ಚಿತ್ರದುರ್ಗ : ಅಡಿಕೆ ಖರೀದಿಸಿದ್ದ ಹಣ ಕೊಡದೆ ವ್ಯಾಪಾರಿಗೆ ಸತಾಯಿಸಿ ಬೈದಿದ್ದ ಹಿನ್ನಲೆ ಮನನೊಂದು ಅಡಿಕೆ ಗೋಡಾನಲ್ಲಿ ವ್ಯಾಪಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿತ್ರದುರ್ಗ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ.
ಸಿದ್ದಾಪುರ ಗ್ರಾಮದ ಶೈಲೇಶ್(42) ನೇಣಿಗೆ ಶರಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಾಪಾರಿ.
ಮೃತ ಶೈಲೇಶ್ ಉದ್ಯಮಿ ಉದಯ್ ಶೆಟ್ಟಿಗೆ ಅಡಿಕೆ ಮಾರಿದ್ದು ಅಡಿಕೆ ಖರಿದೀಸಿದ್ದ 6ಕೋಟಿ 60 ಲಕ್ಷ ಹಣ ನೀಡದೆ ಹಿನ್ನೆಲೆ ಹಣ ಕೇಳಲು ಹೋದಾಗ ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದರು.ಈ ಬಗ್ಗೆ ಡೆತ್ ನೋಟಲ್ಲಿ ಬರೆದಿಟ್ಟಿದ್ದು ತಂದೆಗೆ ಕ್ಷಮೆ ಕೇಳಿ ನೋವು ತೋಡಿಕೊಂಡಿದ್ದರು.ಉದ್ಯಮಿ ಉದಯ್ ಶೆಟ್ಟಿ ವಿರುದ್ದ FIR ದಾಖಲಿಸಿದ್ದು ಚಿತ್ರದುರ್ಗ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.