Friday, March 13, 2026
Flats for sale
Homeರಾಜ್ಯಚಿತ್ರದುರ್ಗ : ಭೀಕರ ಅಪಘಾತ - 3 ಪುಟಾಣಿ ಮಕ್ಕಳು ಸೇರಿ ನಾಲ್ವರ ದುರ್ಮರಣ.

ಚಿತ್ರದುರ್ಗ : ಭೀಕರ ಅಪಘಾತ – 3 ಪುಟಾಣಿ ಮಕ್ಕಳು ಸೇರಿ ನಾಲ್ವರ ದುರ್ಮರಣ.

ಚಿತ್ರದುರ್ಗ : ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಸೇತುವೆಗೆ ಕಾರು ಡಿಕ್ಕಿ ಹೊಡೆದ ಪರಿಣಾಮ 3 ಪುಟಾಣಿ ಮಕ್ಕಳು ಸೇರಿ ನಾಲ್ವರು ಸಾವನಪ್ಪಿದ ಘಟನೆ ವರದಿಯಾಗಿದೆ.

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಹೆಗ್ಗೆರೆ ಗೇಟ್ ರಾಷ್ಟೀಯ ಹೆದ್ದಾರಿ 150 ಎ ಪ್ರದೇಶದಲ್ಲಿ ಈ ಅಪಘಾತ ನಡೆದಿದೆ.ಲಿಂಗಪ್ಪ (26), ಸಿಂಧು ಶ್ರೀ(2) ಅಯ್ಯಳಪ್ಪ (5) ತಿಂಗಳು, ರಕ್ಷಾ(3)ತಿಂಗಳು ಮೃತ ದುರ್ದೈವಿಗಳು.

ಕಾರಿನಲ್ಲಿದ್ದ ಇನ್ನೂ ಮೂವರಿಗೆ ಗಂಬೀರ ಗಾಯಗೊಂಡಿದ್ದು,ಗಾಯಾಳುಗಳು ಯಲ್ಲಮ್ಮ 30, ಮಲ್ಲಮ್ಮ 20 ನಾಗಪ್ಪ 35 ರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮೃತರು ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ದಂಡಮ್ಮನಹಳ್ಳಿ ಗ್ರಾಮದ ನಿವಾಸಿಗಳಾಗಿದ್ದು ಮೃತರೆಲ್ಲ ಒಂದೇ ಕುಟುಂಬದವರು ಎಂದು ತಿಳಿದು ಬಂದಿದೆ.

ದೇವದುರ್ಗದಿಂದ ಬೆಂಗಳೂರಿಗೆ ತೆರಳುವಾಗ ಈ ಅಪಘಾತವಾಗಿದ್ದು,ನಸುಕಿನ ವೇಳೆ ಚಾಲಕನು ನಿದ್ರೆ ಮಂಪರಿನಲ್ಲಿ ಜಾರಿದ ಕಾರಣ ಈ ಘಟನೆ ನಡೆದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದಿದೆ.

ಸ್ಥಳಕ್ಕೆ ಪಿಎಸ್ಐ ಶಿವರಾಜ್ ಭೇಟಿ ಪರಿಶೀಲನೆ ನಡೆಸಿದ್ದು ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular