ಚಿಕ್ಕಬಳ್ಳಾಪುರ : ಜಿಲ್ಲೆಯ ಹೊರವಲಯದ ಅಣಕನೂರು ಬಳಿ ಇರುವ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂಭಾಗ ಇಬ್ಬರು ಪೋಲಿಸ್ ಪೇದೆಗಳು ತಮ್ಮ ಕುಟುಂಬ ಪರಿವಾರ ಸಮೇತ ನಮಗೆ ನ್ಯಾಯ ನೀಡಿ ಎಂದು ಅಂಬೇಡ್ಕರ್ ಭಾವಚಿತ್ರ ಹಿಡಿದು ಧರಣಿ ನಡೆಸಿದರು.
ತಮಗೆ ಆಗಿರುವ ಅನ್ಯಾಯದ ಬಗ್ಗೆ ನ್ಯಾಯ ಒದಗಿಸಿಕೊಡುವಂತೆ ಒತ್ತಾಯಿಸಿ ಚಿಂತಾಮಣಿ ತಾಲೂಕಿನ ಚೇಳೂರು ಪೊಲೀಸ್ ಠಾಣೆಯ ಮುಖ್ಯಪೇದೆ ನರಸಿಂಹಮೂರ್ತಿ ಮತ್ತು ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯ ಪೇದೆ ಅಶೋಕ್ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರು ಕುಟುಂಬ ಸಮೇತರಾಗಿ ಆಗಮಿಸಿ ಪ್ರತಿಭಟಿಸಿದರು.
ಪೊಲೀಸ್ ವರಿಷ್ಠಾಧಿಕಾರಿಗಳಿಂದ ನಮಗೆ ಅನ್ಯಾಯವಾಗಿದೆ. ನಮ್ಮದಲ್ಲದ ತಪ್ಪಿಗೆ ಪೊಲೀಸ್ ವರಿಷ್ಠಾಧಿಕಾರಿಗಳು ನಮ್ಮನ್ನು ಸೇವೆಯಿಂದ ಅಮಾನತ್ತು ಮಾಡಿದ್ದಾರೆ. ಸೇವೆಯಿಂದ ಅಮಾನತ್ತು ಮಾಡಿ ೬ ತಿಂಗಳು ಆಗಿದೆ. ಅಮಾನತ್ತು ಆದೇಶ ಈವರೆಗೆ ಹಿಂಪಡೆದಿಲ್ಲ. ನಮ್ಮ ಮೇಲಿರುವ ಆರೋಪದ ಬಗ್ಗೆ ಸಂಬAಧಿಸಿದ ಅಧಿಕಾರಿಗಳು ನಿಷ್ಪಕ್ಷವಾಗಿ ತನಿಖೆ ನಡೆಸಿ ಕ್ರಮ ಕೈಗೊಳ್ಳಿ ಎಂದು ಪರಿಪರಿಯಾಗಿ ಬೇಡಿಕೊಂಡರು ನಮಗೆ ಜಿಲ್ಲಾ ಪೊಲೀಸ್
ವರಿಷ್ಠಾಧಿಕಾರಿಗಳಿಂದಲೇ ಅನ್ಯವಾಗಿದ್ದು ಇಲ್ಲಿ ಜಾತಿ ತಾರತಮ್ಯ ನಡೆಯುತ್ತಿದೆ ನಮ್ಮದಲ್ಲದ ತಪ್ಪಿಗೆ ನಮಗೆ ಅನ್ಯಾಯದ ಶಿಕ್ಷೆಯಿಂದ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂದೆ ನಮಗೆ ನ್ಯಾಯ ಕೊಡಿ ಎಂದು ಬೇಡುತ್ತಿದ್ದೇವೆ. ಎಂದು ಪೇದೆ ಅಶೋಕ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜ ಇಮಾಮ್ ಕಾಸಿಂ ಎದುರು ತಮ್ಮ ಅಳಲನ್ನು ತೊಡಕೊಂಡರು ಅಲ್ಲದೆ ನಮಗೆ ಈ ಪೊಲೀಸ್ ವರಿಷ್ಟಧಿಕಾರಿ ಕೆಲವರ್ಗದ ಜನ ಮೇಲ್ವರ್ಗದ ಜನ ಎಂಬಂತೆ ಜಾತಿ ತಾರತಮ್ಯ ಮಾಡುತ್ತಿದ್ದಾರೆ ನಿಮ್ಮಂತ ಕೆಳ ವರ್ಗದ ಜನಕ್ಕೆ ಅಧಿಕಾರ ಸಿಕ್ಕರೆ ನೀವು
ಹೀಗೆ ನಡೆದುಕೊಳ್ಳುವುದು ಎಂದು ದರ್ಪ ಮಾಡುತ್ತಾರೆ ನಿಷ್ಪಕ್ಷಪಾತವಾಗಿಯೇ ತನಿಖೆ ಮಾಡಿ ಸ್ವಾಮಿ ಎಂದು ಎಸ್ ಪಿ ಸಾಹೇಬರ ಬಳಿ ಪರಿಪರಿಯಾಗಿ ಬೇಡಿಕೊಂಡರು ನಮಗೊAದು ನ್ಯಾಯ ಇನ್ನೊಬ್ಬರಿಗೊಂದು ನ್ಯಾಯ ಮಾಡುತ್ತಿದ್ದಾರೆ ಜನರ ರಕ್ಷಣೆ ಮಾಡುವ ನಮಗೆ ನ್ಯಾಯ ಸಿಗಲಿಲ್ಲ ಎಂದಾದರೆ ನಮಗೆ ದಯಾ ಮರಣ ಕೊಡಿ ಎಂದು ಅಶೋಕ್ ಪರಿಪರಿಯಾಗಿ ಕಣ್ಣೀರು ಹಾಕಿಕೊಂಡು ಪೊಲೀಸ್ ಎಸ್ಪಿ ಕಚೇರಿ ಮುಂಭಾಗದಲ್ಲಿ ಅಳಲು ತೋಡಿಕೊಂಡರು.
ನನ್ನ ನಿವೇದನೆ ಹೇಳಿಕೊಳ್ಳಲು ಪೊಲೀಸ್ ವರಿಷ್ಠಾಧಿಕಾರಿಗಳು ಇಲ್ಲಿಗೆ ಬರಬೇಕು ಅಲ್ಲಿಯವರೆಗೂ ನಾನು ಎಲ್ಲಿಂದ ಕದಲುವುದಿಲ್ಲ ಎಂದು ಇಬ್ಬರು ಪೊಲೀಸ್ ಪೇದೆಗಳು ಪತ್ನಿ ಮಕ್ಕಳ ಜೊತೆಗೂಡಿ ತಮ್ಮ ಅಳಲು ಅಧಿಕಾರಿಗಳಿಗೆ ಹೇಳಿಕೊಂಡರು ಈ ವೇಳೆ ಪೊಲೀಸ್ ಉಪ ಅಧೀಕ್ಷಕ ಶಿವಕುಮಾರ್, ಸರ್ಕಲ್ ಇನ್ಸ್ಪೆಕ್ಟರ್ ಮಂಜುನಾಥ್ ಸೇರಿದಂತೆ ಇನ್ನಿತರ ಪೊಲೀಸ್ ಅಧಿಕಾರಿಗಳು ಇದ್ದರು.