Thursday, March 12, 2026
Flats for sale
Homeರಾಜ್ಯಚಿತ್ರದುರ್ಗ : ತಹಸೀಲ್ದಾರ್ ಜೀಪ್‌ಗೆ ಬೆಂಕಿ ಹಚ್ಚಿ ವಿಕೃತಿ ಮೆರೆದ ಯುವಕ,ಪ್ರಕರಣ ದಾಖಲು ..!

ಚಿತ್ರದುರ್ಗ : ತಹಸೀಲ್ದಾರ್ ಜೀಪ್‌ಗೆ ಬೆಂಕಿ ಹಚ್ಚಿ ವಿಕೃತಿ ಮೆರೆದ ಯುವಕ,ಪ್ರಕರಣ ದಾಖಲು ..!

ಚಿತ್ರದುರ್ಗ : ವಿಧಾನ ಸೌಧದ‌ ಮುಂದೆ ಬೈಕಿಗೆ ಬೆಂಕಿ ಹಚ್ಚಿದ್ದ ಯುವಕ ಇಂದು ತಹಶೀಲ್ದಾರ್ ಜೀಪಿಗೆ ಬೆಂಕಿ ಇಟ್ಟಿರುವ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯಲ್ಲಿ ನಡೆದಿದೆ.

ಈ ಹಿಂದೆ ಆಗಸ್ಟ್ 14 ರಂದು ಡಿಆರ್ ಡಿಓ,ಮೆಟ್ರೊ ಹಾಗು ವಿಧಾನಸೌಧಕ್ಕೆ ಬೆಂಕಿ ಹಚ್ಚುವುದಾಗಿ ವೀಡಿಯೋ ವೈರಲ್ ಮಾಡಿದ್ದ ಚಳ್ಳಕೆರೆ ಯ ಗಾಂಧಿನಗರದ ಪೃಥ್ವಿ ಎಂಬ ಯುವಕ ಪೊಲಿಸರ ವಿರುದ್ಧ ದೂರು ದಾಖಲಿಸದ ಆರೋಪ ಮಾಡಿದ್ದನು. ಹೀಗಾಗಿ ಎಎಸ್ ಐ ಮುಸ್ಟೂರಪ್ಪ ಎನ್ನುವರನ್ನು ಪೊಲೀಸ್ ಇಲಾಖೆ‌ಸಸ್ಪೆಂಡ್ ಮಾಡಿದ್ದು,ಯುವಕನನ್ನು ವಶಕ್ಕೆ ಪಡೆದು ಆತನಿಂದ ಇಂತಹ ಕೃತ್ಯ ಮರುಕಳಿಸದಂತೆ ಬಾಂಡ್ ಪೇಪರ್ ನಲ್ಲಿ ಹೇಳಿಕೆ ಧಾಖಲಿಸಿದ್ರು.ಇಷ್ಟಕ್ಕೆ ಸುಮ್ಮನಿರದ ಆಸಾಮಿ ವಿಧಾನಸೌಧದ ಬಳಿ ಬೈಕ್ ಗೆ ಬೆಂಕಿ ಇಟ್ಟು ಆತಂಕ ಸೃಷ್ಟಿಸಿದ್ದನು.ಇದೀಗ ಮತ್ತೆ ಇಂದು ಚಳ್ಳಕೆರೆ ತಹಶಿಲ್ದಾರ್ ಜೀಪ್ ಗೆ ಬೆಂಕಿ ಹಚ್ಚಿರುವ ಆಸಾಮಿಯು ಕಂದಾಯ ಇಲಾಖೆ ಅಧಿಕಾರಿಗಳಲ್ಲಿ ಭಯಭೀತಿ ನಿರ್ಮಾಣ ಮಾಡಿದ್ದಾನೆ.

ಆದರೆ ಅಧೃಷ್ಟವಶಾತ್ ಸ್ಥಳದಲ್ಲಿದ್ದ ಸಿಬ್ಬಂದಿಗಳು ಹಾಗು ಸಾರ್ವಜನಿಕರು ಬೆಂಕಿಯನ್ನು ನಂದಿಸಿದ್ದು,ದೊಡ್ಡ ಅವಘಡ ತಪ್ಪಿದಂತಾಗಿದೆ.ಇಷ್ಟೆಲ್ಲಾ ಅವಾಂತರ ಮಾಡಿದ ಪೃಥ್ವಿ ರಾಜಾರೋಷವಾಗಿ ಜೀಪಿನ ಮೇಲೆ ನಿಂತು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಈ ವೇಳೆ ಸ್ಥಳದಲ್ಲಿದ್ದ ಜನರು ಈತನನ್ನು ಪೊಲೀಸರ ವಶಕ್ಕೆ ನೀಡಿದ್ದು,ಠಾಣೆಯಲ್ಲಿ ವಿಚಾರಣೆಗೊಳಪಡಿಸಿದ್ದಾರೆ .

ಈ ಬಗ್ಗೆ ಚಳ್ಳಕೆರೆ ತಾಲ್ಲೂಕು ತಹಶಿಲ್ದಾರ್ ರೆಹನ್ ಪಾಷ ಕೂಡ ಈ ಬ್ಲಾಕ್ ಮೇಲ್ ಯುವಕನಿಗೆ ಕಠಿಣ‌ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದ್ದಾರೆ.ಈ ಸಂಬಂಧ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಧಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular