Sunday, February 22, 2026
Flats for sale
Homeರಾಜ್ಯಚಿಕ್ಕಬಳ್ಳಾಪುರ : ವರದಹಳ್ಳಿ ಗ್ರಾಮದಲ್ಲಿ ಕಾಣಿಸಿಕೊಂಡ ಶಂಕಿತ ಹಕ್ಕಿ ಜ್ವರ,ಅಲರ್ಟ್ ಆದ ಆರೋಗ್ಯ ಇಲಾಖೆ..!

ಚಿಕ್ಕಬಳ್ಳಾಪುರ : ವರದಹಳ್ಳಿ ಗ್ರಾಮದಲ್ಲಿ ಕಾಣಿಸಿಕೊಂಡ ಶಂಕಿತ ಹಕ್ಕಿ ಜ್ವರ,ಅಲರ್ಟ್ ಆದ ಆರೋಗ್ಯ ಇಲಾಖೆ..!

ಚಿಕ್ಕಬಳ್ಳಾಪುರ : ಜಿಲ್ಲೆಯ ವರದಹಳ್ಳಿ ಗ್ರಾಮದಲ್ಲಿ ಕಾಣಿಸಿಕೊಂಡ ಶಂಕಿತ ಹಕ್ಕಿ ಜ್ವರ ಕಾಣಿಸಿಕೊಂಡ ಹಿನ್ನೆಲೆ ಆರೋಗ್ಯ ಇಲಾಖೆ ಹಾಗೂ ಪಶು ಇಲಾಖೆ ಅಲರ್ಟ್ ಆದ ಮಾಹಿತಿ ದೊರೆತಿದೆ.

ವರದಹಳ್ಳಿ ಗ್ರಾಮದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಬೀಡುಬಿಟ್ಟಿದ್ದು ವರದಹಳ್ಳಿಯಲ್ಲಿ ಪಿಪಿಇ ಕಿಟ್ ಹಾಕಿಕೊಂಡು ಡಿಸಿ ಇನ್ಫೆಕ್ಷನ್ ಔಷಧಿ ಸಿಂಪಡಿಸುತ್ತಿರುವುದು ಕಂಡುಬಂದಿದೆ.ಕೋಳಿಗಳು ಏನಾದರೂ ಸತ್ತರೆ ಗುಂಡಿ ತೋಡಿ ಹೂತು ಹಾಕಿ ಅದರ ಮೇಲೆ ಡಿಡಿಟಿ ಪೌಡರ್ ಹಾಕುವಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಮನವಿ ಮಾಡಿ ಜನರಿಗೆ ಅರಿವು ಮೂಡಿಸುತ್ತಿರುವಕಾರ್ಯ ನಡೆಯುತ್ತಿದೆ.

ವರದಹಳ್ಳಿ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು ಬರ್ಡ್ ಫ್ಲೂ ಅಧ್ಯಯನಕ್ಕೆ ಪಶು ಸಂಗೋಪನ ಇಲಾಖೆಯಿಂದ ತಜ್ಞರು ಆಗಮಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular