಅಣ್ಣಾದೊರೈ ಬಗ್ಗೆ ನೀಡಿದ ಹೇಳಿಕೆಗೆ ಆಕ್ರೋಶಗೊಂಡ ಅಣ್ಣಾಡಿಎಂಕೆ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟದಿಂದ ಹೊರಬಂದಿದೆ. ಚೆನ್ನೈ ನಲ್ಲಿ ನಡೆದ ಎಐಎಡಿಎಂಕೆ ಸಂಸದರು, ಶಾಸಕರು ಮತ್ತು ಹಿರಿಯ ನಾಯಕರ ಸಭೆಯಲ್ಲಿ ಬಿಜೆಪಿ ಸಂಬAಧ ಕಡಿದುಕೊಳ್ಳುವ ನಿರ್ಧಾರಕ್ಕೆ ಬರಲಾಗಿದೆ. ಇದೊಂದು ಸಂತೋಷದ ಗಳಿಗೆ ಎಂದು ಎಡಪ್ಪಾಡಿ ಪಳನಿಸ್ವಾಮಿ ಪಕ್ಷ ಹೇಳಿದ್ದರೆ, ಈ ಬೆಳವಣಿಗೆ ಬಗ್ಗೆ ಗುರುವಾರದವರೆಗೂ ಪ್ರತಿಕ್ರಿಯಿಸುವುದಿಲ್ಲ ಎಂದು ಅಣ್ಣಾಮಲೈ ಹೇಳಿದ್ದಾರೆ.

ತಮಿಳುನಾಡಿನ ಬಿಜೆಪಿ ಘಟಕದ ಅಧ್ಯಕ್ಷರಾಗಿ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಚುಕ್ಕಾಣಿ ಹಿಡಿದಾಗಿನಿಂದ ಅಣ್ಣಾಡಿಎಂಕೆ ಮತ್ತು ಬಿಜೆಪಿ ನಡುವೆ ವೈಮನಸ್ಯ ಮನೆಮಾಡಿತ್ತು. ಕೆಲ ಸಂದರ್ಭಗಳಲ್ಲಿ ಇದು ವಿಕೋಪಕ್ಕೆ ಹೋಗಿತ್ತು. ಇದಕ್ಕೆ ತೇಪೆಹಾಕಲು ಕಳೆದ ಶನಿವಾರ ದೆಹಲಿಯಲ್ಲಿ ಕೊನೆಯ ಪ್ರಯತ್ನವೂ ನಡೆದಿತ್ತು. ಆದರೆ ಅಣ್ಣಾದೊರೈ ವಿರುದ್ಧದ ಟೀಕೆಗೆ ಅಣ್ಣಾಮಲೈ ಕ್ಷಮೆಯಾಚಿಸಬೇಕು ಎಲ್ಲವೇ ರಾಜ್ಯ ಘಟಕದಿಂದ ಅವರನ್ನು ಕೆಳಗಿಳಿಸಬೇಕೆಂದು ಎಡಿಎಂಕೆ ಪಟ್ಟುಹಿಡಿದಿತ್ತು. ಆದರೆ ಇದು ಫಲಿಸದ ಕಾರಣ ಇದೀಗ ಎನ್‌ಡಿಎದಿಂದ ಹೊರಬರುವ ದಿಟ್ಟ ನಿರ್ಧಾರವನ್ನು ಕೈಗೊಂಡಿದ್ದಾಗಿ ಪಕ್ಷದ ಉಪಪ್ರಧಾನ ಕಾರ್ಯದರ್ಶಿ ಕೆ.ಪಿ ಮುನುಸ್ವಾಮಿ ಸೋಮವಾರ ಪ್ರಕಟಿಸಿದ್ದಾರೆ. ೨೦೨೪ರ ಲೋಕಸಭಾ ಚುನಾವಣೆಯನ್ನು ಏಕಾಂಗಿಯಾಗಿಯೇ ಪಕ್ಷ ಎದುರಿಸುವುದೆಂದು ಅವರು ಸ್ಪಷ್ಟಪಡಿಸಿದ್ದಾರೆ.

ಅಣ್ಣಾಮಲೈ ಹೇಳಿಕೆ ಏನು: ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ವಿರುದ್ಧ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ವೇಳೆ ಅಣ್ಣಾಮಲೈ, ೧೯೫೦ರಲ್ಲಿ ಮದುರೈನಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಅಣ್ಣಾಡಿಎಂಕೆ ಸ್ಥಾಪಕ ಎಂ.ಜಿ ರಾಮಚAದ್ರನ್‌ರ ರಾಜಕೀಯ ಗುರು ಸಿಎನ್ ಅಣ್ಣಾದೊರೈ ಹಿಂದು ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು. ಇದನ್ನು ಹಿರಿಯ ಸ್ವಾತಂತ್ರö್ಯ ಸೇನಾನಿ ಪಸುಂಪೊನ್ ಮುತ್ತುಸ್ವಾಮಿ ಥೇವಾರ್ ವಿರೋಧಿಸಿದ್ದರು ಎಂದು ಹಳೆಯ ಪ್ರಸಂಗ ಮೆಲುಕು ಹಾಕಿದ್ದರು. ಅಣ್ಣಾಡಿಎಂಕೆ ಅಣ್ಣಾಮಲೈ ಕ್ಷಮೆಗೆ ಪಟ್ಟಹಿಡಿದಿತ್ತು.

RELATED ARTICLES

LEAVE A REPLY

Please enter your comment!
Please enter your name here

Most Popular