ಚಿಕ್ಕಮಗಳೂರು : ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪರ್ಕಿಸುವ ಚಾರ್ಮಾಡಿ ಘಾಟ್ ತಿರುವಿನಲ್ಲೇ ಶನಿವಾರ ಕಾಡಾನೆ ಪ್ರತ್ಯಕ್ಷವಾಗಿ ಪ್ರವಾಸಿಗರಲ್ಲಿ ಆತಂಕ ಮತ್ತು ಕುತೂಹಲ ಮೂಡಿಸಿದೆ.
ರಸ್ತೆಯ ಮಧ್ಯದಲ್ಲೇ ಒಂದೇ ಸ್ಥಳದಲ್ಲಿ ನಿಂತಿದ್ದ ಆನೆ ಕೆಲಹೊತ್ತು ಅಲ್ಲೇ ತಂಗಿ ವಾಹನ ಸಂಚಾರಕ್ಕೂ ಅಡಚಣೆ ಉಂಟುಮಾಡಿತು. ಏಕಾಏಕಿ ಎದುರಾದ ಆನೆಯ ದೃಶ್ಯವನ್ನು ನೋಡಿದ ಪ್ರವಾಸಿಗರು ವಾಹನ ನಿಲ್ಲಿಸಿ ದೂರದಿಂದಲೇ ವೀಕ್ಷಿಸಿದರು. ಕೆಲವರು ಭಯದಿಂದ ಹಿಂದೆ ಸರಿದರೆ, ಇನ್ನೂ ಕೆಲವರು ತಮ್ಮ ಮೊಬೈಲ್ ಫೋನ್‌ನಲ್ಲಿ ಚಿತ್ರಿಸುವುದರಲ್ಲಿ ತೊಡಗಿದರು. ಆನೆ ತಿರುವಿನಲ್ಲೇ ದೀರ್ಘಕಾಲ ನಿಂತಿದ್ದರಿಂದ ರಸ್ತೆ ಬದಿಯಲ್ಲಿ ವಾಹನಗಳ ಸರತಿ ಉಂಟಾಯಿತು. ಪ್ರವಾಸಿಗರಲ್ಲಿ ಕೆಲಕಾಲ ಆತಂಕ ಆವರಿಸಿತ್ತು.