Thursday, March 12, 2026
Flats for sale
Homeಕ್ರೈಂಚಿಕ್ಕಮಗಳೂರು : ವಿದೇಶಿ ಮಹಿಳೆಯಿಂದ ಅತ್ಯಾಚಾರ ಆರೋಪ : ಯೋಗ ಗುರು ಬಂಧನ..!

ಚಿಕ್ಕಮಗಳೂರು : ವಿದೇಶಿ ಮಹಿಳೆಯಿಂದ ಅತ್ಯಾಚಾರ ಆರೋಪ : ಯೋಗ ಗುರು ಬಂಧನ..!

ಚಿಕ್ಕಮಗಳೂರು : ವಿದೇಶಿ ಮಹಿಳೆಯಿಂದ ಅತ್ಯಾಚಾರ ಆರೋಪ ಹಿನ್ನೆಲೆ ಯೋಗ ಗುರು ಬಂಧನವಾದ ಘಟನೆ ನಡೆದಿದೆ .ಬಂಧಿತ ಆರೋಪಿಯನ್ನು ಪ್ರದೀಪ್ ಉಲ್ಲಾಳ್ (53) ಎಂದು ತಿಳಿದುಬಂದಿದೆ.

ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಗ್ರಾಮದಲ್ಲಿee ಘಟನೆ ನಡೆದಿದ್ದು ಪ್ರದೀಪ್ ಉಲ್ಲಾಳ್ ಮಲ್ಲೇನಹಳ್ಳಿಯಲ್ಲಿ ಯೋಗ ಶಾಲೆ ನಡೆಸುತ್ತಿದ್ದ. ಯೋಗ ತರಬೇತಿಗೆಂದು ಕ್ಯಾಲಿಫೋರ್ನಿಯಾದಿಂದ ಮಹಿಳೆಯೊಬ್ಬರು ಬಂದಿದ್ದರು ಎಂದು ತಿಳಿದಿದೆ.

ವಿದೇಶಿ ಮಹಿಳೆಯಿಂದ ಯೋಗ ಗುರು ಪ್ರದೀಪ್‌ ಸುಮಾರು 20 ಲಕ್ಷ ರೂ. ಹಣ ಕಿತ್ತಿದ್ದ ಎಂಬ ಆರೋಪವು ಇದೆ. ಇದೇ ವಿಚಾರವಾಗಿ ಯೋಗ ಗುರು ಹಾಗು ಕ್ಯಾಲಿಫೋರ್ನಿಯಾ ಮಹಿಳೆಗೂ ಜಗಳವಾಗಿತ್ತು.ಕಳೆದ 4 ವರ್ಷದಿಂದಲೂ ಯೋಗ ಗುರು ಜತೆ ಮಹಿಳೆ ಸಂಬಂಧ ಹೊಂದಿದ್ದರು. ಬೇರೆ ಮಹಿಳೆಯರ ಜತೆಯೂ ಗುರುವಿನ ಸಂಬಂಧ ತಿಳಿದ ಮಹಿಳೆ ಜಗಳವಾಡಿದ್ದರು. ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಈ ಹಿನ್ನೆಲೆಯಲ್ಲಿ ಯೋಗ ಗುರುವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular