Friday, March 13, 2026
Flats for sale
Homeರಾಜಕೀಯಚಿತ್ರದುರ್ಗ : ಮೋದಿ ನನ್ನ ಕೈಗೆ ಸಿಕ್ರೆ ಕಾಲಲ್ಲಿರೋದು ತೆಗೆದು ಹೊಡೀತಿನಿ ಎಂದು ವಿವಾದಾತ್ಮಕ ಹೇಳಿಕೆ...

ಚಿತ್ರದುರ್ಗ : ಮೋದಿ ನನ್ನ ಕೈಗೆ ಸಿಕ್ರೆ ಕಾಲಲ್ಲಿರೋದು ತೆಗೆದು ಹೊಡೀತಿನಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಚಿತ್ರದುರ್ಗ ಕಾಂಗ್ರೆಸ್ ಮುಖಂಡನ ವಿರುದ್ಧ ಎಫ್​ಐಆರ್ ದಾಖಲು.

ಚಿತ್ರದುರ್ಗ : ಲೋಕಸಭೆ ಚುನಾವಣೆ ಬರ್ತಿದ್ದಂತೆ ಸಿಲಿಂಡರ್ ಬೆಲೆ 100 ರೂಪಾಯಿ ಕಡಿಮೆ ಮಾಡಿದ್ದಾರೆ. ಈಗ್ಯಾಕಲೇ ಮಾಡ್ತಿಯಾ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಏಕ ವಚನದಲ್ಲೇ ವಾಗ್ದಾಳಿ ನಡೆಸಿದದಲ್ಲದೆ ಮೋದಿ ನನ್ನ ಕೈಗೆ ಸಿಕ್ರೆ ಕಾಲಲ್ಲಿರೋದು ಚಪ್ಪಲಿ ತೆಗೆದು ಹೊಡೀತಿನಿ ಎಂದು ಹಿರಿಯೂರಿನ ಡಾ. ಬಿಆರ್ ಅಂಬೇಡ್ಕರ್, ಬಾಬು ಜಗಜೀನವರಾಂ ಸಮುದಾಯ ಭವನದಲ್ಲಿ ಕಾರ್ಯಕ್ರಮ ಉದ್ಘಾಟನಾ ಸಂದರ್ಭದಲ್ಲಿ ಹೇಳಿದ್ದರು.

ಪ್ರಧಾನಿ ಬಗ್ಗೆ ನೀಡಿದ ಅವಹೇಳನಕಾರಿ ಈ ಹೇಳಿಕೆ ಭಾರೀ ವೈರಲ್ ಆಗಿದ್ದು, ಮಂಜುನಾಥ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈಗ ಕಲ್ಲೇಶಯ್ಯ ಎನ್ನುವರು ಮಂಜುನಾಥ್ ವಿರುದ್ಧ ದೂರು ನೀಡಿದ್ದು, ಪ್ರದಾನಿ ಹುದ್ದೆಗೆ ಅಪಮಾನ, ಶಾಂತಿ ಕದಡುವ ಹೇಳಿಕೆ ನೀಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಆಗ್ರಹಿಸಿದ್ದಾರೆ.ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಕಲ್ಲೇಶಯ್ಯ ಅವರು ನೀಡಿದ ದೂರಿನ ಅನ್ವಯ ಕಾಂಗ್ರೆಸ್ ಮುಖಂಡ ಜಿಎಸ್ ಮಂಜುನಾಥ್ ವಿರುದ್ಧ ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular