ಚಿತ್ರದುರ್ಗ : 3 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ಪೌರಾಯುಕ್ತೆ ಲೋಕಯುಕ್ತ ಬಲೆಗೆ ಬಿದ್ದಿದ್ದಾರೆ.ಪೌರಯುಕ್ತೆ ಟಿ.ಲೀಲಾವತಿ ಹಾಗೂ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ,ಚಳ್ಳಕೆರೆ ಪೌರಾಯುಕ್ತೆ ಲಂಚ ಪಡೆಯುತ್ತಿದ್ದ ವೇಳೆ ಚಳ್ಳಕೆರೆ ನಗರಸಭ ಹಾಗೂ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ನಗರದ ನಾಗರಾಜ್ ಆಚಾರ್ ಎಂಬುವರ ಮನೆ ಖಾತೆ ಬದಲಾವಣೆಯಾ ವೇಳೆ ಮೂರುಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದು ಈ ಸಂದರ್ಭದಲ್ಲಿ ಮೂರು ಲಕ್ಷ ಹಣ ಪಡೆಯುವಾಗ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.
ನಾಗರಾಜ್ ಆಚಾರ್ ಅವರಿಂದ ಮೂರು ಲಕ್ಷ ಲಂಚ ಸ್ವೀಕಾರ ಮಾಡುತ್ತಿದ್ದಾಗ ಪೌರಾಯುಕ್ತೆ ಲೀಲಾವತಿ, ಬಿಲ್ ಕಲೆಕ್ಟರ್ ನಿಶಾಂತ್ ಲೋಕಾಯುಕ್ತ ಅಧಿಕಾರಿಗಳ ಕೈಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಚಿತ್ರದುರ್ಗ ಲೋಕಾಯುಕ್ತ ಎಸ್‌ಪಿ ಎನ್.ವಾಸುದೇವರಾಮ ನೇತೃತ್ವದಲ್ಲಿ ನಡೆದ ದಾಳಿ ನಡೆದಿದೆ.ಭ್ರಷ್ಟ ಅಧಿಕಾರಿ ವಿರುದ್ಧ ನಗರದ ಸಾರ್ವಜನಿಕರು ಪೌರಾಯುಕ್ತರಿಗೆ ಇಡೀ ಶಾಪ ಹಾಕುತ್ತಿದ್ದಾರೆ.
ಈ ದಾಳಿ ವೇಳೆ ಲೋಕಯುಕ್ತ ಎಸ್ಪಿ ಎನ್.ವಾಸುದೇವರಾಮ ಡಿವೈ ಎಸ್ಪಿ ಮೃತ್ಯುಂಜಯ ಪೋಲೀಸ್ ನಿರೀಕ್ಷಕರುಗಳಾ ವೈ.ಶಿಲ್ಪ, ಆರ್.ವಸಂತಕುಮಾರ್. ಲೋಕಾಯುಕ್ತ ಪೊಲೀಸ ಸಿಬ್ಬಂದಿಗಳಾದ ಜೆಎಂ ತಿಪ್ಪೇಸ್ವಾಮಿ ಸಿ ಎಚ್ ಸಿ ಶ್ರೀನಿವಾಸ್ ಆರ್ ಪುಷ್ಪ ಜಿ ಸತೀಶ್ ಸಂತೋಷ್ ಕುಮಾರ್ ಎಂ ರಮೇಶ್ ರಾಜೇಶ್ ಮಂಜುನಾಥ್ ಮಾರುತಿ ಶ್ರೀಪತಿ ಮಹಾಂತೇಶ ಸಾವಿತ್ರಮ್ಮಉಪಸ್ಥಿತರಿದ್ದರು.


