ಚಿತ್ರದುರ್ಗ : ತಮ್ಮಮ್ಮಿಬ್ಬರ ಮಕ್ಕಳೊಂದಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗೌರಸಮುದ್ರ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಲ್ಲಸಮುದ್ರ ಗ್ರಾಮದಲ್ಲಿ ಮಾರಕ್ಕ ಎನ್ನುವ ಮಹಿಳೆ ತಮ್ಮಿ ಇಬ್ಬರ ಮಕ್ಕಳೊಂದಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಮಾರಕ್ಕ (24) ವರ್ಷ,ಮಕ್ಕಳಾದ ನಯನ (4) ಹರ್ಷವರ್ಧನ (2) ವರ್ಷ ಎಂದು ತಿಳಿದು ಬಂದಿದೆ .
ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದು,ಕಾರಣ ತಿಳಿದು ಬಂದಿಲ್ಲಾ .
ತಳುಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು,ಘಟನಾ ಸ್ಥಳಕ್ಕೆ ಚಿತ್ರದುರ್ಗ ಎಎಸ್‌ಪಿ ಲಕ್ಷ್ಮೀನಾರಾಯಣ್ ಹಾಗೂ ಚಳ್ಳಕೆರೆ ಡಿಐಎಸ್ ಪಿ ಟಿ.ಬಿ.ರಾಜಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


