ಚಿತ್ರದುರ್ಗ : ದೇಶದ ಪ್ರಧಾನಿ ಅಂದರೆ ಅತ್ತ್ಯುನ್ನತ ಸ್ಥಾನ ಆ ಸ್ಥಾನಕ್ಕೆ ಅವರದ್ದೇ ಗೌರವ ಇರುತ್ತೆ ,ಆ ಸ್ಥಾನಕ್ಕೆ ಗೌರವ ಕೊಡುವುದು ಜನಸಾಮನ್ಯರ ಕರ್ತವ್ಯ ಆದರೆ ಇಲ್ಲೊಬ್ಬ ಮೋದಿ ನನ್ನ ಕೈಗೆ ಸಿಕ್ರೆ ಕಾಲಲ್ಲಿರೋದು ಚಪ್ಪಲಿ ತೆಗೆದು ಹೊಡೀತಿನಿ ಎಂದು ಸಚಿವ ಡಿ. ಸುಧಾಕರ್, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಇದ್ದ ವೇದಿಕೆಯ ಮೇಲೆ ನಿಂತುಕೊಂಡು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾರ್ಮಿಕರ ಕಲ್ಯಾಣ ಮಂಡಳಿಯ ಉಪಾಧ್ಯಕ್ಷ ಜಿ.ಎಸ್ ಮಂಜುನಾಥ್ ವಾಗ್ದಾಳಿ ನಡೆಸಿದ್ದಾರೆ.
ಲೋಕಸಭೆ ಚುನಾವಣೆ ಬರ್ತಿದ್ದಂತೆ ಸಿಲಿಂಡರ್ ಬೆಲೆ 100 ರೂಪಾಯಿ ಕಡಿಮೆ ಮಾಡಿದ್ದಾರೆ. ಈಗ್ಯಾಕಲೇ ಮಾಡ್ತಿಯಾ ಎಂದು ಏಕ ವಚನದಲ್ಲೇ ವಾಗ್ದಾಳಿ ನಡೆಸಿದ ಘಟನೆ ಹಿರಿಯೂರಿನ ಡಾ. ಬಿಆರ್ ಅಂಬೇಡ್ಕರ್, ಬಾಬು ಜಗಜೀನವರಾಂ ಸಮುದಾಯ ಭವನದಲ್ಲಿ ಕಾರ್ಯಕ್ರಮ ಉದ್ಘಾಟನಾ ನಡೆಸಿ ಮಾತನಾಡಿದ ಅವರು ಇಷ್ಟು ದಿನ 95 ಸಾವಿರ ಒಂದು ಲಕ್ಷ ಮುಖಕ್ಕೆ ಹೊಡೆದು ಕಿತ್ಕೊಂಡು ಈಗ 100 ಫ್ರೀ ಅಂತಿದ್ದಾನೆ. 465 ರೂಪಾಯಿ ಇದ್ದ ಸಿಲಿಂಡರ್ ಬೆಲೆ 1200 ರೂ ಯಾಕೆ ಮಾಡ್ದೆ ಅಂತಾ ನಾವು ಪ್ರಶ್ನೆ ಮಾಡಬೇಕು. ಚುನಾವಣೆ ಆದ ಮೇಲೆ ಸಿಲಿಂಡರ್ ದರ 1400 ರೂಪಾಯಿ ಮಾಡ್ತೀಯಾ ಅಂತಾ ಪ್ರಶ್ನೆ ಮಾಡ್ಬೇಕು. ಲಕ್ಷ ರೂಪಾಯಿ ನಮ್ಮಿಂದ ದೋಚಿ, ನೂರು ಸಿಲಿಂಡರ್ ರೇಟ್ ಕಡಿಮೆ ಮಾಡಿದ್ರು ಎಂದು ಜಿ.ಎಸ್ ಮಂಜುನಾಥ್ ಹೇಳಿದ್ದಾರೆ.
ನಾವು ದೇವಸ್ಥಾನ ಕಟ್ಟಲಿಲ್ಲ, ನಾವು ಅದನ್ನು ವಿರೋಧ ಮಾಡಿಲ್ಲ, ನಮ್ಮ ಸಂಸ್ಕೃತಿಯೂ ಅದಲ್ಲ. ನಾವು ಯುನಿವರ್ಸಿಟಿಗಳನ್ನು ಕಟ್ಟಿದ್ದೇವೆ. ಅದರಲ್ಲಿ ಕಲಿತವರೇ ಈಗ ಬಿಜೆಪಿಯಲ್ಲಿ ನಿಂತು, ಕಾಂಗ್ರೆಸ್ ಏನು ಮಾಡಿದೆ ಅಂತಾ ಪ್ರಶ್ನೆ ಮಾಡ್ತಿದ್ದಾರೆ.ಎಂದು ಜಿ.ಎಸ್ ಮಂಜುನಾಥ್ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.