Thursday, March 12, 2026
Flats for sale
Homeರಾಜ್ಯಚಿಕ್ಕೋಡಿ : ಸ್ವಾಮೀಜಿಯಿಂದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ,ಫೋಕ್ಸೊ ಪ್ರಕರಣ ದಾಖಲು,ಕಾಮುಕ ಸ್ವಾಮೀಜಿಯ ಬಂಧನ ..!

ಚಿಕ್ಕೋಡಿ : ಸ್ವಾಮೀಜಿಯಿಂದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ,ಫೋಕ್ಸೊ ಪ್ರಕರಣ ದಾಖಲು,ಕಾಮುಕ ಸ್ವಾಮೀಜಿಯ ಬಂಧನ ..!

ಚಿಕ್ಕೋಡಿ : ಅಪ್ರಾಪ್ತ ಬಾಲಕಿಯ‌ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಮೇಖಳಿಯ ರಾಮಮಂದಿರ ಲೋಕೇಶ್ವರ ಮಹಾರಾಜನ ಮೇಲೆ ಫೋಕ್ಸೊ ಕೇಸ್ ದಾಖಲಿಸಿ ಬಂಧಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮೇಖಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಸ್ವಾಮೀಜಿ ಅಪ್ರಾಪ್ತ ಬಾಲಕಿಯ‌ನ್ನು ರಾಯಚೂರಿಗೆ ಕರೆದುಕೊಂಡು ಹೋಗುವಾಗ ಬಾಗಲಕೋಟೆ ನಗರದ ಲಾಡ್ಜ್ ಒಂದರಲ್ಲಿ ರೂಮ್ ಮಾಡಿ ಅತ್ಯಾಚಾರ ವೆಸಗಿದ್ದು ಬಳಿಕ ರಾಯಚೂರಿಗೆ ಕರೆದುಕೊಂಡು ಹೋಗಿ ಅಲ್ಲಿಯೂ ಅತ್ಯಾಚಾರ ವೆಸಗಿದ್ದಾನೆಂದು ದೂರಿನಲ್ಲಿ ತಿಳಿದಿದೆ.

ಲೈಂಗಿಕ ದೌರ್ಜನ್ಯ ಎಸಗಿ ಸ್ವಾಮಿ ಬಾಲಕಿಯನ್ನು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಬಸ್ ನಿಲ್ದಾಣದಲ್ಲಿ ಬಿಟ್ಟುಹೋಗಿದ್ದು ಈ ಕುರಿತು ಬಾಗಲಕೋಟೆ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿ ಬೆಳಗಾವಿಯ ಮೂಡಲಗಿ ಪೊಲೀಸ್ ಠಾಣೆಗೆ ಪ್ರಕರಣ ವರ್ಗಾವಣೆ ಮಾಡಿದ್ದೂ ಆರೋಪಿ ಸ್ವಾಮಿಯನ್ನ ಅರೆಸ್ಟ್ ಮಾಡಿ ಮೂಡಲಗಿ ಪೊಲೀಸರು ಜೈಲಿಗಟ್ಟಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular