ಚಿಕ್ಕಮಗಳೂರು : ಈ ಘಾಟ್ ರಸ್ತೆಗಳೇ ಅಷ್ಟೇ ಮಳೆಗಾಲದಲ್ಲಿ ಬಿರುಕುಬಿಳುವುದು ಸಾಮಾನ್ಯವಾಗಿದೆ. ಘಾಟ್ ರಸ್ತೆಗಳಿಗೆ ಸುರಿಯುವ ಹಣದಿಂದ ಮತ್ತೊಂದು ಪ್ರತ್ಯೇಕ ರಸ್ತೆ ಮಾಡಬಹುದೆಂದು ತಜ್ಞರ ಮಾತು. 2019ರಲ್ಲಿ ಸುರಿದ ಭಾರೀ ಮಳೆಗೆ ಘಾಟ್ ಸುಮಾರು 100 ರಿಂದ 200 ಅಡಿ ಕುಸಿತ ಕಂಡಿತ್ತು. ಆ ಸ್ಥಳದಲ್ಲಿ ತಡೆಗೋಡೆ ನಿರ್ಮಾಣ ಮಾಡಲಾಗಿತ್ತು. ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಸ್ತೆಯ ಕೆಳಭಾಗದಲ್ಲಿ ಮಣ್ಣು ಕುಸಿಯುತ್ತಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ .ಈ ಬಗ್ಗೆ ಹೆಚ್ಚೆತ್ತುಕಕೊಂಡರೆ ಮುಂದೆ ನಡೆಯುವ ಅನಾಹುತ ತಪ್ಪಿಸಬಹುದೆಂದು ಸ್ಥಳೀಯರು ತಿಳಿಸಿದ್ದಾರೆ .
ಇದೀಗ ತಾತ್ಕಾಲಿಕವಾಗಿ ಪ್ಲಾಸ್ಟಿಂಗ್ ಕಾರ್ಯ ನಡೆಯುತ್ತಿದೆ. ಬಿರುಕು ಮುಚ್ಚಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ಲಾಸ್ಟಿಂಗ್ ಮಾಡುತ್ತಿದೆ ಆದರೆ ಅದು ಎಷ್ಟು ಸಮಯದವರೆಗೆ ಸುರಕ್ಷಿತವೆಂಬುದು ಅಧಿಕಾರಿಗಳಿಗೂ ತಿಳಿದಿಲ್ಲ. ಈ ರಸ್ತೆಯು ಚಿಕ್ಕಮಗಳೂರು-ಮಂಗಳೂರು ಸಂಪರ್ಕ ಕೊಂಡಿಯಾಗಿದ್ದು ಅಡಿಭಾಗದಲ್ಲಿ ಕುಸಿತವಾದರೆ ಎರಡು ಜಿಲ್ಲೆಗಳ ಸಂಪರ್ಕ ಕಡಿತವಾಗಲಿದೆ. ಕಳೆದ ಬಾರಿ ಮಣ್ಣು ಕುಸಿದ ಹಿನ್ನೆಲೆಯಲ್ಲಿ ಕಾಂಕ್ರೀಟ್ ವಾಲ್ ನಿರ್ಮಿಸಿ ರಸ್ತೆಗೆ ಬಂದೋಬಸ್ತ್ ಮಾಡಲಾಗಿತ್ತು. ಆದರೆ ಕಳಪೆ ಕಾಮಗಾರಿಯಿಂದ ಈ ರೀತಿ ರಸ್ತೆಗಳು ಬಿರುಕು ಬಿಡುತ್ತಿದೆ ಎಂದು ಸ್ಥಳೀಯ ನಿವಾಸಿ ಸುರೇಶ ತಿಳಿಸಿದ್ದಾರೆ.