Thursday, March 12, 2026
Flats for sale
Homeರಾಜ್ಯಚಿಕ್ಕಮಗಳೂರು : ಚಿರತೆಯನ್ನು ಸೆರೆಹಿಡಿದು, ಕೈಕಾಲುಗಳನ್ನು ಕಟ್ಟಿ ಬೈಕ್‌ನಲ್ಲಿ ಕೊಂಡು ಹೋದ ಧೀರ.

ಚಿಕ್ಕಮಗಳೂರು : ಚಿರತೆಯನ್ನು ಸೆರೆಹಿಡಿದು, ಕೈಕಾಲುಗಳನ್ನು ಕಟ್ಟಿ ಬೈಕ್‌ನಲ್ಲಿ ಕೊಂಡು ಹೋದ ಧೀರ.

ಚಿಕ್ಕಮಗಳೂರು : ಈ ಭಾಗದ ಗ್ರಾಮಸ್ಥರಲ್ಲಿ ಭೀತಿ ಮೂಡಿಸುವ ಚಿರತೆಗಳ ರಕ್ಷಣೆಗೆ ಅರಣ್ಯ ಇಲಾಖೆ ಸಕಲ ಕ್ರಮಗಳನ್ನು ಕೈಗೊಳ್ಳುತ್ತಿರುವ ಹೊತ್ತಿನಲ್ಲಿ ಯುವಕನೊಬ್ಬ ಏಕಾಂಗಿಯಾಗಿ ತನ್ನ ಮೇಲೆ ದಾಳಿ ಮಾಡಿದ ಚಿರತೆಯನ್ನು ಬಾಗಿವಾದಲ್ಲಿ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾನೆ.

ಮುತ್ತು ಅಲಿಯಾಸ್ ವೇಣುಗೋಪಾಲ್ ಎಂಬಾತ ಚಿರತೆಯ ಕೈಕಾಲುಗಳನ್ನು ಕಟ್ಟಿ ತನ್ನ ಮೋಟರ್‌ಬೈಕ್‌ನಲ್ಲಿ ತನ್ನ ಗ್ರಾಮಕ್ಕೆ ಸಾಗಿಸಿದ್ದಾನೆ. ವೇಣುಗೋಪಾಲ್ ಅವರು ಶುಕ್ರವಾರ ಬೆಳಗ್ಗೆ ಮೋಟಾರ್ ಬೈಕ್ ನಲ್ಲಿ ತಮ್ಮ ಜಮೀನಿಗೆ ತೆರಳುತ್ತಿದ್ದ ವೇಳೆ ಚಿರತೆ ದಾಳಿ ನಡೆಸಿದೆ. ವೇಣುಗೋಪಾಲ್ ಧೈರ್ಯ ತಂದುಕೊಂಡು ಓಡಿಸಲು ಯತ್ನಿಸಿದರು. ಆದರೆ, ಚಿರತೆ ಮತ್ತೆ ದಾಳಿ ಮಾಡಿದೆ. ಆತ್ಮರಕ್ಷಣೆಗಾಗಿ ವೇಣುಗೋಪಾಲ್ ಅದನ್ನು ಹಿಡಿದು ಮೋಟಾರ್ ಬೈಕ್‌ನಲ್ಲಿ ಹಗ್ಗದಿಂದ ಕೈಕಾಲುಗಳನ್ನು ಕಟ್ಟಿದ್ದರು.

ದೊಣ್ಣೆಗಳ ಆಸರೆಯಿಂದ ಚಿರತೆಯನ್ನು ತನ್ನ ಮೋಟಾರ್ ಬೈಕ್‌ಗೆ ಕಟ್ಟಿ ತನ್ನ ಗ್ರಾಮಕ್ಕೆ ತೆರಳಿದ್ದಾನೆ. ನಿವಾಸಿಗಳು ಅವರಿಗೆ ಪ್ರಥಮ ಚಿಕಿತ್ಸೆ ನೀಡಿದರು. ನಂತರ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿ ಚಿರತೆಯನ್ನು ವಶಕ್ಕೆ ಪಡೆದಿದ್ದಾರೆ. ಗಂಡಸಿಯ ಪಶು ಆಸ್ಪತ್ರೆಯಲ್ಲಿ ಚಿರತೆಗೆ ಚಿಕಿತ್ಸೆ ನೀಡಲಾಗುತ್ತಿದೆ.

ಕಾಡುಪ್ರಾಣಿಯನ್ನು ನೋಯಿಸುವುದು ಅಪರಾಧವಾಗಿದ್ದರೂ, ಅರಣ್ಯ ಕಾಯಿದೆ ಪ್ರಕಾರ, ವೇಣುಗೋಪಾಲ್ ಆತ್ಮರಕ್ಷಣೆಗಾಗಿ ಪ್ರಾಣಿಯನ್ನು ಹಿಡಿದಿರಬಹುದು ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular