ಚಿಕ್ಕಬಳ್ಳಾಪುರ : ಜಿಲ್ಲೆಯ ವರದಹಳ್ಳಿ ಗ್ರಾಮದಲ್ಲಿ ಹಕ್ಕಿ ಜ್ವರ ಧೃಡಪಟ್ಟ ಹಿನ್ನೆಲೆ ವರದಹಳ್ಳಿ ಗ್ರಾಮದಲ್ಲಿ ಕೋಳಿಗಳ ಸಾಮೂಹಿಕ ಹತ್ಯೆಮಾಡಲಾಗಿದೆ. ಹಾಗೂ ಇನ್ನಿತರ ಗ್ರಾಮದಲ್ಲಿ ಉಳಿದ ಕೋಳಿಗಳ ವಶಕ್ಕೆ ಪಡೆದು ಕಾರ್ಯಾಚರಣೆ ನಡೆಸುತ್ತಿದ್ದಾರೆ.

400ಕ್ಕೂ ಹೆಚ್ಚು ಕೋಳಿಗಳು ಸಾಮೂಹಿಕ ಹತ್ಯೆಮಾಡಲಾಗಿದ್ದು ಪಶುಪಾಲನ ಇಲಾಖೆಯ ಅಧಿಕಾರಿಗಳು ಗ್ರಾಮದಲ್ಲಿ ಬೀಡು ಬಿಟ್ಟಿದ್ದಾರೆ. ಇಡೀ ರಾತ್ರಿಯು ಕಾರ್ಯಚರಣೆ ನಡೆಸಿ 40 ರಿಂದ 50 ಕೋಳಿಗಳು ವಶಪಡೆದಿದ್ದು ಅಧಿಕಾರಿಗಳು ಅಲರ್ಟ್ ಆಗಿದ್ದಾರೆ.
ಪಿಪಿಇ ಕಿಟ್ ಧರಿಸಿರುವ ಪಂಚಾಯಿತಿ ಸಿಬ್ಬAದಿಗಳು ಗ್ರಾಮದಲ್ಲಿ ಈಗಾಗಲೇ ಸೋಂಕು ನಿವಾರಕ ದ್ರಾವಣವನ್ನು ಸಿಂಪಡಣೆ ಮಾಡಿದ್ದು, ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಕರ‍್ಯಕರ್ತೆಯರು ಮನೆ ಮನೆಗೂ ತೆರಳಿ ಜನರಿಗೆ ಸೋಂಕಿನ ಲಕ್ಷಣಗಳಾದ ಕೆಮ್ಮು, ನೆಗಡಿ, ಜ್ವರ,ಗಂಟಲು ನೋವು ಇತರೆ ಲಕ್ಷಣಗಳ ಇರುವ ಗ್ರಾಮಸ್ಥರ ತಪಾಸಣೆ ನಡೆಸುತ್ತಿದ್ದಾರೆ.
ಇನ್ನು ಗ್ರಾಮದಲ್ಲಿನ ಸುಮಾರು 450 ನಾಟಿ ಕೋಳಿಗಳು ಇರುವುದಾಗಿ ಅಂದಾಜಿಸ ಲಾಗಿದ್ದು, ಈ ಪೈಕಿ 350 ಕ್ಕೂ ಹೆಚ್ಚು ಕೋಳಿ ಗಳನ್ನು ಹಿಡಿದು ನಾಶಪಡಿಸಲಾಗಿದೆ. ಉಳಿದ ಕೋಳಿಗಳ ಹಿಡಿಯಲು ಅಧಿಕಾರಿಗಳು ಸಿಬ್ಬಂದಿಯೊAದಿಗೆ ರಾತ್ರಿ ಕರ‍್ಯಾಚರಣೆ ನಡೆಸುತ್ತಿದ್ದಾರೆ. ಕೋಳಿಗಳ ನಾಶಕ್ಕೆ ಕೆಲವರು ವಿರೋಧಿಸಿದರೂ ಅವರನ್ನು ಮನವೊಲಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.