Sunday, January 25, 2026
Flats for sale
Homeರಾಜ್ಯಚಿಕ್ಕಮಗಳೂರು : ರಾಟ್‌ವೀಲರ್ ನಾಯಿ-ನಾಗರಹಾವಿನ ನಡುವೆ ಒಂದು ಗಂಟೆ ಕಾಲ ಭೀಕರ ಕಾಳಗ, ಕೊನೆಗೆ ಜೀವ...

ಚಿಕ್ಕಮಗಳೂರು : ರಾಟ್‌ವೀಲರ್ ನಾಯಿ-ನಾಗರಹಾವಿನ ನಡುವೆ ಒಂದು ಗಂಟೆ ಕಾಲ ಭೀಕರ ಕಾಳಗ, ಕೊನೆಗೆ ಜೀವ ಕಳೆದುಕೊಂಡ ಹಾವು -ನಾಯಿ.

ಚಿಕ್ಕಮಗಳೂರು : ತರೀಕೆರೆ ತಾಲ್ಲೂಕಿನ ಇಟ್ಟಿಗೆ ಗ್ರಾಮದಲ್ಲಿ ರಾಟ್‌ವೀಲರ್ ತಳಿಯ ನಾಯಿ ಮತ್ತು ನಾಗರಹಾವಿನ ನಡುವೆ ನಡೆದ ಭೀಕರ ಕಾಳಗ ನಡೆದಿದ್ದು ಕೊನೆಗೆ ಎರಡೂ ಜೀವ ಕಳೆದುಕೊಂಡಿವೆ.

ಸುಮಾರು ಒಂದು ಗಂಟೆ ಕಾಲ ನಡೆದ ಈ ಪೈಪೋಟಿ ಗ್ರಾಮಸ್ಥರಲ್ಲಿ ಆತಂಕ ಮತ್ತು ಅಚ್ಚರಿ ಮೂಡಿಸಿದೆ. ಗ್ರಾಮದ ನಿವಾಸಿಯೊಬ್ಬರ ಮನೆಯ ಆವರಣದಲ್ಲಿ ಈ ಘಟನೆ ನಡೆದಿದೆ. ಏಕಾಏಕಿ ಎದುರಾದ ನಾಗರಹಾವನ್ನು ಕಂಡ ನಾಯಿ ತನ್ನ ಸ್ವಭಾವದಂತೆ ಅದರ ಮೇಲೆ ದಾಳಿ ನಡೆಸಿದೆ. ಇದರಿಂದ ಹಾವು ಕೂಡ ಪ್ರತಿದಾಳಿ ನಡೆಸಿ ನಾಯಿಯನ್ನು ಹಲವು ಬಾರಿ ಕಚ್ಚಿದೆ. ಕಾಳಗದ ಅಂತ್ಯದಲ್ಲಿ ನಾಯಿ ತನ್ನ ದವಡೆಹಲ್ಲುಗಳಿಂದ ನಾಗರಹಾವನ್ನು ಸಂಪೂರ್ಣವಾಗಿ ಕಚ್ಚಿಕೊಂದಿದೆ. ನಾಗರಹಾವಿನ ವಿಷಕಾರಿ ಕಡಿತದಿಂದ ನಾಯಿ ಕೂಡ ತೀವ್ರವಾಗಿ ಗಾಯಗೊಂಡಿತ್ತು. ಹಾವನ್ನು ಸಾಯಿಸಿದ ಬಳಿಕ ನಾಯಿ ತನ್ನ ಬೋನಿಗೆ ತೆರಳಿ ಮಲಗಿಕೊಂಡಿದ್ದು, ಸ್ವಲ್ಪ ಸಮಯದ ಬಳಿಕ ಅಲ್ಲಿಯೇ ಉಸಿರು ಚೆಲ್ಲಿದೆ. ಹಾವಿನ ವಿಷ ನಾಯಿಯ ದೇಹದ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಚಿಕಿತ್ಸೆ ದೊರಕುವ ಮುನ್ನವೇ ನಾಯಿ ಮೃತಪಟ್ಟಿದೆ.

ಘಟನೆಯ ಬಳಿಕ ಮನೆಯವರು ನಾಗರಹಾವಿಗೆ ಶಾಸ್ತೊçÃಕ್ತವಾಗಿ ಅಂತ್ಯಸAಸ್ಕಾರ ನೆರವೇರಿಸಿದ್ದಾರೆ. ನಾಯಿ ತನ್ನ ಮಾಲಿಕರನ್ನು ಹಾಗೂ ಮನೆ ಆವರಣವನ್ನು ರಕ್ಷಿಸುವ ಪ್ರಯತ್ನದಲ್ಲಿ ಪ್ರಾಣ ತ್ಯಾಗ ಮಾಡಿದೆ. ಹಾವು ತನ್ನ ಪ್ರಾಣ ಉಳಿಸಿಕೊಳ್ಳಲು ಹೋರಾಟ ಮಾಡಿದ್ದು, ಈ ಘಟನೆ ಇಟ್ಟಿಗೆ ಗ್ರಾಮದಲ್ಲಿ ಸಂಭವಿಸಿದ್ದು, ನಾಯಿ-ಹಾವು ನಡುವಿನ ದುಃಖಕರ ಕಾಳಗದ ವೀಡಿಯೋ ವೈರಲ್ ಆಗಿದೆ

RELATED ARTICLES

LEAVE A REPLY

Please enter your comment!
Please enter your name here

Most Popular