ಚಿಕ್ಕಮಗಳೂರು : ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಅವರ ಚುನಾವಣಾ ಖರ್ಚಿಗೆ ಚುರುಮುರಿ ವ್ಯಾಪಾರಿಯೊಬ್ಬರು ಹಣ ನೀಡಿದ ಘಟನೆ ವರದಿಯಾಗಿದೆ.ಸರಳತೆಯಿಂದಲೇ ಗಮನ ಸೆಳೆಯುವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಚುರುಮುರಿ ಅಂಗಡಿಯ ವ್ಯಾಪಾರಿ ಲೋಕೇಶ್ ಬಾಬು ಎಂಬುವವರು ಎಲೆ-ಅಡಿಕೆ-ಬಾಳೆಹಣ್ಣುಗಳ ತಾಂಬೂಲದಲ್ಲಿ 25 ಸಾವಿರ ಹಣ ಇಟ್ಟು ಕೊಟ್ಟಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೋಟಾ ಶ್ರೀನಿವಾಸ ಪೂಜಾರಿ ಅವರು ಇಂದು ನಗರದ ವಿವಿದೆಡೆ ಪ್ರಚಾರ ಮಾಡುತ್ತಿದ್ದರು . ಈ ವೇಳೆ ಚುರುಮುರಿ ಅಂಗಡಿಗೆ ಭೇಟಿ ನೀಡಿದ್ದು ವ್ಯಾಪಾರಿ ಹಣ ನೀಡಿ ಗೆಲ್ಲುವಂತೆ ಶುಭ ಹಾರೈಸಿದ್ದಾರೆ. ರಾಜ್ಯ ಸರ್ಕಾರದಲ್ಲಿ ಈ ಹಿಂದೆ ಸಚಿವರಾಗಿದ್ದ, ಮೇಲ್ಮನೆಯಲ್ಲಿ ಈಗಲೂ ವಿರೋಧ ಪಕ್ಷದ ನಾಯಕರಾಗಿರುವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಬಿಜೆಪಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್ ನೀಡಿದೆ. ಶ್ರೀನಿವಾಸ ಪೂಜಾರಿ ಅವರಿಗೆ ಕ್ಷೇತ್ರ ಪ್ರವಾಸದ ವೇಳೆ ಭಾರಿ ಉತ್ಸಾಹದ ಸ್ವಾಗತ ಕಂಡುಬರುತ್ತಿದೆ ಎಂದು ತಿಳಿದುಬಂದಿದೆ.
ಸರಳ ಹಾಗೂ ಸಜ್ಜನ ವ್ಯಕ್ತಿತ್ವಕ್ಕೆ ಹೆಸರಾಗಿರುವ ಕೋಟಾ ಶ್ರೀನಿವಾಸ ಪೂಜಾರಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.ಈ ಬಗ್ಗೆ ಉಡುಪಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಜನರು ಗೆಲುವಿನ ವಿಶ್ವಾಸ ತೋರಲಿದ್ದಾರೆ ಎಂದು ಪೂಜಾರಿ ಅವರು ತಿಳಿಸಿದ್ದಾರೆ.ಚಿಕ್ಕಮಗಳೂರು ತಾಲೂಕಿನ ತೇಗೂರು ಸರ್ಕಲ್ ನಲ್ಲಿರುವ ಇಂದು ಪ್ರಚಾರಕ್ಕೆಂದು ಹೋದಾಗ ಲೊಕೇಶ್, ತನ್ನ ನೆಚ್ಚಿನ ನಾಯಕನಿಗೆ ಹಣ ನೀಡಿದ್ದಾರೆ.ಈ ಬಗ್ಗೆ ಸಾಮಾಜಿಕಜಾಲತಾಣದಲ್ಲಿ ಮೆಚ್ಚುಗೆ ದೊರೆತಿದೆ.