Thursday, April 2, 2026
Flats for sale
Homeರಾಜ್ಯಚಿತ್ರದುರ್ಗ ; ಉಪನ್ಯಾಸಕನ ಜೊತೆ ಅನೈತಿಕ ಸಂಬಂಧದ ಅರೋಪ,ಡೆತ್ ನೋಟ್ ಬರೆದಿಟ್ಟು BMS ವಿಧ್ಯಾರ್ಥಿನಿ ಆತ್ಮಹತ್ಯೆ.

ಚಿತ್ರದುರ್ಗ ; ಉಪನ್ಯಾಸಕನ ಜೊತೆ ಅನೈತಿಕ ಸಂಬಂಧದ ಅರೋಪ,ಡೆತ್ ನೋಟ್ ಬರೆದಿಟ್ಟು BMS ವಿಧ್ಯಾರ್ಥಿನಿ ಆತ್ಮಹತ್ಯೆ.

ಚಿತ್ರದುರ್ಗ : ಉಪನ್ಯಾಸಕನ ಜೊತೆ ಅನೈತಿಕ ಸಂಬಂಧ ಆರೋಪ ಕೇಳಿಬಂದ ಹಿನ್ನೆಲೆ ಅವಮಾನ ಸಹಿಸಲಾರದೆ BMS ವಿಧ್ಯಾರ್ಥಿನಿ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ನಗರದಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ BMS ಅಂತಿಮ ವರ್ಷದ ವಿಧ್ಯಾರ್ಥಿನಿಯನ್ನು ಲಿಖಿತ (22) ಎಂದು ತಿಳಿದುಬಂದಿದೆ. ವಿಧ್ಯಾರ್ಥಿನಿ ಮಲ್ಲಾಡಿಹಳ್ಳಿ ಆಯುರ್ವೇದ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು.

ಉಪನ್ಯಾಸಕ ಡಾ.ರಾಜು ಜೊತೆ ಅನೈತಿಕ ಸಂಬಂಧ ಇದೆ ಎಂದು ಸಹಪಾಠಿಗಳು ಅಪಪ್ರಚಾರ ಮಾಡಿದ್ದು ಈ ಹಿನ್ನೆಲೆ ಉಪನ್ಯಾಸಕ ಡಾ.ರಾಜು ಪತ್ನಿ ನಿಶಾ ಕಾಲೇಜಿಗೆ ಬಂದು ಮೃತ ಯುವತಿ ಮೇಲೆ ಗಲಾಟೆ ಮಾಡಿದ್ದರು.ಇದರಿಂದ ಅವಮಾನ ಸಹಿಸಲಾರದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ.

ಈ ಬಗ್ಗೆ ದೆತ್ತ್ ನೋಟ್ ಬರೆದಿದ್ದು ನನ್ನ ಸಾವಿಗೆ ಅನುಷಾ, ರಕ್ಷಾ, ಚಿನ್ಮಯಿ, ಸಾಗರ್ ಹಾಗೂ ನಿಶಾರಾಜ್ ಕಾರಣ ಎಂದು ಉಲ್ಲೇಖಿಸಲಾಗಿದೆ.

ಸ್ಥಳಕ್ಕೆ ಚಿತ್ರದುರ್ಗ ಎಸ್ಪಿ ರಂಜಿತ್ ಕುಮಾರ್ ಬಂಡಾರೂ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular