ಚಿತ್ರದುರ್ಗ : ಅಲ್ಲ ಇಲ್ಲಿ ಬಾಂಗ್ಲಾದೇಶದ,ಪಾಕಿಸ್ತಾನದ ಪ್ರಜೆಗಳು ಬಂದು ನೆಲೆಸಲು ಯಾರು ಕಾರಣ ಮೊದಲು ಅವರನ್ನು ಎಡೆಮೂರಿ ಕಟ್ಟುವ ಅಗತ್ಯವಿದೆ.ಯಾಕೆಂದರೆ ಇಲ್ಲಿನ ಪ್ರಜೆಗಳ ಬೆಂಬಲವಿಲ್ಲದೆ ಇಲ್ಲಿ ಬಂದು ನೆಲೆಸಲು ಸಾಧ್ಯವೇವಿಲ್ಲವೆಂಬುದು ಸ್ಥಳೀಯ ಸಂಘಟನೆಗಳ ಮಾತು.
ಬಾಂಗ್ಲಾದೇಶದಿಂದ ಕಲ್ಕತ್ತಾ ಸೇರಿ ದೇಶದ ವಿವಿಧ ರಾಜ್ಯಗಳಿಗೆ ಎಂಟ್ರಿಯಾಗಿವ ಘಟನೆ ಬೆಳಕಿಗೆಬಂದಿದೆ. 6 ಜನ ಬಾಂಗ್ಲಾ ಪ್ರಜೆಗಳನ್ನು ಚಿತ್ರದುರ್ಗ ಪೊಲೀಸರು ವಶಕ್ಕೆ ಪಡೆಡಿದ್ದು ಬಾಂಗ್ಲಾದೇಶ ನಿವಾಸಿಗಳಾದ ಸುಮನ್ ಹುಸೇನ್, ಶೇಕ್ ಸೈಪುರ್ ರೆಹಮಾನ್, ಮಝಾರುಲ್, ಅಜೀಜುಲ್‌ಶೇಖ್,ಮೊಹಮ್ಮದ್ ಶಕೀಬ್ ಸಿಕ್ಕದಾರ್, ಸಾನೋವರ್ ಹುಸೇನ್ ರವರನ್ನು ಪೊಲೀಸರು ಬಂಧಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಲವು ಕಡೆ ಬಾಂಗ್ಲಾ ನುಸುಳುಕೋರರು ಎಂಟ್ರಿ ಆಗಿರುವ ಶಂಕೆ ದಟ್ಟವಾಗಿದ್ದು ಕಲ್ಕತ್ತಾದಲ್ಲಿ ನಕಲಿ ಆಧಾರ್ ಕಾರ್ಡ್, ವೋಟರ್ ಐಡಿ,ಪಾಸ್ ಬುಕ್, ಒಂದು ಪಾಸ್ ಪೋರ್ಟ ಮಾಡಿ ಉದ್ಯೋಗ ಅರಸಿ ಬಂದು ಭಾರತದ ಲೇಬರ್ ಕಾರ್ಡ್ ಮಾಡಿರುವುದು ಬೆಳಕಿಗೆಬಂದಿದೆ.
ಜಿಲ್ಲೆಯಲ್ಲಿ ಬಾಂಗ್ಲಾ ಪ್ರಜೆಗಳ ದೊಡ್ಡ ಜಾಲ ಹುಡುಕಾಟಕ್ಕೆ ಪೊಲೀಸರು ಮುಂದಾಗಿದ್ದು ಎಲ್ಲಾ ದಾಖಲಾತಿಯನ್ನು ಚಿತ್ರದುರ್ಗ ಪೊಲೀಸರು ವಶಕ್ಕೆಪಡೆಡಿದ್ದಾರೆ.SP ರಂಜಿತ್ ಕುಮಾರ್ ಬಂಡಾರೂ, DYSP ದಿನಕರ್ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದ್ದು ಚಿತ್ರದುರ್ಗ ಕೋಟೆ ಪೊಲೀಸ್ ಠಾಣೆಯಲ್ಲಿ ಬಾಂಗ್ಲಾ ನುಸುಳುಕೋರರ ವಿಚಾರಣೆ ನಡೆಯುತ್ತಿದೆ.ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಬಾಂಗ್ಲಾ ಪ್ರಜೆಗಳನ್ನು ಕೊಂಡಿದಿದ್ದು ವೈದ್ಯಕೀಯ ಪರೀಕ್ಷೆ ನಂತರ ಬೆಂಗಳೂರಿಗೆ ಕರೆದೊಯ್ಯಡಿದ್ದಾರೆಂದು ಮಾಹಿತಿ ದೊರೆತಿದೆ.