ಚಿಕ್ಕಮಗಳೂರು : ಸಚಿವ ಜಮೀರ್ ಅಹಮದ್ರನ್ನು ಗಡಿಪಾರು ಮಾಡ್ಬೇಕು, ಕಿತ್ತಾಕಬೇಕು ಎಂದು ಮಾತಾಡುತ್ತಿದ್ದಾರೆ. ಅದೆಲ್ಲ ಬೇಡ ಯಾವುದಾದರೂ ಆಲದ ಮರಕ್ಕೆ ನೇಣು ಹಾಕಿ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.
ಚಿಕ್ಕಮಗಳೂರಿನಲ್ಲಿ ದತ್ತಮಾಲೆ ಅಭಿಯಾನದ ಧರ್ಮಸಭೆಯಲ್ಲಿ ಅವರು ಮಾತನಾಡಿದರು. ಈ ವೇಳೆ, ಬೆಂಗಳೂರಿನ ಚಾಮರಾಜಪೇಟೆಯಲ್ಲಿ 25,೦೦೦ ಬಾಂಗ್ಲಾದೇಶಿ ಮುಸಲ್ಮಾನರಿದ್ದಾರೆ. ಅವರನ್ನು ಜಮೀರ್ ಸಾಕಿ, ಓಟರ್ ಲೀಸ್ಟ್ ತಯಾರು ಮಾಡಿದ್ದಾನೆ. ಈ ರೀತಿ ಅನೇಕ ಬ್ಲಂಡರ್ ಗಳನ್ನ ಸನ್ಮಾನ್ಯ ಔರಂಗಜೇಬ್ ಮಾಡಿದ್ದಾನೆ ಎಂದು ಏಕವಚನದಲ್ಲೇ ಕಿಡಿಕಾರಿದ್ದಾರೆ
ಬಿಜೆಪಿಯವರು ಜಮರ್ನನ್ನು ಗಡಿಪಾರು, ಕಿತ್ತಾಕಿ, ಸಸ್ಪೆಂಡ್ ಮಾಡಿ ಅಂತಿದ್ದಾರೆ. ಗಡಿಪಾರು, ಸಸ್ಪೆಂಡ್ ಬೇಡ ಯಾವುದಾರೂ ಆಲದಮರಕ್ಕೆ ನೇಣು ಹಾಕಿ. ಜಮೀರ್ ಈ ದೇಶದಲ್ಲಿ ಇರಲು ಲಾಯಕ್ಕಿಲ್ಲ. ಯಾರ ಭೂಮಿ, ಕಟ್ಟಡ ಬೇಕೋ ಅದನ್ನು ತೆಗೆದುಕೊಂಡು ನುಂಗಿ ನೀರು ಕುಡಿಯೋಕೆ ಇದು ನಿಮ್ಮ ಅಪ್ಪಂದ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.