Wednesday, November 5, 2025
Flats for sale
Homeರಾಜ್ಯಚಿಕ್ಕಮಗಳೂರು : ರೋಡ್ ಬ್ಲಾಕ್ ಮಾಡಿದರ ಪರಿಣಾಮ ಚಾರ್ಮಾಡಿ ಘಾಟಿ ಜಲಪಾತಗಳ ಬಳಿ ಪೊಲೀಸರ ನಿಯೋಜನೆ.

ಚಿಕ್ಕಮಗಳೂರು : ರೋಡ್ ಬ್ಲಾಕ್ ಮಾಡಿದರ ಪರಿಣಾಮ ಚಾರ್ಮಾಡಿ ಘಾಟಿ ಜಲಪಾತಗಳ ಬಳಿ ಪೊಲೀಸರ ನಿಯೋಜನೆ.

ಚಿಕ್ಕಮಗಳೂರು : ಜಲಪಾತಗಳ ಬಳಿ ರಸ್ತೆ ಮಧ್ಯೆ ಗಾಡಿ ನಿಲ್ಲಿಸಿಕೊಂಡು ಕುಣಿಯುತ್ತಿದ್ದ ಪ್ರವಾಸಿಗರು ರೋಡ್ ಬ್ಲಾಕ್ ಮಾಡಿದರ ಪರಿಣಾಮ ಮೂಡಿಗೆರೆಯ ಚಾರ್ಮಾಡಿ ಘಾಟಿಯ ಜಲಪಾತಗಳ ಬಳಿ ಪೊಲೀಸರ ನಿಯೋಜಿಸಲಾಗಿದೆ .

ಜಲಪಾತಗಳ ಬಳಿ ರಸ್ತೆ ಮಧ್ಯೆ ಗಾಡಿ ನಿಲ್ಲಿಸಿಕೊಂಡು ಕುಣಿಯುತ್ತಿದ್ದ ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟಾದ ಪರಿಣಾಮ ಮತ್ತು ಜಾರುವ ಬಂಡೆಗಳ ಮೇಲೆ ಹತ್ತಿ ಫೋಟೋ ತೆಗೆದು ರೀಲ್ಸ್ ಮಾಡುವ ಜನರು ಹೆಚ್ಚಾಗಿದ್ದು ತುರ್ತು ವಾಹನಗಳು ಸರಿಯಾದ ಸಮಯಕ್ಕೆ ಹೋಗದೆ ಇರುವುದರಿಂದ ಈ ಸಮಸ್ಯೆ ಉಂಟಾಗಿದೆ .

ರಸ್ತೆ ಮಧ್ಯೆ ಕುಣಿಯೋ ಧಾವಂತದಲ್ಲಿ ವಾಹನಗಳಿಗೂ ಅಡ್ಡ ಹೋಗುತ್ತಿದ್ದರು,ರೋಗಿ ಹೊತ್ತ ಆಂಬುಲೆನ್ಸ್ ಕೂಡ ಪರದಾಟ ನಡೆಸಿತ್ತು,ಬಂಡೆ ಮೇಲಿಂದ ಬಿದ್ದು ಕೈ-ಕಾಲು ಮುರಿದುಕೊಂಡವರು ಇದ್ದರು .

ಜಾರೋ ಬಂಡೆ ಕೆಲವರ ಜೀವಕ್ಕೂ ಸಂಚಾಕಾರ ತಂದಿದ್ದು ಇದೀಗ ಜಲಪಾತಗಳ ಹೈವೆ ಪ್ಯಾಟ್ರೋಲ್ ಪೊಲೀಸರ ನಿಯೋಜನೆ ಮಾಡಲಾಗಿದೆ .

ಇಡೀ ದಿನ ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಲಿದ್ದಾರೆ .

RELATED ARTICLES

LEAVE A REPLY

Please enter your comment!
Please enter your name here

Most Popular