ಚಿಕ್ಕಬಳ್ಳಾಪುರ : ಪೊಲೀಸ್ ಠಾಣೆ ಹಾಗೂ ಪೊಲೀಸ್ ಕ್ವಾಟ್ರಸ್ ಗೆ ಚಿರತೆ ನುಗ್ಗಿದ ಘಟನೆ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪೊಲೀಸ್ ಕ್ವಾಟ್ರಸ್ ಆವರಣದಲ್ಲಿ ಪ್ರತ್ಯಕ್ಷ ಗೊಂಡು ನಂತರ ಪೊಲೀಸ್ ಠಾಣೆ ಸಮೀಪ ಚಿರತೆ ಕಾಣಿಸಿಕೊಂಡಿದೆ.

ಜನನಿಬಿಡ ಪ್ರದೇಶದಲ್ಲಿ ಇದ್ದಕ್ಕಿದ್ದಂತೆ ಚಿರತೆ ಕಾಣಿಸಿಕೊಂಡ ಹಿನ್ನಲೇ ಜನತೆ ಆತಂಕಕ್ಕೆ ಒಳಗಾದ್ದು ಸುಮಾರು 1 ವರ್ಷದ ಚಿರತೆ ಎಂದು ಮಾಹಿತಿ ತಿಳಿದುಬಂದಿದೆ.
ಕ್ವಾಟ್ರಸ್ ನಲ್ಲಿದ್ದ ಗುಜರಿ ಕಾರಿನಲ್ಲಿ ಚಿರತೆ ಮಲಗಿದ್ದು ಚಿರತೆ ಪ್ರತ್ಯಕ್ಷವಾದ ಹಿನ್ನಲೇ ಆತಂಕಗೊಂಡ ಪೊಲೀಸರು ಹಾಗೂ ಸಾರ್ವಜನಿಕರು ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ರಕ್ಷಣೆಮಾಡಿದ್ದಾರೆ.


