Saturday, March 14, 2026
Flats for sale
Homeರಾಜ್ಯಚಿತ್ರದುರ್ಗ ; ಚಿಕ್ಕಬೆನ್ನೂರು ಭರಮಸಾಗರ ಸಮೀಪ ಭೀಕರ ರಸ್ತೆ ಅಪಘಾತ ಮೂವರು ಸಾವು,ನಾಲ್ವರ ಸ್ಥಿತಿ...

ಚಿತ್ರದುರ್ಗ ; ಚಿಕ್ಕಬೆನ್ನೂರು ಭರಮಸಾಗರ ಸಮೀಪ ಭೀಕರ ರಸ್ತೆ ಅಪಘಾತ ಮೂವರು ಸಾವು,ನಾಲ್ವರ ಸ್ಥಿತಿ ಗಂಭೀರ.

ಚಿತ್ರದುರ್ಗ ; ಚಿತ್ರದುರ್ಗ ಜಿಲ್ಲೆಯ ಚಿಕ್ಕಬೆನ್ನೂರು ಭರಮಸಾಗರ ಸಮೀಪ ಎನ್‌ಹೆಚ್4 ನಲ್ಲಿ ಲಾರಿ ಮತ್ತು ಕಾರ್ ನಡುವೆ ಭೀಕರ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದು ನಾಲ್ವರ ಸ್ಥಿತಿ ಗಂಭೀರವಾದ ಘಟನೆ ವರದಿಯಾಗಿದೆ. ಒಟ್ಟು ಕಾರಿನಲ್ಲಿ 8 ಜನರಿದ್ದು ಇಬ್ಬರು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನುಳಿದ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರಿನ ತಣಸಂದ್ರ ಮೂಲದವರು ಪ್ರಜ್ವಲ್ ರೆಡ್ಡಿ(30), ಹರ್ಷಿತಾ(28), ಮೋಹನ್ (2) ಮೃತ ದುರ್ದೈವಿಗಳು. ಬೆಂಗಳೂರಿನಿಂದ ಗೋವಾಕ್ಕೆ ತೆರಳುವ ವೇಳೆ ಚಿಕ್ಕಬೆನ್ನೂರು ಗ್ರಾಮದ ಬಳಿ ಕಾರಿಗೆ ಲಾರಿ ಡಿಕ್ಕಿ ಹೊಡೆದಿದೆ. ಲಾರಿ ಟೈರ್ ಬ್ಲಾಸ್ಟ್ ಆದ ಹಿನ್ನೆಲೆಯಲ್ಲಿ ಹಿಂಬದಿಯಿಂದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆಂದು ತಿಳಿದುಬಂದಿದೆ.

ಭರಮಸಾಗರ ಪೊಲೀಸ್ (Police) ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ,ತನಿಖೆ ನಡೆಯುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular